Advertisement

‘ದಿ ಕಾಶ್ಮೀರ್ ಫೈಲ್ಸ್”ಚಿತ್ರದ ಬಗ್ಗೆ ನವಾಜುದ್ದೀನ್ ಸಿದ್ದಿಕಿ ಪ್ರತಿಕ್ರಿಯೆ ಹೀಗಿದೆ

01:12 PM Mar 27, 2022 | Team Udayavani |

ಮುಂಬಯಿ : ನಾನು ‘ದಿ ಕಾಶ್ಮೀರ್ ಫೈಲ್ಸ್” ಚಿತ್ರವನ್ನು ನೋಡಿಲ್ಲವಾದ್ದರಿಂದ ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ನಟ ನವಾಜುದ್ದೀನ್ ಸಿದ್ದಿಕಿ ಪ್ರತಿಕ್ರಿಯೆ ನೀಡಿದ್ದಾರೆ.

Advertisement

”ಎಬಿಪಿ ಐಡಿಯಾಸ್ ಆಫ್ ಇಂಡಿಯಾ” ಶೃಂಗಸಭೆಯಲ್ಲಿ ಮಾತನಾಡಿದ ಅವರು, ”ಬಾಲಿವುಡ್‌ನಲ್ಲಿ ಧ್ರುವೀಕರಣ ಆರಂಭವಾಗಿದೆಯೇ” ಎಂಬ ಪ್ರಶ್ನೆಗೆ ಉತ್ತರಿಸಿ, “ನನಗೆ ಅದರ ಬಗ್ಗೆ ತಿಳಿದಿಲ್ಲ, ಆದರೆ, ಪ್ರತಿಯೊಬ್ಬ ನಿರ್ದೇಶಕರು ಸಿನಿಮಾ ಮಾಡಲು ಒಂದು ಶೈಲಿ ಮತ್ತು ದೃಷ್ಟಿಕೋನವನ್ನು ಹೊಂದಿರುತ್ತಾರೆ. ಅವರು ತಮ್ಮ ದೃಷ್ಟಿಕೋನದಿಂದ ಸಿನಿಮಾ ಮಾಡಿದ್ದಾರೆ. ದೃಷ್ಟಿಕೋನದಿಂದ, ಇದು ಒಳ್ಳೆಯದು. ಇತರರು ತಮ್ಮ ದೃಷ್ಟಿಕೋನದಿಂದ ಭವಿಷ್ಯದಲ್ಲಿ ಚಲನಚಿತ್ರಗಳನ್ನು ಮಾಡುತ್ತಾರೆ. ಮತ್ತು, ಅದು ಅದ್ಭುತವಾಗಿರುತ್ತದೆ” ಎಂದಿದ್ದಾರೆ.

“ಸಿನಿಮಾ ನಿರ್ಮಾಪಕರು ಚಲನಚಿತ್ರವನ್ನು ಮಾಡುವಾಗ ಅವರದ್ದೇ ಆದ ದೃಷ್ಟಿಕೋನದಿಂದ, ವಿಷಯಗಳನ್ನು ನೋಡುವ ವಿಶಿಷ್ಟ ಶೈಲಿಯೊಂದಿಗೆ ಮಾಡುತ್ತಾರೆ. ಯಾವುದೇ ಚಲನಚಿತ್ರ ನಿರ್ಮಾಪಕರು ನೈಜ ಘಟನೆಗಳನ್ನು ಆಧರಿಸಿದ ಚಲನಚಿತ್ರಗಳಿಗೆ ತಮ್ಮದೇ ಆದ ದೃಷ್ಟಿಕೋನವನ್ನು ಸೇರಿಸಲು ಅವಕಾಶ ನೀಡಬೇಕು. ನಾನು ಚಿತ್ರ ನೋಡಿಲ್ಲವಾದ್ದರಿಂದ ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ” ಎಂದರು.

‘ದಿ ಕಾಶ್ಮೀರ್ ಫೈಲ್ಸ್’ ಬಾಕ್ಸ್ ಆಫೀಸ್‌ನಲ್ಲಿ ಕೋವಿಡ್ ನಂತರ ಅತಿ ಹೆಚ್ಚು ಹಣ ಗಳಿಸಿದ ಹಿಂದಿ ಚಲನಚಿತ್ರವಾಗಿದ್ದು, 3 ವಾರಗಳಲ್ಲಿ 211.83 ಕೋಟಿ ರೂ. ಗಳಿಸಿ ಮುನ್ನುಗ್ಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next