Advertisement

Naxal Surrender: ರಾಜ್ಯ ಸರಕಾರವೇ ನಕ್ಸಲರಿಗೆ ಶರಣಾಗಿದೆಯೋ?: ಸಿ.ಟಿ. ರವಿ

01:46 AM Jan 11, 2025 | Esha Prasanna |

ವಿಜಯಪುರ: ನಕ್ಸಲ್‌ ವಿಚಾರಧಾರೆ ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿಯಾಗಿದೆ. ಸಂವಿಧಾನದ ಮೇಲೆ ನಂಬಿಕೆ ಇರುವವರು ಬ್ಯಾಲೆಟ್‌ ಮೇಲೆ ನಂಬಿಕೆ ಹೊಂದಿರುತ್ತಾರೆ. ಬುಲೆಟ್‌ ಮೇಲಲ್ಲ. ರಾಷ್ಟ್ರಘಾತಕ ನಕ್ಸಲರ ವಿಚಾರಧಾರೆಯನ್ನು ನಗರದಲ್ಲಿದ್ದುಕೊಂಡು ಬೆಂಬಲಿಸುವವರೂ ಅಪರಾಧಿಗಳೇ ಆಗುತ್ತಾರೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ರಾಜ್ಯದಲ್ಲಿ ಶರಣಾದ ನಕ್ಸಲರ ಪರಿಹಾರದ ಬಗ್ಗೆ ನಾನು ಪ್ರಶ್ನೆ ಮಾಡಲ್ಲ. ಆದರೆ, ಶರಣಾಗತಿಗೆ ಷರತ್ತು ಯಾರು ಹಾಕಬೇಕು? ಆ ವಿಚಾರಧಾರೆಯನ್ನೇ ಅವರು ಬಿಟ್ಟು ಬಂದಿದ್ದರೆ, ತನಿಖೆಗೆ ಸಹಕಾರ ನೀಡಬೇಕು. ಅದು ಬಿಟ್ಟು ಮಾವನ ಮನೆಗೆ ಬಂದಂತೆ ಬಂದರೆ ನಕ್ಸಲರು ಸರಕಾರಕ್ಕೆ ಶರಣಾಗಿದ್ದಾರೋ ಅಥವಾ ರಾಜ್ಯ ಸರಕಾರವೇ ನಕ್ಸಲರಿಗೆ ಶರಣಾಗಿದೆಯೋ ಎಂಬ ಅನುಮಾನ ಮೂಡುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next