Advertisement

ಪಕ್ಷ ಭೇದ ಮರೆತು ಅಭಿವೃದ್ಧಿಗೆ ಶ್ರಮಿಸಿ: ರಘುಮೂರ್ತಿ

05:52 PM Oct 04, 2019 | Team Udayavani |

ನಾಯಕನಹಟ್ಟಿ: ಪಟ್ಟಣದ ಅಭಿವೃದ್ಧಿಗೆ ಪಕ್ಷ ಬೇಧ ಮರೆತು ಮುಖಂಡರು ಶ್ರಮಿಸಬೇಕು ಎಂದು ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಹೇಳಿದರು. ಗುರುವಾರ ಪಟ್ಟಣದ ತೇರುಬೀದಿ ಅಗಲೀಕರಣ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು. ಮೊಳಕಾಲ್ಮೂರು ಕ್ಷೇತ್ರದ ಶಾಸಕ ಬಿ. ಶ್ರೀರಾಮುಲು ರಾಜ್ಯ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದಾರೆ. ಆದರೆ ಸಚಿವರಿಗೆ ಇಲ್ಲಿನ ಅಭಿವೃದ್ಧಿಗೆ ಅಗತ್ಯವಾದ ಅಂಶಗಳ ಮಾಹಿತಿ ಇಲ್ಲ. ಆದ್ದರಿಂದ ಇಲ್ಲಿನ ಮುಖಂಡರು ಅವರಿಗೆ ಬೇಡಿಕೆಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.

Advertisement

ತೇರುಬೀದಿ ಅಗಲೀಕರಣದ ಬಗ್ಗೆ ಪಪಂ ತಾರತಮ್ಯ ಅನುಸರಿಸಿದೆ ಎಂದು ನಿವಾಸಿಗಳಾದ ಟಿ. ಮಂಜುನಾಥ್‌, ವಿರೂಪಾಕ್ಷಪ್ಪ ಆಕ್ರೋಶ ವ್ಯಕ್ತಪಡಿಸಿದರು. ಈ ಮೊದಲು 18 ಮೀಟರ್‌ ಅಗಲೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಪಪಂ ಇದನ್ನು 17 ಮೀಟರ್‌ಗೆ ಕಡಿಮೆ ಮಾಡಿದೆ. ರಸ್ತೆಯ ಕೆಲವೆಡೆ 17 ಮೀಟರ್‌ ಅಗಲೀಕರಣ ಕೈಗೊಳ್ಳಲಾಗಿದೆ. ಕೆಲವು ಪ್ರದೇಶದಲ್ಲಿ 15 ಮೀಟರ್‌ ಮಾತ್ರ ವಿಸ್ತರಣೆ ಮಾಡಲಾಗಿದೆ. ಹೀಗಾಗಿ ಪಪಂ ಪ್ರಭಾವಿಗಳಿಗೆ ಅವಕಾಶ ಮಾಡಿಕೊಟ್ಟಿದೆ. ಅಮಾಯಕ ಜನರನ್ನು ಬಲವಂತದಿಂದ ತೆರವುಗೊಳಿಸಲಾಗಿದೆ ಎಂದು ದೂರಿದರು.

ಇದಕ್ಕೆ ಸ್ಪಂದಿಸಿದ ಶಾಸಕ, ಪಿಡಬ್ಲ್ಯೂಡಿ ಸೆಕ್ಷನ್‌ ಇಂಜಿನಿಯರ್‌ ಹಕೀಂ ಅವರಿಗೆ ಲೋಪ ಸರಿಪಡಿಸುವಂತೆ ಸೂಚನೆ ನೀಡಿದರು. ಪಪಂನಲ್ಲಿ 17 ಮೀಟರ್‌ ಅಗಲೀಕರಣಕ್ಕೆ ಒಪ್ಪಿಗೆ ನೀಡಲಾಗಿದೆ. ಇದಕ್ಕೆ ಸ್ಥಳೀಯ ಶಾಸಕ ಬಿ.
ಶ್ರೀರಾಮುಲು ಕೂಡ ಒಪ್ಪಿಗೆ ನೀಡಿದ್ದಾರೆ. ಇದರ ಮೇಲ್ವಿಚಾರಣೆ ಜವಾಬ್ದಾರಿ ಪಪಂ ಮುಖ್ಯಾಧಿಕಾರಿ ಹಾಗೂ ಪಿಡಬ್ಲ್ಯೂಡಿ ಇಂಜಿನಿಯರ್‌ ಅವರದ್ದಾಗಿದೆ. ಅಗಲೀಕರಣ ಪ್ರಕ್ರಿಯೆ ಪದೇ ಪದೇ ನಡೆಯುವ ಕಾರ್ಯವಲ್ಲ. ಶಾಶ್ವತವಾದ
ಕಾರ್ಯ ಮಾಡುವಾಗ ಕೆಲವೊಬ್ಬರಿಗೆ ನೋವಾಗುವುದು ಸಹಜ. ಆದರೆ ಅಳತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಪಿಡಬ್ಲ್ಯೂಡಿ, ಪಪಂ ಹಾಗೂ ಸ್ಥಳೀಯರು ಇದಕ್ಕೆ ಸಹಕಾರ ನೀಡಬೇಕು ಎಂದು ಶಾಸಕರು ಮನವಿ ಮಾಡಿದರು.

ಪಪಂ ಮುಖ್ಯಾಧಿಕಾರಿ ಡಿ. ಭೂತಪ್ಪ, ಬಿಜೆಪಿ ಮಂಡಲಾಧ್ಯಕ್ಷ ಎಂ.ವೈ.ಟಿ. ಸ್ವಾಮಿ, ಪಪಂ ಸದಸ್ಯರಾದ ಬಸಣ್ಣ, ಮುಖಂಡರಾದ ಪಿ.ಬಿ. ತಿಪ್ಪೇಸ್ವಾಮಿ, ರಸೂಲ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next