Advertisement

ನಕ್ಸಲರ ಬಳಿ ಅಮೆರಿಕ ನಿರ್ಮಿತ ಅಸ್ತ್ರ

10:46 AM Dec 05, 2022 | Team Udayavani |

ರಾಯ್ಪರ: ನ.26ರಂದು ಛತ್ತೀಸ್‌ಗಢದ ಬಿಜಾಪುರದಲ್ಲಿ ಎನ್‌ಕೌಂಟರ್‌ ವೇಳೆ ಮೃತಪಟ್ಟ ನಾಲ್ವರು ನಕ್ಸಲರ ಬಳಿ ಸಿಕ್ಕಿರುವ ಶಸ್ತ್ರಾಸ್ತ್ರಗಳು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಮೃತರ ಬಳಿ 4 ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು.

Advertisement

ಆ ಪೈಕಿ ಒಂದು ಅಮೆರಿಕ ನಿರ್ಮಿತ ಎಂ1 ಕಾರ್ಬೈನ್‌ ಆಗಿದೆ. ಇತರ ಅಸಾಲ್ಟ್ ರೈಫ‌ಲ್‌ಗ‌ಳಿಗೆ ಹೋಲಿಸಿದರೆ ಈ ವಿದೇಶಿ ನಿರ್ಮಿತ ಅಸ್ತ್ರದ ಬ್ಯಾರೆಲ್‌ ಚಿಕ್ಕದಾಗಿರುತ್ತದೆ. ಈ ಆಯುಧವು ನಕ್ಸಲರ ಕೈಗೆ ಬಂದಿದ್ದಾದರೂ ಹೇಗೆ ಎಂಬುದೇ ಯಕ್ಷಪ್ರಶ್ನೆಯಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next