Advertisement

ನಯನ ಮನೋಹರ ಲಂಕೆ: ರಿಲೀಸ್‌ಗೆ ಸಿನಿಮಾ ರೆಡಿ

03:18 PM Jul 31, 2021 | Team Udayavani |

ಲೂಸ್‌ ಮಾದ ಯೋಗೇಶ್‌ ನಾಯಕರಾಗಿ ನಟಿಸಿರುವ “ಲಂಕೆ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಈಗ ಚಿತ್ರದ ಮತ್ತೂಂದು ಹಾಡು ಬಿಡುಗಡೆಯಾಗಿದೆ. ಚಿತ್ರದ “ನಯನಕ್ಕೆ ನಯನ ಸೇರೋಕ್ಷಣ…’ ಎಂಬ ಹಾಡು ಆನಂದ್‌ ಆಡಿಯೋ ಮೂಲಕ ಬಿಡುಗಡೆಯಾಗಿದ್ದು, ಕೇಳುಗರ ಮೆಚ್ಚುಗೆ ಪಡೆಯುತ್ತಿದೆ.

Advertisement

ಈ ಹಾಡಿನ ಬಗ್ಗೆ ಮಾತನಾಡಿದ ನಿರ್ದೇಶಕ ರಾಮ್‌ಪ್ರಸಾದ್‌, “ಸ್ವಲ್ಪ ದುಃಖ ಹಾಗೂ ಹೆಚ್ಚಿನ ಸಂತೋಷವನ್ನು ಹಾಡಿನ ಮೂಲಕ ಹೇಳಬೇಕೆಂದು ಕೊಂಡೆ. ಗೀತ ರಚನೆಕಾರ ಗೌಸ್‌ಫೀರ್‌ ಅವರ ಬಳಿ ಹೇಳಿದಾಗ ನಯನಕ್ಕೆ ನಯನ ಸೇರೋಕ್ಷಣ ಎಂಬ ಸುಂದರ ಗೀತೆ ಬರೆದುಕೊಟ್ಟರು. ಅಷ್ಟೇ ಮಧುರವಾಗಿ ಕಾರ್ತಿಕ್‌ ಈ ಹಾಡಿಗೆ ಸಂಗೀತ ನೀಡಿದ್ದಾರೆ. ಧನಂಜಯ್‌ ಅವರ ನೃತ್ಯ ನಿರ್ದೇಶನದಲ್ಲಿ ಯೋಗಿ ಹಾಗೂ ಕೃಷಿ ತಾಪಂಡ ಅದ್ಭುತವಾಗಿ ನಟಿಸಿದ್ದಾರೆ’ ಎಂದರು.

ಇದನ್ನೂ ಓದಿ:ಬಾಟಲ್ ಹಿಡಿದು ಮಾದಕ ನೋಟ ಬೀರಿದ ಗಡಂಗ್ ರಕ್ಕಮ್ಮಾ  

ನಾಯಕ ಯೋಗೀಶ್‌ ಸಹ ಈ ಹಾಡಿನ ಬಗ್ಗೆ ಮೆಚ್ಚುಗೆ ಸೂಚಿಸಿ ಮಾತನಾಡಿದರು. ಸಂಗೀತ ನಿರ್ದೇಶಕ ಕಾರ್ತಿಕ್‌ ಶರ್ಮಾ ಹಾಗೂ ನೃತ್ಯ ನಿರ್ದೇಶಕರ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ಚಿತ್ರದ ನಾಲ್ಕು ಹಾಡುಗಳು ಬೇರೆ ಬೇರೆ ಶೈಲಿಯಲ್ಲಿದೆ. ಈ ಹಾಡು ಸೂಫಿ ಹಾಗೂ ಕವಾಲಿ ಶೈಲಿಯಲ್ಲಿದೆ. ಗೌಸ್‌ ಫೀರ್‌ ಅವರ ಸಾಹಿತ್ಯ ಸೊಗಸಾಗಿದೆ ಹಾಗೂ ಈ ಹಾಡನ್ನು ಕನ್ನಡದವರೇ ಆದ ಧನುಷ್‌ ಜಗದೀಶ್‌ ಹಾಗೂ ರಕ್ಷಿತಾ ಸುರೇಶ್‌ ಹಾಡಿದ್ದಾರೆ ಎಂದು ಚಿತ್ರದ ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಕಾರ್ತಿಕ ಶರ್ಮ ಮಾಹಿತಿ ನೀಡಿದರು.

ಗೀತ ರಚನೆಕಾರ ಗೌಸ್‌ ತಾವು ಬರೆದಿರುವ ಈ ಹಾಡಿನ ಬಗ್ಗೆ ಮಾತನಾಡಿ, ಸಂಗೀತ ನಿರ್ದೇಶಕರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು. ನಿರ್ಮಾಪಕ ಪಟೇಲ್‌ ಶ್ರೀನಿವಾಸ್‌ ಹಾಗೂ ಸುರೇಖ ರಾಮ್‌ ಪ್ರಸಾದ್‌, ಕೃಷಿ ತಾಪಂಡ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next