Advertisement

ಎನ್‌ಡಿಎಗೆ 296 ಸ್ಥಾನ ಖಚಿತ; ಇಂಡಿಯಾ ಟುಡೇ ಮೂಡ್‌ ಆಫ್ ದ ನೇಷನ್‌ ವರದಿ

11:30 AM Jan 21, 2022 | Team Udayavani |

ನವದೆಹಲಿ: ತಕ್ಷಣವೇ ಲೋಕಸಭೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎಗೆ 296 ಸ್ಥಾನಗಳಲ್ಲಿ ಜಯ ಲಭಿಸಲಿದೆ. ಹೀಗೆಂದು “ಇಂಡಿಯಾ ಟುಡೇ’ ಆಂಗ್ಲ ಸುದ್ದಿವಾಹಿನಿ ನಡೆಸಿದ “ಮೂಡ್‌ ಆಫ್ ದ ನೇಷನ್‌’ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

Advertisement

ಇದನ್ನೂ ಓದಿ:ಪುಷ್ಪ ಚಿತ್ರದ ಪ್ರೇರಣೆ : ಕೊಲೆ ಮಾಡಿ ವೈರಲ್ ಆಗಲು ಬಯಸಿದ್ದ ಬಾಲಕರು!

ಲೋಕಸಭೆ ಯಲ್ಲಿ ಒಟ್ಟು 543 ಸ್ಥಾನಗಳಿದ್ದು, ಯಾವುದೇ ಪಕ್ಷ ಅಥವಾ ಮೈತ್ರಿಕೂಟಕ್ಕೆ ಸರ್ಕಾರ ರಚಿಸಲು 272 ಸ್ಥಾನಗಳ ಅಗತ್ಯವಿದೆ. ಬಿಜೆಪಿಗೆ ಏಕಾಂಗಿಯಾಗಿ 271 ಸ್ಥಾನಗಳು ಸಿಗುವ ಸಾಧ್ಯತೆಗಳಿವೆ ಎಂದು ಸಮೀಕ್ಷೆಯಲ್ಲಿ ಅಂದಾಜು ಮಾಡಲಾಗಿದೆ.

ವಿಧಾನಸಭಾ ಚುನಾವಣೆ ನಡೆಯಲಿರುವ ಐದು ರಾಜ್ಯಗಳಾದ ಉತ್ತರ ಪ್ರದೇಶ ಗೋವಾ, ಉತ್ತರಾಖಂಡ, ಮಣಿಪುರ ಹಾಗೂ ಪಂಜಾಬ್‌ಗಳಲ್ಲಿ ನಡೆಸಲಾದ ಎನ್‌ಡಿಎಗೆ 296 ಸ್ಥಾನ ಖಚಿತ ಇಂಡಿಯಾ ಟುಡೇ ಮೂಡ್‌ ಆಫ್ ದ ನೇಷನ್‌ ವರದಿ ಸಮೀಕ್ಷೆಯಲ್ಲಿ ಪಂಜಾಬ್‌ ಹೊರತುಪಡಿಸಿದಂತೆ ಉಳಿದ ನಾಲ್ಕು ರಾಜ್ಯಗಳ ಜನರು ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಮತ್ತೂಮ್ಮೆ ಅಧಿಕಾ ರಕ್ಕೆ ಬರಲೆಂದು ಆಶಿಸಿದ್ದಾರೆ.

ಅದ್ಭುತ ಸಾಧನೆ: “ಕೊರೊನಾ ಅಲೆಯನ್ನು ನಿರ್ವಹಿಸುತ್ತಿರುವ ರೀತಿ, ರಾಮಮಂದಿರ ನಿರ್ಮಾಣ ಅಥವಾ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿಯಂಥ ಐತಿಹಾಸಿಕ ಸಾಧನೆಗಳಿಗಿಂತ ಅದ್ಭುತ ಸಾಧನೆಯಾಗಿದೆ’ ಎಂಬ ಕೇಂದ್ರ ಸರ್ಕಾರಕ್ಕೆ ಜನರು
ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಜನರಲ್ಲಿ ಶೇ. 22ರಷ್ಟು ಮಂದಿ ಕೊರೊನಾ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಶೇ. 16ರಷ್ಟು ಜನರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವೇ ಮೋದಿ ಸರ್ಕಾರದ ಮಹತ್ಸಾಧನೆ ಎಂದಿದ್ದಾರೆ. ಶೇ. 12ರಷ್ಟು ಜನರು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ್ದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಒಲವು: ಎನ್‌ಡಿಎ ಸರ್ಕಾರದ ಕಾರ್ಯವೈಖರಿಯ ಬಗ್ಗೆ 2021ರ ಆಗಸ್ಟ್‌ ನಲ್ಲಿ ನಡೆಸಲಾಗಿದ್ದ “ಮೂಡ್‌ ಆಫ್ ದ ನೇಷನ್‌’ ಸಮೀಕ್ಷೆಯಲ್ಲಿ ಬಂದಿದ್ದಕ್ಕಿಂತ ಹೆಚ್ಚು ಮನ್ನಣೆ ಹೊಸ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಈ ಬಾರಿ ಎನ್‌ಡಿಎ ಕಾರ್ಯವೈಖರಿ ಬಗ್ಗೆ ಶೇ. 59 ಜನರು ತೃಪ್ತಿ ವ್ಯಕ್ತಪಡಿಸಿದ್ದರೆ, ಶೇ. 26ರಷ್ಟು ಜನರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. 2021ರ ಆಗಸ್ಟ್‌ ನಲ್ಲಿ ಎನ್‌ಡಿಎ ಕಾರ್ಯವೈಖರಿ ಬಗ್ಗೆ ಶೇ. 53 ಜನರು ತೃಪ್ತಿ ವ್ಯಕ್ತಪಡಿಸಿದ್ದರೆ, ಶೇ. 17ರಷ್ಟು ಜನ ಅತೃಪ್ತಿ ವ್ಯಕ್ತಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next