Advertisement

ಕಬ್ಜ ಭರ್ಜರಿ ಶೂಟಿಂಗ್‌: ನವಾಬ್‌ ಷಾ ಎಂಟ್ರಿ- ಮಿನರ್ವ ಮಿಲ್‌ನಲ್ಲಿ ಚಿತ್ರತಂಡ

11:06 AM Oct 10, 2021 | Team Udayavani |

ಆರ್‌.ಚಂದ್ರು ನಿರ್ಮಾಣ, ನಿರ್ದೇಶನದ “ಕಬ್ಜ’ ಚಿತ್ರದ ಐದನೇ ಹಂತದ ಚಿತ್ರೀಕರಣ ಆರಂಭವಾಗಿದೆ. ಮಿನರ್ವ ಮಿಲ್‌ನಲ್ಲಿ ಹಾಕಲಾಗಿರುವ ಅದ್ಧೂರಿ ಸೆಟ್‌ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಬಾಲಿವುಡ್‌ನ‌ ನವಾಬ್‌ ಷಾ ಎಂಟ್ರಿಕೊಟ್ಟಿದ್ದಾರೆ. ಇತ್ತೀಚೆಗೆ ಆರ್‌.ಚಂದ್ರು ಚಿತ್ರದ ಕೆಲವು ಆ್ಯಕ್ಷನ್‌ ಎಪಿಸೋಡ್‌ಗಳನ್ನು ಚಿತ್ರೀಕರಿಸಿಕೊಂಡಿದ್ದು, ನವಾಬ್‌ ಷಾ ಹಾಗೂ ಉಪೇಂದ್ರ ಈ ದೃಶ್ಯದಲ್ಲಿ ಪಾಲ್ಗೊಂಡಿದ್ದರು.

Advertisement

ಚಿತ್ರದ ಬಗ್ಗೆ ಮಾತನಾಡಿದ ಆರ್‌.ಚಂದ್ರು, “ಇದು ಐದನೇ ಶೆಡ್ನೂಲ್‌. ಇಲ್ಲಿ ನಾವು ಏನೋ ಒಂದು ಮಾಡಬೇಕಲ್ಲ ಎಂದು ಮಾಡುತ್ತಿಲ್ಲ. ಪಕ್ಕಾ ಪ್ಲ್ರಾನ್‌ ಮಾಡಿಕೊಂಡು ಮಾಡುತ್ತಿದ್ದೇವೆ. ನವಾಬ್‌ ಷಾ ಅವರಂತಹ ಟೆರಿಫಿಕ್‌ ಅಜಾನುಬಾಹು ಬೇಕಿತ್ತು. ಅವರಿಲ್ಲಿ ಅಷ್ಟೇ ರಗಡ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. ಹಾಲಿವುಡ್‌ ಮಟ್ಟದಲ್ಲಿ ನಮ್ಮ ಸಿನಿಮಾ ತಯಾರಾಗುತ್ತಿದೆ. ಇಲ್ಲಿ 46 ದಿನಗಳ ಕಾಲ ಶೂಟಿಂಗ್‌ ಮಾಡಲಿದ್ದೇವೆ. ಬಳಿಕ ಹೈದರಾಬಾದ್‌, ಮಂಗಳೂರು ಅಲ್ಲಿ ನಡೆಯಲಿದೆ. ದಿನಗಳನ್ನು ಲೆಕ್ಕ ಹಾಕುತ್ತಿಲ್ಲ. ಕ್ವಾಲಿಟಿ ಕಂಟೆಂಟ್‌ ಕೊಡುವುದು ನಮ್ಮ ಉದ್ದೇಶ. ಇದೊಂದು ಅಂಡರ್‌ ವಲ್ಡ್ ನ ಔಟ್‌ ಆಫ್ ದಿ ವಲ್ಡ್ ಸಿನಿಮಾ ಎಂದು ಕರೆಯಬಹುದು’ ಎನ್ನುವುದು ಚಂದ್ರು ಮಾತು.

ನಟ ಉಪೇಂದ್ರ ಕೂಡಾ “ಕಬ್ಜ’ ಬಗ್ಗೆ ಖುಷಿಯಾಗಿದ್ದಾರೆ. “ಕಥೆ ಹೇಳಿದಾಗ 120 ದಿನ ಆಗುತ್ತದೆ ಎಂದಿದ್ದರು. ಮೊನ್ನೆ ಮತ್ತೆ ಕಥೆ ಹೇಳಿದಾಗ 150 ದಿನ ಬೇಕೆಂದರು. ಚಂದ್ರು ಅವರ ಸಿನಿಮಾ ಪ್ಯಾಶನ್‌ ಮೆಚ್ಚುವಂಥದ್ದು. ಏನೋ ಒಂದು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ನನ್ನ ಸಹಕಾರ ಇದ್ದೇ ಇದೆ. ಅವರ ಕನಸಿಗೆ ನಮ್ಮ ಬೆಂಬಲ. ಕಥೆ ಕೇಳಿದಾಗ ಅಚ್ಚರಿಯಾಗಿತ್ತು. ಹೇಗೆ ಮಾಡುತ್ತೀರಿ ಎಂದು ಚಂದ್ರುಗೆ ಕೇಳಿದ್ದೆ. ಅವರು ಏನು ಅಂದುಕೊಂಡಿದ್ದಾರೋ ಅದು ನೆರವೇರುತ್ತಿದೆ’ ಎಂದರು ಉಪೇಂದ್ರ.

ನಾನು ಹಲವು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿದ್ದೇನೆ. ತೆಲುಗು, ಮಲಯಾಳಂನಲ್ಲಿ ಸಿನಿಮಾ ಮಾಡಿದ್ದೇನೆ. ಕನ್ನಡದಲ್ಲಿಯೂ ಒಳ್ಳೆ ಅವಕಾಶ ಸಿಕ್ಕಿದೆ ಎಂದು ಖುಷಿ ವ್ಯಕ್ತಪಡಿಸಿದರು ನಟ ನವಾಬ್‌ ಷಾ ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next