Advertisement

‘ರೆಡ್ ಹಾಟ್ ಗರ್ಲ್ಸ್’ಎಂದು ಟ್ವೀಟ್ : ಸ್ಪೈಸ್ ಜೆಟ್ ವಿರುದ್ದ ಮಹಿಳಾ ಆಯೋಗ ಕಿಡಿ

05:45 PM Dec 21, 2022 | Team Udayavani |

ನವದೆಹಲಿ : ಮಹಿಳಾ ಫ್ಲೈಟ್ ಅಟೆಂಡೆಂಟ್‌ಗಳನ್ನು “ರೆಡ್ ಹಾಟ್ ಗರ್ಲ್ಸ್” ಎಂದು ಬರೆದು ಮಾಡಲಾಗಿರುವ ಪೋಸ್ಟ್ ಅನ್ನು ತೆಗೆದುಹಾಕುವಂತೆ ರಾಷ್ಟ್ರೀಯ ಮಹಿಳಾ ಆಯೋಗವು ಸ್ಪೈಸ್ ಜೆಟ್ ಗೆ ತಾಕೀತು ಮಾಡಿದೆ.

Advertisement

ಈ ಸಂಬಂಧ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಏರ್‌ಲೈನ್ಸ್ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಹಿರಿಯ ನಟ ಧರ್ಮೇಂದ್ರ ಅವರು ವಿಮಾನವೊಂದರಲ್ಲಿ ಪ್ರಯಾಣಿಸುತ್ತಿರುವ ವೇಳೆ ಸಿಬಂದಿಯೊಂದಿಗೆ ಕ್ಲಿಕ್ಕಿಸಿ ಕೊಂಡಿರುವ ಚಿತ್ರವನ್ನು ಸ್ಪೈಸ್ ಜೆಟ್ ಹಂಚಿಕೊಂಡಿತ್ತು.

“ನಮ್ಮ ರೆಡ್-ಹಾಟ್ ಹುಡುಗಿಯರೊಂದಿಗೆ ಗರಂ-ಧರಮ್” ಎಂದು ಬರೆದಿರುವ ಏರ್‌ಲೈನ್ಸ್ ಟ್ವೀಟ್‌ಗೆ ಮಹಿಳಾ ಆಯೋಗ(NCW) ತೀವ್ರ ಆಕ್ಷೇಪ ವ್ಯಕ್ತ ಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next