Advertisement

BJP ಮುಖಂಡನನ್ನು ಹತ್ಯೆಗೈದು, ದೇಹದ ಮೇಲೆ ಎಚ್ಚರಿಕೆಯ ಚೀಟಿ ಇಟ್ಟ ನಕ್ಸಲರು!

09:57 PM Jun 21, 2023 | Team Udayavani |

ಬಿಜಾಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಇಲ್ಮಿಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಕ್ಸಲೀಯರ ಗುಂಪೊಂದು ಬಿಜೆಪಿ ಮುಖಂಡ ಮತ್ತು ಮಾಜಿ ಸರಪಂಚ್ ಕಾಕಾ ಅರ್ಜುನ್ ಅವರನ್ನು ಬುಧವಾರ ಹತ್ಯೆಗೈದಿದೆ. ಕೃತ್ಯದ ನಂತರ ನಕ್ಸಲರು ಶವವನ್ನು ನಡುರಸ್ತೆಯಲ್ಲಿ ಎಚ್ಚರಿಕೆಯ ಚೀಟಿಯೊಂದಿಗೆ ಬಿಟ್ಟು ಹೋಗಿದ್ದಾರೆ.

Advertisement

ನಕ್ಸಲರು ಬಿಟ್ಟುಹೋದ ಟಿಪ್ಪಣಿಯ ಪ್ರಕಾರ, ಅವರು ತಮ್ಮ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರಿಂದ ಹತ್ಯೆಗೈದಿರುವುದಾಗಿ ಬರೆದಿದ್ದಾರೆ.ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಛತ್ತೀಸ್‌ಗಢ ಭೇಟಿಗೆ ಕೇವಲ 24 ಗಂಟೆಗಳ ಮೊದಲು ಘಟನೆ ನಡೆದಿದೆ. 

ಹತ್ಯೆಯನ್ನು ಖಂಡಿಸಿರುವ ಛತ್ತೀಸ್‌ಗಢ ಬಿಜೆಪಿ ಪ್ರಧಾನ ಕಾರ್ಯದರ್ಶಿ ಒಪಿ ಚೌಧರಿ, ಕಾಂಗ್ರೆಸ್ ಬೆಂಬಲವಿಲ್ಲದೆ ನಾಯಕನನ್ನು ಕೊಲ್ಲಲು ಸಾಧ್ಯವಿಲ್ಲ ಮತ್ತು ಕೊಲೆಯನ್ನು ರಾಜಕೀಯ ಹತ್ಯೆ ಎಂದು ಕರೆದಿದ್ದಾರೆ. ಏತನ್ಮಧ್ಯೆ, ಛತ್ತೀಸ್‌ಗಢ ಕಾಂಗ್ರೆಸ್ ವಕ್ತಾರ ಧನಂಜಯ್ ಸಿಂಗ್ ಠಾಕೂರ್, ಹತ್ಯೆಯು ಅತ್ಯಂತ ದುರದೃಷ್ಟಕರವಾಗಿದೆ. ಬಿಜೆಪಿ ಈ ವಿಷಯವನ್ನು ರಾಜಕೀಯಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next