ಹೊಸದಿಲ್ಲಿ: ಭಾರತದ ವಿಕೋಪ ಪರಿಹಾರ ಪಡೆ (ಎನ್‌ಡಿಆರ್‌ಎಫ್)ಯು ಸದ್ಯವೇ ಅಂತಾ ರಾಷ್ಟ್ರೀಯ ಮಾನ್ಯತೆಯುಳ್ಳ ಪ್ರಮಾಣೀಕರಣವನ್ನು ಪಡೆಯ ಲಿದ್ದು, ವಿಶ್ವಸಂಸ್ಥೆಯ ನಿಯೋಜಿತ ಅಂತಾರಾಷ್ಟ್ರೀಯ ವಿಕೋಪ ರಕ್ಷಣ ಕಾರ್ಯಾಚರಣೆಗಳ ಭಾಗವಾಗುವ ನಿರೀಕ್ಷೆಯಿದೆ ಎಂದು ಎನ್‌ಡಿಆರ್‌ಎಫ್ ಮಹಾನಿರ್ದೇಶಕರು ತಿಳಿಸಿದ್ದಾರೆ. ಸ್ವಿಜರ್‌ಲ್ಯಾಂಡ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಇಂಟರ್‌ನ್ಯಾಶನಲ್ ಸರ್ಚ್ ಆ್ಯಂಡ್ ರೆಸ್ಕ್ಯೂ ಅಡ್ವೈಸರಿ ಗ್ರೂಪ್ (ಐಎನ್‌ಎಸ್‌ಎಆರ್‌ಎಜಿ) ಈ ಪ್ರಮಾಣೀಕರಣವನ್ನು ನಡೆಸಲಿದೆ.
………………………………………..
ಐಟಿ ವಂಚನೆ ಪತ್ತೆಗೆ ವಿಶೇಷ ಘಟಕ :
ಹೊಸದಿಲ್ಲಿ: ಭಾರತೀಯರು ವಿದೇಶಗಳಲ್ಲಿ ಹೊಂದಿರುವ ಅಘೋಷಿತ ಆಸ್ತಿ ಮತ್ತು ಕಪ್ಪುಹಣದ ಬಗ್ಗೆ ಕೂಲಂಕಷ ತನಿಖೆ ನಡೆಸುವುದಕ್ಕಾಗಿ ಆದಾಯ ತೆರಿಗೆ ಇಲಾಖೆಯ ದೇಶವ್ಯಾಪಿ ತನಿಖಾ ಶಾಖೆಗಳಲ್ಲಿ ವಿಶೇಷ ಘಟಕ ಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ವಿದೇಶೀ ಆಸ್ತಿ ತನಿಖಾ ಘಟಕ (ಎಫ್ಎಐಯು)ಗಳನ್ನು ಐಟಿ ಇಲಾಖೆಯ 14 ತನಿಖಾ ನಿರ್ದೇಶನಾಲಯಗಳಲ್ಲಿ ಆರಂಭಿಸಲಾಗಿದೆ. ತೆರಿಗೆ ವಂಚನೆಯ ಬಗ್ಗೆ ಬೇಹು ಮಾಹಿತಿ ಸಂಗ್ರಹ, ದಾಳಿ ಮತ್ತು ಜಪ್ತಿ ನಡೆಸುವುದು ಈ ಘಟಕಗಳ ಪ್ರಾಥಮಿಕ ಹೊಣೆ.