Advertisement

ಕಾಸರಗೋಡು ನೆಟ್‌ವರ್ಕ್‌ ಡ್ರಗ್ಸ್‌ ದಂಧೆ : ಬೃಹತ್‌ ಜಾಲ ಭೇದಿಸಿದ ಎನ್‌ಸಿಬಿ

11:34 PM Apr 05, 2021 | Team Udayavani |

ಹೊಸದಿಲ್ಲಿ: “ಕಾಸರಗೋಡು ನೆಟ್‌ವರ್ಕ್‌’ ಎಂಬ ಹೆಸರಿನಡಿ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಮಾದಕ ದ್ರವ್ಯಗಳನ್ನು ಯಾರಿಗೂ ಅನುಮಾನ ಬಾರದಂತೆ ಸಾಗಿಸುವ ಜಾಲವನ್ನು ಮಾದಕದ್ರವ್ಯ ನಿಯಂತ್ರಣ ಬ್ಯೂರೊ (ಎನ್‌ಸಿಬಿ) ಪತ್ತೆ ಹಚ್ಚಿದೆ.

Advertisement

ಕತಾರ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತೀ ತಿಂಗಳು ಸುಮಾರು 10-15 ಮಾದಕ ದ್ರವ್ಯ ಕಳ್ಳಸಾಗಣೆ ದಾರರನ್ನು ಸೆರೆ ಹಿಡಿಯುವಲ್ಲಿ ಎನ್‌ಸಿಬಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಇವರಲ್ಲಿ ಬಹು ತೇಕರು ಕಾಸರಗೋಡು ನೆಟ್‌ವರ್ಕ್‌ಗೆ
ಸೇರಿದವರು ಎಂದು ಆಂಗ್ಲ ಪತ್ರಿಕೆ ಯೊಂದು ವರದಿ ಮಾಡಿದೆ.

ಈ ಗುಂಪಿನ ಪ್ರಮುಖ ಸದಸ್ಯರು ಕತಾರ್‌, ಸೌದಿ ಅರೇಬಿಯಾ, ಕೇರಳ, ಬೆಂಗಳೂರುಗಳಲ್ಲಿದ್ದು, ವಾಯ್ಸ ಇಂಟರ್‌ನೆಟ್‌ ಪ್ರೊಟೊಕಾಲ್‌ (ವಿಒಐಪಿ) ಮೂಲಕ ಸಂಪರ್ಕ ಸಾಧಿಸುತ್ತಿದ್ದಾರೆ ಎನ್ನಲಾಗಿದೆ.

ಮಡಿಕೇರಿ, ಮಂಗಳೂರಿನಲ್ಲೂ ಸದಸ್ಯರು!
ದೇಶದಲ್ಲಿ ಈ ನೆಟ್‌ವರ್ಕ್‌ಗಾಗಿ ಸುಮಾರು 100 ಮಂದಿ ಕೆಲಸ ಮಾಡು ತ್ತಿದ್ದಾರೆ. ಮಡಿಕೇರಿ, ಮಂಗಳೂರು, ಕೊಡಗು, ಬೆಂಗಳೂರು, ಕೇರಳದ ವಯನಾಡ್‌, ಹೈದರಾಬಾದ್‌, ಮುಂಬಯಿ, ಗೋವಾ ಮತ್ತು ದಿಲ್ಲಿಯಲ್ಲಿ ಇವರಿದ್ದು, ಅವರೆಲ್ಲರ ಚಟುವಟಿಕೆಗಳ ಮೇಲೆ ನಿಗಾ ಇರಿಸಲಾಗಿದೆ. ದೇಶದ 6-7 ವಿಮಾನ ನಿಲ್ದಾಣಗಳ ಮೂಲಕ ಈ ತಂಡ ಕಳ್ಳಸಾಗಣೆ ನಡೆಸುತ್ತಿದೆ ಎಂದು ಎನ್‌ಸಿಬಿಯ ಮತ್ತೂಬ್ಬ ಅಧಿಕಾರಿ ತಿಳಿಸಿದ್ದಾರೆ.

ಬಯಲಾದದ್ದು ಹೇಗೆ?
2019ರಲ್ಲಿ ಮೊಹಮ್ಮದ್‌ ಶಫೀಕ್‌ ಮತ್ತು ಆತನ ಗರ್ಭಿಣಿ ಪತ್ನಿ ಒನಿಬಾ ಕೌಸರ್‌ ಶಕೀಲ್‌ ಅಹ್ಮದ್‌ ಎಂಬ ದಂಪತಿಯನ್ನು ಹನಿಮೂನ್‌ ಗಿಫ್ಟ್ ಪ್ಯಾಕೇಜ್‌ನಡಿ ತಬಸ್ಸಮ್‌ ಮತ್ತು ಆಕೆಯ ಸ್ನೇಹಿತ ನಿಜಾಮ್‌ ಕಾರಾ ಎಂಬವರು ಕತಾರ್‌ ಪ್ರವಾಸಕ್ಕೆ ಕಳುಹಿಸಿದ್ದರು. ಪ್ಯಾಕೇಜ್‌ ಅಡಿಯಲ್ಲಿ ದಂಪತಿಗೆ ನೀಡಲಾಗಿದ್ದ ಗಿಫ್ಟ್ನಲ್ಲಿ ಮಾದಕದ್ರವ್ಯಗಳನ್ನು ಅಡಗಿಸಿಡಲಾಗಿತ್ತು. ಹಾಗಾಗಿ ದೋಹಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದು ಅವರಿಗೆ ಜೈಲು ಶಿಕ್ಷ ಆಗಿತ್ತು. ಈ ಪ್ರಕರಣದ ತನಿಖೆ ನಡೆಸಿದಾಗ ಇಡೀ ಪ್ರಕರಣ ಬಯಲಿಗೆ ಬಂದಿತೆಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next