Advertisement
ರಾಜ್ಯದಲ್ಲಿ 5 ವರ್ಷಗಳ ಕಾಲ ಶಾಶ್ವತ ಸರಕಾರ ರಚನೆಯಾಗುತ್ತದೆ – ಪವಾರ್ನಾಗಪುರರದ ಕಾಂಗ್ರೆಸ್ ಶಾಸಕ ನಿತಿನ್ ರಾವುತ್ ಅವರ ನಿವಾಸಕ್ಕೆ ಆಗಮಿಸಿದ ಪವಾರ್, ಅವರು, ಮಧ್ಯಂತರ ಚುನಾವಣೆಯ ಸಾಧ್ಯತೆಯನ್ನು ತಳ್ಳಿಹಾಕಿದರು. ಸರಕಾರವಾಗಲು ಸ್ವಲ್ಪ ವಿಳಂಬವಾಗಿದ್ದರೂ, 5 ವರ್ಷಗಳ ಕಾಲ ರಾಜ್ಯದಲ್ಲಿ ಶಾಶ್ವತ ಸರಕಾರ ರಚನೆಯಾಗುತ್ತದೆ ಎಂದು ಅವರು ಹೇಳಿದರು, ಮಹಾರಾಷ್ಟ್ರದಲ್ಲಿ ಸರಕಾರ ರಚನೆಯ ಕುರಿತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ದಿಲಿಯಲ್ಲಿ ಸಭೆ ನಡೆಸಬೇಕಾಗಿತ್ತು. ಆದರೆ ಪವಾರ್ ಅವರು ಸೋನಿಯಾ ಅವರನ್ನು ಭೇಟಿ ಮಾಡಲು ನವೆಂಬರ್ 18 ರಂದು ದಿಲ್ಲಿ ತೆರಳಲಿದ್ದಾರೆ ಎನ್ನಲಾಗಿದೆ. ಮೂರು ಪಕ್ಷಗಳ ನಡುವೆ ಸರಕಾರ ರಚನೆಯಾಗುವ ಮೊದಲೇ, ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಕರಡನ್ನು ಇನ್ನೂ ಮೊಹರು ಮಾಡಬೇಕಾಗಿದೆ.
ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ನಡುವೆ ಕನಿಷ್ಠ ಹಂಚಿಕೆಯ ಕಾರ್ಯಕ್ರಮವನ್ನು ಒಪ್ಪಲಾಗಿದೆ. ರೈತರ ಸಾಲ ಮನ್ನಾ, ಬೆಳೆ ವಿಮಾ ಯೋಜನೆಯ ಪರಿಶೀಲನೆ, ಉದ್ಯೋಗ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಬಿ.ಆರ್.ಅಂಬೇಡ್ಕರ್ ಸ್ಮಾರಕ ಈ ಕಾರ್ಯಕ್ರಮದಲ್ಲಿ ಸೇರಿವೆ. ಅದೇ ಸಮಯದಲ್ಲಿ, ಶಿವಸೇನೆ ಸಂಪೂರ್ಣ ಅವಧಿಗೆ ಮುಖ್ಯಮಂತ್ರಿ ಹು¨ªೆಯನ್ನು ಪಡೆಯಲಿದೆ. ಎನ್‌ಸಿಪಿ ಮತ್ತು ಕಾಂಗ್ರೆಸ್ ಉಪ ಮುಖ್ಯಮಂತ್ರಿ ಸ್ಥಾನಗಳನ್ನು ಹಂಚಿಕೊಳ್ಳಲಿದೆ. ಇದಲ್ಲದೆ, ಶಿವಸೇನೆಗೆ 14 ಸಚಿವ ಸ್ಥಾನಗಳು, ಎನ್‌ಸಿಪಿಗೆ 14 ಮತ್ತು ಕಾಂಗ್ರೆಸ್ 12 ಸ್ಥಾನಗಳು ದೊರೆಯಲಿವೆ. ಇದಕ್ಕೂ ಮುನ್ನ ಶನಿವಾರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ರಾಜ್ಯದ ಕಾಂಗ್ರೆಸ್ ಎನ್‌ಸಿಪಿ ನಾಯಕರು ಭೇಟಿ ನೀಡಿದರು. ಗಮನಾರ್ಹ ವಿಷಯವೆಂದರೆ ಎನ್‌ಸಿಪಿ ವಕ್ತಾರ ನವಾಬ್ ಮಲಿಕ್ ಅವರು, ನಾವು ಸರಕಾರ ರಚಿಸಲು ಶಿವಸೇನೆಯ ಜತೆ ಮಾತುಕತೆ ನಡೆಸುತ್ತಿದ್ದೇವೆ. ಶಿವಸೇನೆ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಯಾವುದೇ ಪ್ರಸ್ತಾವವಿಲ್ಲ ಎಂದು ನವಾಬ್ ಮಲಿಕ್ ಹೇಳಿದ್ದಾರೆ.