Advertisement

ಪ್ರವಾಹಕ್ಕೆ ಸಿಲುಕಿರುವ 230 ಕುರಿಗಳು ಮತ್ತು ಕುರಿಗಾಹಿ ರಕ್ಷಣೆಗೆ NDRF ತಂಡ ಸಿದ್ಧತೆ

02:03 PM Aug 09, 2020 | keerthan |

ಯಾದಗಿರಿ: ಕೃಷ್ಣಾ ನದಿ ಪ್ರವಾಹದ ತಪ್ಪಲು ನಡುಗಡ್ಡೆಯಲ್ಲಿ 230 ಕುರಿಗಳೊಂದಿಗೆ ಸಿಕ್ಕಿ ಹಾಕಿಕೊಂಡಿರುವ ಕುರಿಗಾಹಿ ರಕ್ಷಣೆಗೆ ಕೇಂದ್ರದ ಎನ್ ಡಿಆರ್ ಎಫ್ ನ16 ಜನರ ತಂಡ  ನದಿ ತೀರಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಗೆ ತಯಾರಿ ನಡೆಸಿದ್ದಾರೆ.

Advertisement

ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ಯಾವ ಸ್ಥಳದಿಂದ ಕಾರ್ಯಾಚರಣೆ ನಡೆಸಿದರೆ, ಸೂಕ್ತ ಎಂಬುದರ ಬಗ್ಗೆ ಚರ್ಚೆ ನಡೆಸಿದ್ದಾರೆ.

ಸದ್ಯಕ್ಕೆ ಜಲಾಶಯದಿಂದ ನದಿಗೆ ಹರಿವು 2.20 ಲಕ್ಷ ಕ್ಯೂಸೆಕ್ ನಿಂದ 1.79 ಲಕ್ಷ ಕ್ಯೂಸೆಕ್ ಗೆ ಇಳಿಕೆಯಾಗಿದೆ.

ಕುರಿಗಾಹಿ ಟೋಪಣ್ಣ ಎಂಬವರು ಕುರಿಮೇಯಿಸಲು ನಡುಗಡ್ಡೆಗೆ ತೆರಳಿದ್ದರು. ಮೊದಲು 165 ಕುರಿಗಳಿವೆ ಎಂದು ಅಂದಾಜಿಸಲಾಗಿತ್ತು. ಆದರೆ ಟೋಪಣ್ಣ ಬಳಿ ಸದ್ಯ 230 ಕುರಿಗಳು ನಡುಗಡ್ಡೆಯಲ್ಲಿ ಸಿಲುಕಿದೆ ಎಂದು ತಿಳಿದುಬಂದಿದೆ.

ಸ್ಥಳದಲ್ಲಿ ಸುರಪುರ ಶಾಸಕ ರಾಜುಗೌಡ ಹಾಗೂ ತಾಲೂಕಾಡಳಿತ ಅಧಿಕಾರಿಗಳು ಸ್ಥಳದಲ್ಲೇ ಮುಕ್ಕಾಲು ಹೂಡಿದ್ದಾರೆ.

Advertisement

ಹೈದರಬಾದ ಎನ್ ಡಿ ಆರ್ ಎಫ್ 16 ಜನರ ತಂಡ ಎರಡು ಎರ್ ಬೋಟಗಳನ್ನು ಸಿದ್ದಪಡಿಸಿದ್ದು, ಅಗ್ನಿ ಶಾಮಕದಳದ ಒಂದು  ಬೋಟ್ ನದಿ ದಡದಲ್ಲಿ  ಇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next