Advertisement

ಉಂಬ್ಳೆಬೈಲು ಬಳಿ ನಕ್ಸಲರು ಪ್ರತ್ಯಕ್ಷ?

06:05 AM Oct 22, 2018 | |

ಶಿವಮೊಗ್ಗ: ತಾಲೂಕಿನ ಉಂಬ್ಳೆಬೈಲು ಸಮೀಪ ಭಾನುವಾರ ಮಧ್ಯಾಹ್ನ ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಡಿ ಜನರಲ್ಲಿ ಆತಂಕ ಮೂಡಿಸಿದೆ. ಆದರೆ, ನಕ್ಸಲರು ಕಂಡಿದ್ದಾರೆ ಎಂದು ಮಾಹಿತಿ ಕೊಟ್ಟವರ ಗೊಂದಲಕಾರಿ ಹೇಳಿಕೆಗಳಿಂದ ಇದು ಕೇವಲ ವದಂತಿ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Advertisement

ಉಂಬ್ಳೆಬೈಲು ಬಳಿ ಇರುವ ಚರ್ಚ್‌ ಹತ್ತಿರ ಭಾನುವಾರ ಮಧ್ಯಾಹ್ನ ಜೀನ್ಸ್‌ ಪ್ಯಾಂಟ್‌, ಟೀ ಶರ್ಟ್‌ ಧರಿಸಿದ್ದ ನಾಲ್ವರು ಯುವಕರು ಗನ್‌ ಹಾಗೂ ಮ್ಯಾಪ್‌ ಒಂದನ್ನು ಇಟ್ಟುಕೊಂಡು ನಿಂತಿದ್ದರು ಎಂದು ವ್ಯಕ್ತಿಯೊಬ್ಬರು ಅರಣ್ಯ ಇಲಾಖೆ ಅಧಿ ಕಾರಿಗಳಿಗೆ ತಿಳಿಸಿದರು. ನಂತರ ಯುವಕರು ನಿಂತಿದ್ದರು, ಆದರೆ, ಅವರ ಬಳಿ ಏನೂ ಇರಲಿಲ್ಲ ಎಂದು ಕೆಲ ಕ್ಷಣದಲ್ಲೇ ತಮ್ಮ ಹೇಳಿಕೆ ಬದಲಿಸಿದರು. ಇದರಿಂದ ಗೊಂದಲಕ್ಕೊಳಗಾದ ಅರಣ್ಯ ಇಲಾಖೆ ಅ ಧಿಕಾರಿಗಳು ತುಂಗಾ ನಗರ ಪೊಲೀಸರಿಗೆ ಮಾಹಿತಿ ನೀಡಿದರು. 

ಭಾನುವಾರವಾದ್ದರಿಂದ ಜನ ಸಂಚಾರ ವಿರಳವಾಗಿದ್ದು, ಮಾಹಿತಿ ನೀಡಿದ ವ್ಯಕ್ತಿ ಹೊರತುಪಡಿಸಿದರೆ ಉಳಿದವರ್ಯಾರೂ ಸಹ ಯುವಕರನ್ನು ನೋಡಿಲ್ಲ. ಹೀಗಾಗಿ, ಇದು ವದಂತಿಯೋ ಅಥವಾ ನಿಜವೋ ಎಂಬುದರ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನಕ್ಸಲರಾಗಿದ್ದರೆ ಅವರು ಜೀನ್ಸ್‌ ಪ್ಯಾಂಟ್‌ ಹಾಕಿರುತ್ತಿರಲಿಲ್ಲ ಎಂಬುದು ಕೆಲವರ ತರ್ಕ. ಆದರೆ, ಈ ಸುದ್ದಿಯಿಂದ ಮಲೆನಾಡಲ್ಲಿ ಮತ್ತೆ ನಕ್ಸಲ್‌ ಚಟುವಟಿಕೆ ನಡೆಯುತ್ತಿದೆ ಎಂಬ ಶಂಕೆ ಮೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next