Advertisement

ನೌಕಾಪಡೆ ಮುಖ್ಯಸ್ಥರಾಗಿ ಎಡ್ಮಿರಲ್‌ ಕರಮ್‌ಬೀರ್‌ ಸಿಂಗ್‌ ಅಧಿಕಾರ ಸ್ವೀಕಾರ

10:51 AM Jun 01, 2019 | Team Udayavani |

ಹೊಸದಲ್ಲಿ: ಭಾರತದ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಎಡ್ಮಿರಲ್‌ ಕರಮ್‌ಬೀರ್‌ ಸಿಂಗ್‌ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.

Advertisement

ಅಧಿಕಾರ ಸ್ವೀಕರಿಸಿ ಮಾತನಾಡಿದ ಕರಮ್‌ಬೀರ್‌ ಸಿಂಗ್‌, ನೌಕಾಪಡೆ ಘನ ಅಡಿಪಾಯವನ್ನು ಹೊಂದಿದೆ ಮತ್ತು ಹೊಸ ಎತ್ತರವನ್ನು ತಲುಪಿರುವುದನ್ನು ನನ್ನ ಹಿಂದಿನವರು ಖಚಿತಪಡಿಸಿದ್ದಾರೆ. ಅವರ ಪ್ರಯತ್ನಗಳೊಂದಿಗೆ ಕಡಲಿನಲ್ಲಿನ ಭದ್ರತಾ ಸವಾಲುಗಳನ್ನು ಪೂರೈಸಲು ದೃಢವಾದ, ವಿಶ್ವಾಸಾರ್ಹ ಮತ್ತು ಸಿದ್ಧವಾಗಿರುವ ನೌಕಾಪಡೆಯನ್ನು ರಾಷ್ಟ್ರಕ್ಕೆ ಒದಗಿಸಲು ನಾನು ಪ್ರಯತ್ನ ಮುಂದುವೆರೆಸುತ್ತೇನೆ ಎಂದು ಹೇಳಿದರು.

ಕರಮ್‌ಬೀರ್‌ ಅವರ ನೇಮಕಾತಿಯನ್ನು ಸಶಸ್ತ್ರ ಪಡೆಗಳ ಟ್ರಿಬ್ಯೂನಲ್ ಎದುರು ಅಂಡಮಾನ್‌ ನಿಕೋಬಾರ್‌ ಕಮಾಂಡ್‌ನ‌ ಸಹ ಎಡ್ಮಿರಲ್‌ ಬಿಮಲ್‌ ವರ್ಮಾ ಅವರು ಪ್ರಶ್ನಿಸಿದ್ದರು. ತನ್ನ ಹಿರಿತನವನ್ನಕಡೆಗಣಿಸಿ ಕರಮ್‌ ಬೀರ್‌ ನೇಮಕ ಮಾಡುವ ಬಗ್ಗೆ ಪ್ರಶ್ನಿಸಿದ್ದರು.

ಸರ್ಕಾರ ಕರಮ್‌ಬೀರ್‌ ಅವರ ನೇಮಕದ ಕುರಿತಾಗಿ ದಾಖಲೆಗಳನ್ನುಸಲ್ಲಿಸಲು ಕೇಂದ್ರ ಸರ್ಕಾರ ಸಮಯಾವಕಾಶ ಕೇಳಿದ ಹಿನ್ನಲೆಯಲ್ಲಿ ಎಟಿಎಫ್ ಜುಲೈ 17 ರಂದು ವಿಚಾರಣೆ ಮುಂದೂಡಿಕೆ ಮಾಡಿತ್ತು.

ಇದೇ ತಿಂಗಳ ಆರಂಭದಲ್ಲಿ ರಕ್ಷಣಾ ಸಚಿವಾಲಯ ಅಡ್ಮಿರಲ್ ವರ್ಮಾ ಅವರ ಅರ್ಜಿಯನ್ನು ತಿರಸ್ಕರಿಸಿತ್ತು.

Advertisement

ಇಂದು ಮೇ 31 ರಂದು ಎಡ್ಮಿರಲ್‌ ಸುನೀಲ್‌ ಲಾಂಬಾ ಅವರು ನಿವೃತ್ತರಾದ ಹಿನ್ನಲೆಯಲ್ಲಿ ಕರಮ್‌ ಬೀರ್‌ ಅವರ ನೇಮಕಮಾಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next