Advertisement
ಅವಳ ಮೊದಲ ಪಯಣ ಅವಳಿಗೆ ಅರಿಯದಂತೆ ಅವಳನ್ನ ಈ ಎನ್‌ಸಿಸಿಯಲ್ಲಿ ತೊಡಗಿಸಿಕೊಂಡಿತು. ಏನೂ ಅರಿಯದೆ ಮಗು ಹೇಗೆ ಶಾಲೆಗೆ ಹೋಗಿ ತನ್ನ ವಿದ್ಯೆಯನ್ನು ಕಲಿತುಕೊಳ್ಳುತ್ತದೆಯೋ, ಅದೇ ರೀತಿಯ ಪರಿಸ್ಥಿತಿ ಅವಳೊಳಗೂ ನಡೆಯಿತು. ಎನ್‌ಸಿಸಿ ಎಂದರೆ ಏನೆಂಬುದನ್ನು ಅರಿಯದ ಅವಳು, ಎನ್‌ಸಿಸಿಯಲ್ಲಿ ಭಾಗವಹಿಸಿ, ಅದರಲ್ಲಿ ಮುನ್ನಡೆಯುತ್ತಾಳೆ ಎಂಬುದು ಕನಸಿನ ಮಾತಾಗಿತ್ತು.
Related Articles
Advertisement
ನನ್ನಕ್ಕನ ಎನ್‌ಸಿಸಿಯ ಮೊದಲ ಅದೃಷ್ಟದ ಪಯಣ ಬ್ರಹ್ಮಾವರದಿಂದ ಶುಭಾರಂಭಗೊಂಡು, ಬಾಳೆಹೊನ್ನೂರು, ಶಿವಮೊಗ್ಗ, ಮಡಿಕೇರಿ ಕ್ಯಾಂಪ್‌ಗ್ಳಿಗೂ ಆಯ್ಕೆಗೊಂಡಳು. ಇದರ ನಡುವೆಯೂ ಶಾಲಾ ಪರೀಕ್ಷೆಗಳನ್ನು ಎದುರಿಸಿದಳು. ಅವಳ ಒಳಮನಸ್ಸು ಹೇಳುತ್ತಿತ್ತು, ನಿನ್ನ ಯಶಸ್ಸು ನಿನ್ನ ಕೈಯಲ್ಲಿದೆ ಎಂದು. ಅದರಂತೆ ಅವಳು ಮುಂದುವರಿದಳು. ಮುಂದೆ ಅವಳ ಪಯಣ ಬೆಂಗಳೂರು ಕ್ಯಾಂಪ್‌ನತ್ತಲೂ ತಿರುಗಿತು.
ಬಳಿಕ ಒಂದು ತಿಂಗಳು ನವದೆಹಲಿಯಲ್ಲಿ ನಡೆಯುವ ಶಿಬಿರದಲ್ಲೂ ಪಾಲ್ಗೊಂಡಳು. ಈ ಶಿಬಿರವು ದೇಶದ ಮೂಲೆ ಮೂಲೆಯಲ್ಲಿ ಅಡಗಿ ಕುಳಿತಿರುವ ಪ್ರತಿಭಾವಂತರನ್ನು ಕರೆಸಿ ಅವರ ಸಾಮರ್ಥ್ಯವನ್ನು ಬೆಳಕಿಗೆ ತರುವಲ್ಲಿ ಶ್ರಮಿಸುತ್ತದೆ. ಡಿಸೆಂಬರ್ 28 ಗಣರಾಜ್ಯೋತ್ಸವ ಪರೇಡ್‌ಗೆ ಆಯ್ಕೆಯಾದವರ ಪಟ್ಟಿ ಹೊರಬಂದಾಗ ಅದರಲ್ಲಿ ನನ್ನಕ್ಕನ ಹೆಸರೂ ಇತ್ತು. ಅವಳು ಆಯ್ಕೆಯಾಗಿದ್ದಳು. ಆಯ್ಕೆಯ ಪಟ್ಟಿ ಹೊರಬೀಳುತ್ತಿದ್ದಂತೆ ಎತ್ತ ನೋಡಿದರೂ ಎಲ್ಲ ಅವಳಿಗೆ ಶುಭ ಹಾರೈಸುವವರೇ!
ಜನವರಿ 26, 2014 ಗಣರಾಜ್ಯೋತ್ಸವದಂದು ನಡೆದ ರಜಪತ್ ಪರೇಡ್‌ನಲ್ಲಿ ಭಾಗವಹಿಸುವ ಅವಕಾಶ ಹಾಗೂ ಜನವರಿ 28ರಂದು ನಡೆದ ಪ್ರಧಾನಮಂತ್ರಿ ರ್ಯಾಲಿಯಲ್ಲಿ ಟೇಬಲ್ ಡ್ರಿಲ್ ಮಾಡುವ ಅವಕಾಶವು ಅವಳದ್ದಾಗಿತ್ತು ಎಂದು ಹೇಳುವಾಗ ನನಗೆ ಹೆಮ್ಮೆ ಎನಿಸುತ್ತದೆ.
ಅಶ್ವಿತಾ ಎಸ್. ಶೆಟ್ಟಿಅಂತಿಮ ಪತ್ರಿಕೋದ್ಯಮ, ಭಂಡಾರ್‌ಕಾರ್ಸ್ ಕಾಲೇಜು, ಕುಂದಾಪುರ