Advertisement

ಆಕ್ಲೆಂಡ್‌ನ‌ಲ್ಲಿ ಗೆದ್ದು ಬೀಗಿದ ಭಾರತ

12:30 AM Feb 09, 2019 | |

ಆಕ್ಲೆಂಡ್‌: ಕೃಣಾಲ್‌ ಪಾಂಡ್ಯ ಅವರ ನಿಯಂತ್ರಿತ ಬೌಲಿಂಗ್‌, ರೋಹಿತ್‌ ಶರ್ಮ ಅವರ ಅಬ್ಬರದ ಆರಂಭ ಹಾಗೂ ರಿಷಬ್‌ ಪಂತ್‌ ಅವರ ಪರಿಪೂರ್ಣ ಫಿನಿಶಿಂಗ್‌ ಸಾಹಸ ದಿಂದ 2ನೇ ಟಿ20 ಪಂದ್ಯದಲ್ಲಿ ಭಾರತ ಆತಿಥೇಯ ನ್ಯೂಜಿಲೆಂಡಿಗೆ ತಿರುಗೇಟು ನೀಡಿದೆ. 7 ವಿಕೆಟ್ ಜಯದೊಂದಿಗೆ ಸರಣಿಯನ್ನು ಸಮ ಬಲಕ್ಕೆ ತರುವಲ್ಲಿ ಯಶಸ್ವಿಯಾಗಿದೆ.

Advertisement

ವೆಲ್ಲಿಂಗ್ಟನ್‌ ಪಂದ್ಯದಂತೆ ಶುಕ್ರವಾರ ಆಕ್ಲೆಂಡ್‌ನ‌ ‘ಈಡನ್‌ ಪಾರ್ಕ್‌’ನಲ್ಲೂ ನ್ಯೂಜಿಲೆಂಡ್‌ ಮೊದಲು ಬ್ಯಾಟಿಂಗ್‌ ನಡೆಸಿತು. ಆದರೆ ಇನ್ನೂರರ ಗಡಿ ದಾಟಲು ಭಾರತದ ಬೌಲರ್‌ಗಳು ಬಿಡಲಿಲ್ಲ. ವಿಲಿಯಮ್ಸನ್‌ ಪಡೆಗೆ ಗಳಿಸಲು ಸಾಧ್ಯವಾದದ್ದು 8ಕ್ಕೆ 158 ರನ್‌ ಮಾತ್ರ. ಯಾವುದೇ ಒತ್ತಡಕ್ಕೊಳಗಾ ಗದೆ ಜವಾಬಿತ್ತ ಭಾರತ 18.5 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 162 ರನ್‌ ಬಾರಿಸಿ ವಿಜಯೋತ್ಸವ ಆಚರಿಸಿತು.

ಸಿಡಿದ ರೋಹಿತ್‌: ಭಾರತದ ಚೇಸಿಂಗ್‌ ವೇಳೆ ರೋಹಿತ್‌ ಶರ್ಮ ಆಕ್ರಮಣಕಾರಿ ಆಟಕ್ಕಿಳಿದರು. ಶಿಖರ್‌ ಧವನ್‌ ಕೂಡ ಸಿಡಿದು ನಿಂತರು. ಇವರಿಂದ 9.2 ಓವರ್‌ಗಳಲ್ಲಿ 79 ರನ್‌ ಒಟ್ಟುಗೂಡಿತು. ಆಗ 29 ಎಸೆತಗಳಿಂದ ಭರ್ತಿ 50 ರನ್‌ ಬಾರಿಸಿದ ರೋಹಿತ್‌ ಅವರಿಗೆ ಸೋಧಿ ಬಲೆ ಬೀಸಿದರು. ರೋಹಿತ್‌ 4 ಸಿಕ್ಸರ್‌, 3 ಬೌಂಡರಿ ಬಾರಿಸಿ ಅಬ್ಬರಿಸಿದ್ದರು.

ಪಂತ್‌-ಧೋನಿ ಅಜೇಯ ಆಟ: 4ನೇ ವಿಕೆಟಿಗೆ ಜತೆಗೂಡಿದ ಪಂತ್‌ ಮತ್ತು ಧೋನಿ ಅಜೇಯ ಆಟದ ಮೂಲಕ ಭಾರತದ ಕೆಲಸವನ್ನು ಸುಲಭಗೊಳಿಸಿದರು. ಭರ್ಜರಿ ಜೋಶ್‌ನಲ್ಲಿದ್ದ ಪಂತ್‌ ಕೆಲವು ಆಕರ್ಷಕ ಹೊಡೆತಗಳ ಮೂಲಕ ರಂಜಿಸಿದರು. ಸೌದಿ ಎಸೆತವನ್ನು ಒಂದೇ ಕೈಯಿಂದ ಸಿಕ್ಸರ್‌ಗೆ ಅಟ್ಟಿದ್ದು, ಕ್ಯುಗೆಲೀನ್‌ ಎಸೆತವನ್ನು ‘ಬೌಲರ್ ಬ್ಯಾಕ್‌ ಡ್ರೈವ್‌’ ಫೋರ್‌ಗೆ ರವಾನಿಸಿ ಭಾರತದ ಗೆಲುವನ್ನು ಸಾರಿದ್ದೆಲ್ಲ ಪಂತ್‌ ಪರಾಕ್ರ ಮಕ್ಕೆ ಸಾಕ್ಷಿಯಾಗಿತ್ತು. ಪಂತ್‌ಕೊಡುಗೆ 28 ಎಸೆತಗಳಿಂದ ಅಜೇ ಯ 40 ರನ್‌. ಧೋನಿ 17 ಎಸೆತ ನಿಭಾಯಿಸಿ ಅಜೇಯ 20 ರನ್‌ ಹೊಡೆದರು. ಇದರಲ್ಲಿದ್ದದ್ದು ಒಂದು ಬೌಂಡರಿ ಮಾತ್ರ. ಪಂತ್‌-ಧೋನಿ 5.1 ಓವರ್‌ಗಳಲ್ಲಿ ಮುರಿಯದ 4ನೇ ವಿಕೆಟಿಗೆ 44 ರನ್‌ ಸೇರಿಸಿದರು.

ಕೃಣಾಲ್‌ ಪಾಂಡ್ಯ ಕಡಿವಾಣ: ಕಿವೀಸ್‌ಗೆ ಕಡಿವಾಣ ಹಾಕುವಲ್ಲಿ ಸ್ಪಿನ್ನರ್‌ ಕೃಣಾಲ್‌ ಪಾಂಡ್ಯ ಪಾತ್ರ ಮಹತ್ವದ್ದಾಗಿತ್ತು. ಅವರು 4 ಓವರ್‌ಗಳ ಪೂರ್ತಿ ಕೋಟಾದಲ್ಲಿ 28 ರನ್ನಿತ್ತು 3 ಪ್ರಮುಖ ವಿಕೆಟ್ ಹಾರಿಸಿದರು. ಕೃಣಾಲ್‌ ಮೋಡಿಗೆ ಸಿಲುಕಿದವರೆಂ ದರೆ ಕಾಲಿನ್‌ ಮನ್ರೊ, ಡ್ಯಾರಿಲ್‌ ಮಿಚೆಲ್‌, ಕೇನ್‌ ವಿಲಿಯಮ್ಸನ್‌.

Advertisement

ರೋಹಿತ್‌ ದಾಖಲೆ
•ಟಿ20 ಕ್ರಿಕೆಟ್‌ನಲ್ಲಿ ರೋಹಿತ್‌ ಶರ್ಮ ಸರ್ವಾಧಿಕ ರನ್‌ ಬಾರಿಸಿದರು (2,288). ಮಾರ್ಟಿನ್‌ ಗಪ್ಟಿಲ್‌ ಅವರ 2,272 ರನ್ನುಗಳ ದಾಖಲೆ ಪತನಗೊಂಡಿತು.

•ಟಿ20ಯಲ್ಲಿ 100 ಸಿಕ್ಸರ್‌ ಬಾರಿಸಿದ 3ನೇ ಆಟಗಾರನೆನಿಸಿದರು (102) ರೋಹಿತ್‌ . ಗೇಲ್‌ ಮತ್ತು ಗಪ್ಟಿಲ್‌ 103 ಸಿಕ್ಸರ್‌ ಸಿಡಿಸಿ ಜಂಟಿ ಅಗ್ರಸ್ಥಾನದಲ್ಲಿದ್ದಾರೆ.

•ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹಿತ್‌ 349 ಸಿಕ್ಸರ್‌ ಬಾರಿಸಿ ಭಾರತೀಯ ದಾಖಲೆ ಬರೆ ದರು. ಧೋನಿ ಅವರ 348 ಸಿಕ್ಸರ್‌ಗಳ ದಾಖಲೆ ಪತನಗೊಂಡಿತು.

•ರೋಹಿತ್‌ ನಾಯಕನಾಗಿ ಮೊದಲ 14 ಪಂದ್ಯಗಳಲ್ಲಿ ಅತೀ ಹೆಚ್ಚು 12 ಗೆಲುವು ದಾಖಲಿಸಿದ ಮೈಕಲ್‌ ಕ್ಲಾರ್ಕ್‌ ಮತ್ತು ಸಫ‌ರ್ರಾಜ್‌ ದಾಖಲೆ ಸರಿದೂಗಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next