ಮುಂಬೈ : ದಾದ್ರಾ ಹಾಗೂ ಹವೇಲಿ ನಗರದ ಪಕ್ಷೇತರ ಸಂಸದ ಮೋಹನ್ ದೇಲ್ಕರ್ ಇಂದು(ಸೊಮವಾರ, ಫೆ.22) ಮುಂಬೈನ ಖಾಸಗಿ ಹೋಟೇಲ್ ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯಿಂದ ಆಪ್ತಹತ್ಯೆ ಎಂದು ತಿಳಿದು ಬಂದಿದ್ದು, ಮುಂಬೈನ ಮೆರೈಬ ಡ್ರೈವ್ ಹೊಟೇಲ್ ನಲ್ಲಿ ಆತ್ಮ ಹತ್ಯೆಗೆ ಮೋಹನ್(58) ಶರಣಾಗಿದ್ದಾರೆ. ಸುಸೈಡ್ ಲೆಟರ್ ಕೂಡ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಓದಿ: ಮುದ್ದೇಬಿಹಾಳ ಸಾವಯವ, ಸಮಗ್ರ ಕೃಷಿ ತರಬೇತಿ, ಸಂಶೋಧನೆ ಕೇಂದ್ರಕ್ಕೆ ಮನವಿ: ನಡಹಳ್ಳಿ
ಪೋಸ್ಟ್ ಮಾರ್ಟಮ್ ಆದ ಬಳಿಕವೇ ಆತ್ಮ ಹತ್ಯೆಗೆ ಮೂಲ ಕಾರಣ ಏನು ಎನ್ನುವುದು ತಿಳಿಯುತ್ತದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.
ಮೋಹನ್, ಏಳು ಅವಧಿಗೆ ಸಂಸದರಾಗಿದ್ದರು. ಈ ಹಿಂದೆ ಅವರು ಕಾಂಗ್ರೆಸ್ ನಲ್ಲಿದ್ದರು. 2019 ರಲ್ಲಿ ರಾಷ್ಟ್ರೀಯ ಚುನಾವಣೆಗೆ ಪಕ್ಷೇತರವಾಗಿ ಸ್ಪರ್ಧಿಸಬೇಕೆಂದು ಕಾಂಗ್ರೆಸ್ ನಿಂದ ಹೊರ ಬರುವಾಗ ದಾದ್ರಾ ಹಾಗೂ ಹವೆಲಿ ನಗರದ ಕಾಂಗ್ರಸ್ ಅಧ್ಯಕ್ಷರಾಗಿದ್ದರು.
ಅವರು ಸಾರ್ವಜನಿಕ ಕುಂದುಕೊರತೆ, ಕಾನೂನು ಮತ್ತು ನ್ಯಾಯ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದರು ಮತ್ತು ಗೃಹ ವ್ಯವಹಾರಗಳ ಸಚಿವಾಲಯದ ಸಮಾಲೋಚನಾ ಸಮಿತಿಯ ಸದಸ್ಯರಾಗಿದ್ದರು.
ಓದಿ: ಉತ್ತಮ ಶಿಕ್ಷಣದಿಂದ ಮಾದರಿ ವ್ಯಕ್ತಿತ್ವ ನಿರ್ಮಾಣ