ಮುಂಬೈ: ಮಹಾರಾಷ್ಟ್ರದಲ್ಲಿ ಶನಿವಾರ ನಡೆದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಯಾರ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದ ಮಾನಿಕ್ ರಾವ್ ಕಾಕಟೆ ಇಂದು ರೆನೈಸ್ಸಾನ್ಸ್ ಹೋಟೆಲ್ ಬಳಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ಧಾರೆ.
ಇದರೊಂದಿಗೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಜೊತೆ ಕಾಣಿಸಿಕೊಂಡ ಶಾಸಕರಲ್ಲಿ ಇಳಿಕೆಯಾಗುತ್ತಿದೆ.
ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ ಸಿಪಿ) ಶಾಸಕರು ಈ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದು, ಮುಖ್ಯಸ್ಥ ಶರದ್ ಪವಾರ್ ಕೂಡಾ ಅಲ್ಲೇ ಶಾಸಕರ ಜೊತೆಗಿದ್ದಾರೆ.
ಶನಿವಾರ ಎನ್ ಸಿಪಿ ನಾಯಕ ಅಜಿತ್ ಪವಾರ್ ತನ್ನ ಕೆಲ ಬೆಂಬಲಿಗರೊಂದಿಗೆ ಬಿಜೆಪಿಗೆ ಬೆಂಬಲ ನೀಡಿ ಸರಕಾರ ರಚನೆಗೆ ಕಾರಣರಾಗಿದ್ದರು. ಆದರೆ ನಿನ್ನೆ ಬೆಳಿಗ್ಗೆಯಿಂದ ಕೆಲ ಶಾಸಕರು ಶರದ್ ಪವಾರ್ ಅವರಿಗೆ ಬೆಂಬಲ ನೀಡಿ ಅಜಿತ್ ಬಣದಿಂದ ಹೊರಬಂದಿದ್ದಾರೆ.