ವಾಷಿಂಗ್ಟನ್: ಭಾರತೀಯ ಮೂಲದ ಡಾಕ್ಟರೇಟ್ ವಿದ್ಯಾರ್ಥಿ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿರುವ ಘಟನೆ ಅಮೆರಿಕದ ಒಹಿಯೋದಲ್ಲಿ ನಡೆದಿದ್ದು, ಇದೊಂದು ದುರಂತ, ಆಕಸ್ಮಿಕ, ಆಘಾತಕಾರಿ ಘಟನೆ ಎಂದು ಮೆಡಿಕಲ್ ಯೂನಿರ್ವಸಿಟಿ ಪ್ರಕಟನೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:Uttarkashi: ಮೆಷಿನ್ ನಲ್ಲಿ ತಾಂತ್ರಿಕ ದೋಷ- ಸುರಂಗಾ ರಕ್ಷಣಾ ಕಾರ್ಯಾಚರಣೆ ಮತ್ತೆ ಸ್ಥಗಿತ
ಭಾರತದ ಆದಿತ್ಯ ಅದ್ಲಾಖಾ(26ವರ್ಷ) ಸಿನ್ಸಿನಾಟಿ ಮೆಡಿಕಲ್ ಸ್ಕೂಲ್ ನಲ್ಲಿ ನಾಲ್ಕನೇ ವರ್ಷದ ಡಾಕ್ಟರೇಟ್ ವಿದ್ಯಾರ್ಥಿಯಾಗಿದ್ದರು ಎಂದು ಡಬ್ಲ್ಯುಎಕ್ಸ್ ಐಎಕ್ಸ್ ಟಿವಿ ವರದಿ ಮಾಡಿದೆ.
ಗೋಡೆಗೆ ಡಿಕ್ಕಿ ಹೊಡೆದ ಕಾರಿನೊಳಗೆ ಆದಿತ್ಯ ಪತ್ತೆಯಾಗಿದ್ದ ಎಂದು ಸಿನ್ಸಿನಾಟಿ ಪೊಲೀಸ್ ಲೆಫ್ಟಿನೆಂಟ್ ಜೋನಾಥನ್ ಕನ್ನಿಂಗ್ ಹ್ಯಾಮ್ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿರುವುದು ಕಂಡುಬಂದಿತ್ತು.
ಗುಂಡಿನ ದಾಳಿಗೆ ಒಳಗಾಗಿರುವ ಕಾರೊಂದು ಪತ್ತೆಯಾಗಿದ್ದು, ಅದರೊಳಗೆ ವ್ಯಕ್ತಿಯೊಬ್ಬರು ಮೃತಪಟ್ಟಿರುವುದಾಗಿ ವಾಹನದ ಚಾಲಕರೊಬ್ಬರು 9111ಗೆ ಕರೆ ಮಾಡಿ ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ.
ಕೂಡಲೇ ಸ್ಥಳಕ್ಕಾಮಿಸಿದ್ದ ಪೊಲೀಸರು ಪರಿಶೀಲನೆ ನಡೆಸಿದಾಗ ಆದಿತ್ಯ ಉಸಿರಾಡುತ್ತಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಎರಡು ದಿನದ ಬಳಿಕ ಆದಿತ್ಯ ಕೊನೆಯುಸಿರೆಳೆದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.