ಮುಂಬೈ: ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿರುವ ನಯನತಾರಾ ಅವರು ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದವರು. ಅಲ್ಲದೆ ಬಾಲಿವುಡ್ ಗೆ ಪದಾರ್ಪಣೆ ಮಾಡಲು ಸಿದ್ದರಾಗಿದ್ದು, ಶಾರುಖ್ ಖಾನ್ ಅವರ ‘ಜವಾನ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಸ್ಟಾರ್ ನಟಿ ನಯನತಾರಾ ಅವರು ಇತ್ತೀಚೆಗೆ ಕಾಸ್ಟಿಂಗ್ ಕೌಚ್ ನಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ನಯನತಾರಾ ತನ್ನ ಕಾಸ್ಟಿಂಗ್ ಕೌಚ್ ಸಂಕಷ್ಟವನ್ನು ಹಂಚಿಕೊಂಡರು. ‘ತಮಗೆ ಅನುಕೂಲಕರ’ವಾಗಿದ್ದರೆ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನೀಡುತ್ತೇವೆ ಎಂಬ ಆಫರ್ ಒಂದೊಮ್ಮೆ ನನಗೆ ಬಂದಿತ್ತು ಎಂದು ನಯಕತಾರಾ ಬಹಿರಂಗಪಡಿಸಿದರು. ಆದರೆ ‘ಇಲ್ಲ’ ಎಂದು ಹೇಳಿ ಆಫರ್ ತಿರಸ್ಕರಿಸುವಷ್ಟು ಧೈರ್ಯವಿತ್ತು, ನಾನು ನನ್ನ ನಟನಾ ಸಾಮರ್ಥ್ಯವನ್ನು ನಂಬುವವಳು ಎಂದು ನಯನತಾರಾ ಹೇಳಿದ್ದಾರೆ.
ಇದನ್ನೂ ಓದಿ:ಸಿ.ಟಿ ರವಿ ವಿರುದ್ಧ ಸ್ಪರ್ಧಿಸಿದರೆ ಅಡಿಕೆ ತೋಟ ಮಾರಿ 1 ಕೋಟಿ ರೂ ಕೊಡುತ್ತೇನೆ: ಸಿದ್ದರಾಮಯ್ಯಗೆ ಆಹ್ವಾನ
Related Articles
ನಟಿಯೊಬ್ಬರು ತನ್ನ ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದು ಇದೇ ಮೊದಲಲ್ಲ. ಇದಕ್ಕೂ ಮೊದಲು, ಬಿಗ್ ಬಾಸ್ 16 ಖ್ಯಾತಿಯ ಅಂಕಿತ್ ಗುಪ್ತಾ ಮತ್ತು ಇತರರು ಸಿನಿಮಾ ಭರವಸೆಯಲ್ಲಿ ‘ರಾಜಿ’ ಮಾಡಿಕೊಳ್ಳಲು ಹೇಗೆ ಕೇಳಿಕೊಂಡರು ಎಂಬುದನ್ನು ಹಂಚಿಕೊಂಡಿದ್ದರು.
ನಯನತಾರಾ ಅಭಿಮಾನಿಗಳು ‘ಜವಾನ್’ ನಲ್ಲಿ ಶಾರುಖ್ ಎದುರು ಅವರನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಖ್ಯಾತ ನಿರ್ದೇಶಕ ಅಟ್ಲೀ ನಿರ್ದೇಶನದ ಚಿತ್ರದಲ್ಲಿ ಶಾರುಖ್ ಖಾನ್, ವಿಜಯ್ ಸೇತುಪತಿ, ಸಾನ್ಯಾ ಮಲ್ಹೋತ್ರಾ, ಸುನಿಲ್ ಗ್ರೋವರ್ ಮುಂತಾದವರು ನಟಿಸಿದ್ದಾರೆ.