Advertisement

 ಹೋಳಿ ಹಬ್ಬಕ್ಕೆ ಶುಭಕೋರಿ ನಗೆಪಾಟಲಿಗೀಡಾದ ನವಾಜ಼್ ಶರೀಫ್‌

06:14 PM Mar 08, 2023 | Team Udayavani |

ನವದೆಹಲಿ: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ಼್ ಶರೀಫ್‌ ಅವರು ಹೋಳಿ ಹಬ್ಬಕ್ಕೆ ಟ್ವೀಟ್‌ ಮೂಲಕ ಶುಭಕೋರುವ ವೇಳೆ ತಪ್ಪು ಎಮೋಜಿ ಬಳಸಿ ನಗೆಪಾಟಲಿಗೀಡಾಗಿದ್ಧಾರೆ.

Advertisement

ನವಾಜ಼್ ಶರೀಫ್‌ ಅವರು ಹೋಳಿ ಹಬ್ಬಕ್ಕೆ ಶುಭ ಕೋರುವ ವೇಳೆ ದೀಪದ ಎಮೋಜಿ ಹಾಕಿ ಟ್ರೋಲ್‌ಗೆ ಆಹಾರವಾಗಿದ್ದಾರೆ.

ಹಿಂದೂ ಸಂಪ್ರದಾಯದ ಪ್ರಕಾರ ದೀಪಾವಳಿಯ ಸಂದರ್ಭ ಮನೆ, ನಗರಗಳನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ. ಅದೇ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಶುಭಕೋರುವ ವೇಳೆ ದೀಪದ ಎಮೋಜಿಗಳನ್ನು ಬಳಸುತ್ತೇವೆ.

ಆದರೆ ಇದೇ ಎಮೋಜಿಯನ್ನು ನವಾಜ಼್ ಶರೀಫ್‌ ಅವರು ಹೋಳಿ ಹಬ್ಬಕ್ಕೆ ಶುಭಕೋರಲು ಬಳಸಿದ್ದು, ಈ ಟ್ವೀಟ್‌ ಈಗ ಭಾರೀ ವೈರಲ್‌ ಆಗಿದೆ.

 

Advertisement

ಇದನ್ನೂ ಓದಿ: ಹೋಳಿ ಹಬ್ಬದ ಹಿಂದಿನ ಪೌರಾಣಿಕ ಕಥೆ ಏನು ಗೊತ್ತಾ?

Advertisement

Udayavani is now on Telegram. Click here to join our channel and stay updated with the latest news.

Next