Advertisement

Naxal ಶರಣಾದರೆ ಸರಕಾರದಿಂದ  ಪ್ರೋತ್ಸಾಹ: ಡಾ| ಬಂಜಗೆರೆ ಜಯಪ್ರಕಾಶ್‌

11:28 PM May 16, 2024 | Team Udayavani |

ಶಿವಮೊಗ್ಗ: ಸೈದ್ಧಾಂತಿಕ ಹೋರಾಟಕ್ಕಾಗಿ ಕಾಡು ಸೇರಿರುವ ನಕ್ಸಲರು ಅನಾರೋಗ್ಯ ಸಹಿತ ಇತರ ಕಾರಣಗಳಿಂದಾಗಿ ಮುಖ್ಯವಾಹಿನಿಗೆ ಬರಲು ಇಚ್ಛಿಸುವವರು ನಮ್ಮನ್ನು ಸಂಪರ್ಕಿಸಬಹುದು. ಮುಖ್ಯವಾಹಿನಿಗೆ ಬಂದರೆ ಅವರಿಗೆ ಸರಕಾರದಿಂದ ಪ್ರೋತ್ಸಾಹಧನ, ಪುನರ್ವಸ‌ತಿ ಸೌಲಭ್ಯಗಳನ್ನು ವಿತರಿಸಲಾಗುವುದು ಎಂದು ನಕ್ಸಲರ ಶರಣಾಗತಿ, ಪುನರ್ವಸತಿ ಸಮಿತಿ ಸದಸ್ಯ ಡಾ| ಬಂಜಗೆರೆ ಜಯಪ್ರಕಾಶ್‌ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಮುಕ್ತ ಅವಕಾಶ ನೀಡಿರುವುದು ಸ್ವಾಗತಾರ್ಹ. ಆದ್ದರಿಂದ ನಾವೆಲ್ಲ ಈ ಸಮಿತಿಗೆ ಸೇರಿದ್ದೇವೆ. ಕರ್ನಾಟಕದಲ್ಲಿ ನಕ್ಸಲ್‌ ಹೋರಾಟ ಇಳಿಮುಖವಾಗುತ್ತಿದೆ. ನಕ್ಸಲರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದೇವೆ. ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದರೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ.  ಈವರೆಗೆ 14 ಮಂದಿ ಮುಖ್ಯವಾಹಿನಿಗೆ ಬಂದಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 8 ಮಂದಿ ನಕ್ಸಲರಿದ್ದು, ಅವರು ನಮ್ಮನ್ನು ಸಂಪರ್ಕಿಸಿದಲ್ಲಿ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಮಾಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next