Advertisement

ನಾಯ್ಕನಕಟ್ಟೆ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ: ಮುಖ್ಯ ಶಿಕ್ಷಕರಿಲ್ಲದ್ದೇ ಮುಖ್ಯ ಸಮಸ್ಯೆ

07:59 PM Sep 24, 2021 | Team Udayavani |

ಉಪ್ಪುಂದ: ನಾಯ್ಕನಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ದಾಖಲಾತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಮಕ್ಕಳ ದಾಖಲಾತಿ ಹೆಚ್ಚಳವಾದಂತೆ ಅಲ್ಲಿನ ಮೂಲ ಸೌಕರ್ಯಗಳ ವೃದ್ಧಿಗೆ ಶಿಕ್ಷಣ ಇಲಾಖೆ, ಜನ ಪ್ರತಿನಿಧಿಗಳು ಗಮನಹರಿಸಬೇಕಿದೆ.

Advertisement

ಆಂಗ್ಲಮಾಧ್ಯಮ ಆರಂಭ:

ಕೆರ್ಗಾಲು ಗ್ರಾ.ಪಂ. ವ್ಯಾಪ್ತಿಯ 2ನೇ ವಾರ್ಡ್‌ನ ನಾಯ್ಕನಕಟ್ಟೆ ರಾ.ಹೆದ್ದಾರಿ 66ರಲ್ಲಿ ಕಾರ್ಯ ನಿರ್ವ ಹಿಸುತ್ತಿರುವ ಶಿಕ್ಷಣ ಸಂಸ್ಥೆಯು 91 ವರ್ಷಗಳ ಹಿಂದೆ ಭಗವತಿ ದೇವಸ್ಥಾನದ ಸಮೀಪದ  ಬಾಡಿಗೆ ಮಹಡಿ ಯೊಂದರಲ್ಲಿ ಪ್ರಾರಂಭಗೊಂಡಿತು. ಕಳೆದ ಸಾಲಿನಲ್ಲಿ 125 ವಿದ್ಯಾರ್ಥಿಗಳು ಇದ್ದರೆ ಪ್ರಸ್ತುತ ವರ್ಷದಲ್ಲಿ  122 ಮಂದಿ ಇದ್ದಾರೆ. 1ನೇ ತರಗತಿಗೆ 23 ಮಕ್ಕಳು ಸೇರ್ಪಡೆಯಾಗಿದ್ದಾರೆ. ಪ್ರಸ್ತುತ ವರ್ಷದಿಂದ ಆಂಗ್ಲಮಾಧ್ಯಮ ಆರಂಭಗೊಂಡಿ ರುವುದರಿಂದ  ದಾಖಲಾತಿಯಲ್ಲಿ ಹೆಚ್ಚಳವಾಗಬಹುದು.

ಶಿಕ್ಷಕರ ಕೊರತೆ:

122 ಮಕ್ಕಳಿಗೆ 5 ಶಿಕ್ಷಕರಿದ್ದು ಇದರಲ್ಲಿ ಒಬ್ಬರು ದೈ.ಶಿ. ಶಿಕ್ಷಕರು ಹಾಗೂ ಪ್ರಭಾರ ಮುಖ್ಯಶಿಕ್ಷಕರಾಗಿದ್ದಾರೆ. ಮುಖ್ಯ ಶಿಕ್ಷಕರು ಸೇರಿದಂತೆ ಇಬ್ಬರು ಶಿಕ್ಷಕರ ಅಗತ್ಯವಿದೆ. ಒಂದನೇ ತರಗತಿಯಿಂದ ಆಂಗ್ಲಮಾಧ್ಯಮ ಪ್ರಾರಂಭಗೊಂಡಿದೆ. ಮೂರು ವಿಭಾಗಳಲ್ಲಿ ನಲಿಕಲಿ ತರಗತಿಗಳು ನಡೆಯುತ್ತಿದೆ. ಎಲ್‌ಕೆಜಿ ಮತ್ತು ಯುಕೆಜಿಯಲ್ಲಿ 20 ಮಕ್ಕಳಿದ್ದಾರೆ. ಇದರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಹೆತ್ತವರ ಹಾಗೂ ಎಸ್‌ಡಿಎಂಸಿ ಅವರ ಸಹಕಾರದಿಂದ ಒಬ್ಬರು ಗೌರವ ಶಿಕ್ಷಕರಿದ್ದು, ಇನ್ನು ಇಬ್ಬರು ಶಿಕ್ಷಕರನ್ನು ನಿಯೋಜಿಸುವ ಪ್ರಕಿಯೆ ನಡೆಯುತ್ತಿದೆ.

Advertisement

ಮೂಲಸೌಕರ್ಯಗಳ ಸಮಸ್ಯೆ:

ಶೌಚಾಲಯ ಶಾಲೆಯ ಕಾಂಪೌಡ್‌ನ‌ ಹೊರಗಡೆ ಇರುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಕೆರ್ಗಾಲ್‌ ಗ್ರಾ.ಪಂ. ವತಿಯಿಂದ  ಒಂದು ಶೌಚಾಲಯ ನಿರ್ಮಿಸುವ ಭರವಸೆಯನ್ನು ಸ್ಥಳೀಯ ಜನಪ್ರತಿನಿಧಿಗಳು ನೀಡಿದ್ದಾರೆ. ಮಕ್ಕಳಿಗೆ ಕೈ ತೊಳೆಯುವ ಘಟಕ, ಗ್ರಂಥಾಲಯ, ಪ್ರಯೋಗಾಲಯ  ಅಗತ್ಯವಿದೆ. 8 ವರ್ಷಗಳಿಂದ ಕ್ರೀಡಾ ಸಾಮಗ್ರಿಗಳು  ಶಾಲೆಗೆ ಬಂದೇ ಇಲ್ಲ. ಕುರ್ಚಿ, ಯಂತ್ರೋಪಕರಣಗಳು, ಕಂಪ್ಯೂಟರ್‌, ಮೇಜು, ಪ್ರೊಜೆಕ್ಟರ್‌ಗಳ ಆವಶ್ಯಕತೆ ಇದೆ.   ಅಡುಗೆ ಕೋಣೆ, ನೀರಿನ ಬಾವಿ ಇದ್ದ ಜಾಗ ರಾ.ಹೆ.ಗೆ ಸೇರಿದ್ದು ಹೆದ್ದಾರಿ ಪ್ರಾಧಿಕಾರದವರು ಬಾವಿಯನ್ನು ಮುಚ್ಚಿಸಿದರೆ ಕುಡಿಯುವ ನೀರಿಗೆ ಸಮಸ್ಯೆಯಾಗಲಿದೆ.

ಕೊಠಡಿಗಳ ಕೊರತೆ :

ಶಾಲೆಯಲ್ಲಿ 6 ಕೊಠಡಿಗಳು ಇದ್ದು ಪ್ರಸ್ತುತ 4 ತರಗತಿ ಕೋಣೆಗಳ ಕೊರತೆ ಉಂಟಾಗಿದೆ. ಸುಮಾರು 80 ವರ್ಷ ಹಿಂದೆ ನಿರ್ಮಿಸಿರುವ  ಪ್ರಸ್ತುತ 7ನೇ ತರಗತಿ ಇರುವ ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿದ್ದು ಶಿಥಿಲಾವಸ್ಥೆಯಲ್ಲಿದೆ.  ಮುಖ್ಯಶಿಕ್ಷಕರ ಕಚೇರಿ ಸೇರಿದಂತೆ  4 ಕಟ್ಟಡಗಳು ಅಗತ್ಯವಾಗಿದೆ. ಎಸ್‌ಡಿಎಂಸಿ, ಹಳೆವಿದ್ಯಾರ್ಥಿಗಳ ಸಂಘ, ದಾನಿಗಳಿಂದಾಗಿ 2 ತರಗತಿ ಕೊಠಡಿ, ರಂಗ ಮಂದಿರ ನಿರ್ಮಾಣಗೊಂಡಿದೆ.

ಆಂಗ್ಲ ಮಾಧ್ಯಮ ಆರಂಭ:

ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭ ವಾಗಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ವಾಗುತ್ತಿದೆ. ಮೂಲ ಸೌಕರ್ಯಗಳ ವ್ಯವಸ್ಥೆ ಸರಿಪಡಿಸಿದರೆ ಇನ್ನಷ್ಟು ವಿದ್ಯಾರ್ಥಿಗಳ ದಾಖಲಾತಿಯಾಗಬಹುದು.              ವಿಷ್ಣು, ಪ್ರಭಾರ ಮುಖ್ಯಶಿಕ್ಷಕ

ಕೊಠಡಿಗಳ ಕೊರತೆ:

ತುರ್ತು ಮುಖ್ಯ ಶಿಕ್ಷಕರ ನೇಮಕ ಆಗಬೇಕಿದೆ ಹಾಗೂ ಕೊಠಡಿಗಳ ಕೊರತೆಯಿಂದ ರಂಗಮಂದಿರ ಹಾಗೂ ಶಿಥಿಲಾವಸ್ಥೆಯ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಾದ ಅನಿವಾರ್ಯತೆ ಇದೆ. ಸುಂದರ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷ

 

-ಕೃಷ್ಣ ಬಿಜೂರು

Advertisement

Udayavani is now on Telegram. Click here to join our channel and stay updated with the latest news.

Next