ನವದೆಹಲಿ: ಮಾದಕ ದ್ರವ್ಯಗಳ ಸೇವನೆಯ ಚಟಗಳಿಗೆ ದೇಶದ ಯುವಜನರು ಬಲಿಯಾಗುವುದನ್ನು ತಡೆಯಲು ಕೇಂದ್ರ ಸರ್ಕಾರ ಹೊಸ ಕಾರ್ಯಕ್ರಮವನ್ನು ರೂಪಿಸಲಿದೆ.
ಇದಕ್ಕಾಗಿ, ರಾಷ್ಟ್ರೀಯ ಮಾದಕ ವಸ್ತು ಹಾಗೂ ವ್ಯಸನಕಾರಿ ಪದಾರ್ಥಗಳ ನಿಗ್ರಹ ಕಾಯ್ದೆಗೆ (ಎನ್‌ಡಿಪಿಎಸ್) ತಿದ್ದುಪಡಿ ಮಾಡುವ ಕುರಿತಾಗಿ ಹೊಸ ಮಸೂದೆಯನ್ನು ಸಿದ್ಧಪಡಿಸಲಾಗುತ್ತಿದೆ.
ಹೊಸ ಮಸೂದೆಯನ್ನು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಕಾಯ್ದೆಯಲ್ಲಿರುವ ತಿದ್ದುಪಡಿಗಳು, ಈಗಾಗಲೇ ಇದರಡಿ ದಾಖಲಾಗಿರುವ ಪ್ರಕರಣಗಳಿಗೆ ಅನ್ವಯವಾಗುವುದಿಲ್ಲ ಎಂದೂ ಸ್ಪಷ್ಟವಾಗಿ ಹೇಳಲಾಗಿದೆ.
ಇದನ್ನೂ ಓದಿ:ಹಕ್ಕುಗಳಿಗೆ ತೊಂದರೆಯದಾಗ ರಕ್ಷಣೆಗೆ ನಿಲ್ಲುವುದು ಪ್ರತಿಯೊಬ್ಬನ ಕರ್ತವ್ಯ: ಕೆ.ಸಿ.ಎನ್.ಸುರೇಶ್
ಸಂಭಾವ್ಯ ತಿದ್ದುಪಡಿ: ಮಾದಕ ವಸ್ತುಗಳಿಗೆ ದಾಸರಾಗಿರುವ ಯುವಜನರನ್ನು ಪುನರ್ವಸತಿ ಕೇಂದ್ರಗಳಲ್ಲಿ ಸೂಕ್ತ ಚಿಕಿತ್ಸೆ ಅಥವಾ ತರಬೇತಿ ನೀಡುವುದು, ಇಂಥ ತರಬೇತಿ- ಚಿಕಿತ್ಸೆಗಳಿಗೆ ಒಪ್ಪದವರನ್ನು ಶಿಕ್ಷೆಯ ರೂಪದಲ್ಲಿ ಸಮುದಾಯ ಸೇವೆಗಳಿಗೆ ಬಳಸಿಕೊಳ್ಳುವಂಥ ಅಂಶಗಳನ್ನು ಹೊಸ ಮಸೂದೆಯಲ್ಲಿ ಸೇರಿಸಲಾಗಿದೆ. ಇದಲ್ಲದೆ, ಮಾದಕ ವಸ್ತುಗಳ ಗಂಭೀರ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲು ಅವಕಾಶವಿರುವ ಎನ್‌ಡಿಪಿಎಸ್ ಕಾಯ್ದೆಯ 27ನೇ ಸೆಕ್ಷನ್‌ಗೂ ತಿದ್ದುಪಡಿ ತರಲು ನಿರ್ಧರಿಸಲಾಗಿದೆ ಎಂದು ಎಂದು ಮೂಲಗಳು ತಿಳಿಸಿವೆ.