ನವದೆಹಲಿ: ಕೇಂದ್ರದ ಮಾಜಿ ಸಚಿವ ಶರದ್ ಪವಾರ್ ಅವರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್‌ಸಿಪಿ)ದ “ರಾಷ್ಟ್ರೀಯ ಪಕ್ಷ” ಸ್ಥಾನಮಾನ ಕುರಿತು ಪುನರಾವಲೋಕನ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ.
ಈ ಕುರಿತು ಎನ್‌ಸಿಪಿ ಮಂಗಳವಾರ ತನ್ನ ಪ್ರಾತಿನಿಧ್ಯವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ಒಂದು ಪಕ್ಷವನ್ನು “ರಾಷ್ಟ್ರೀಯ ಪಕ್ಷ” ಎಂದು ಗುರುತಿಸಲು, ನಾಲ್ಕು ಅಥವಾ ಹೆಚ್ಚು ರಾಜ್ಯಗಳಲ್ಲಿ “ಗುರುತಿಸಲ್ಪಟ್ಟಿರಬೇಕು” ಅಥವಾ ಕನಿಷ್ಠ ನಾಲ್ಕು ರಾಜ್ಯಗಳಲ್ಲಿ ಶೇ.6ರಷ್ಟು ಮತಗಳನ್ನು ಪಡೆದಿರಬೇಕು. ಅಥವಾ ಕನಿಷ್ಠ ಮೂರು ರಾಜ್ಯಗಳಲ್ಲಿ ಲೋಕಸಭಾ ಸ್ಥಾನಗಳ ಪೈಕಿ ಕನಿಷ್ಠ ಶೇ.2ರಷ್ಟು ಸ್ಥಾನಗಳನ್ನು ಹೊಂದಿರಬೇಕು ಅಥವಾ ಕಳೆದ ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ ನಾಲ್ವರು ಸಂಸದರನ್ನು ಹೊಂದಿರಬೇಕು.