Advertisement

ಕೇರಳ ವಿದ್ಯಾರ್ಥಿಗಳಿಂದ ನಕ್ಸಲ್‌ ಕರಪತ್ರ ಹಂಚಿಕೆ ಕೇಸ್‌: ಎನ್‌ಐಎ ತನಿಖೆ

09:59 AM Dec 20, 2019 | sudhir |

ಕೊಚ್ಚಿ: ಕೇರಳದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆಯಡಿ (ಯುಎಪಿಎ) ಬಂಧಿಸಲ್ಪಟ್ಟಿರುವ ಇಬ್ಬರು ವಿದ್ಯಾರ್ಥಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ತಮ್ಮ ವಶಕ್ಕೆ ಪಡೆದು ತನಿಖೆಗೊಳಪಡಿಸಲಿದೆ. ಇವರ ವಿರುದ್ಧ ಮತ್ತೆ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುವುದು ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಕಳೆದ ತಿಂಗಳು ನಕ್ಸಲ್‌ ಕರಪತ್ರಗಳನ್ನು ಹಂಚುತ್ತಿರುವ ಹಾಗೂ ನಕ್ಸಲ್‌ ಸಂಪರ್ಕ ಹೊಂದಿರುವ ಆರೋಪದಲ್ಲಿ ಕಲ್ಲಿಕೋಟೆಯ ಕಾನೂನು ವಿದ್ಯಾರ್ಥಿ ಫ‌ಜಲ್‌ (24) ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿ ಅಲನ್‌ನನ್ನು (20) ಬಂಧಿಸಲಾಗಿತ್ತು. ಅಲ್ಲದೇ ಇವರು ಸಿಪಿಎಂ ಶಾಖಾ ಸಮಿತಿಯ ಸದಸ್ಯತ್ವ ಹೊಂದಿದ್ದಾರೆ. ಕಳೆದ ನ.27ರಂದು ಈ ಇಬ್ಬರು ವಿದ್ಯಾರ್ಥಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್‌ ವಜಾಗೊಳಿಸಿತ್ತು. ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ವಿದ್ಯಾರ್ಥಿಗಳ ಬಂಧನಕ್ಕೆ ಎಡಪಕ್ಷಗಳು ಆಡಳಿತ ಹೊಂದಿರುವ ರಾಜ್ಯಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next