Advertisement

ನೌಕಾದಳ ಮುಖ್ಯಸ್ಥ ಅಡ್ಮಿರಲ್ ಕರಮ್‌ ಬೀರ್‌ ಸಿಂಗ್ ಕಾರವಾರ ನೌಕಾನೆಲೆಗೆ ಭೇಟಿ

12:07 PM Nov 03, 2015 | sudhir |

ಕಾರವಾರ : ನೌಕಾದಳ ಮುಖ್ಯಸ್ಥ ಆಡ್ಮಿರಲ್ ಕರಮ್ ಬೀರ್ ಸಿಂಗ್ ಕಾರವಾರ ನೌಕಾನೆಲೆಗೆ ಭೇಟಿ ನೀಡಿದರು. ಅವರನ್ನು ಕರ್ನಾಟಕದ ನೌಕಾದಳದ ಕಮಾಂಡರ್ ಹಾಗೂ ಇತರ ಅಧಿಕಾರಿಗಳು ನೇವಿ ಸಂಪ್ರದಾಯದಂತೆ ಸ್ವಾಗತಿಸಿದರು.

Advertisement

ಐಎನ್‌ಎಸ್ ಕದಂಬ ನೌಕಾನೆಲೆಯ ವಿಶೇಷಗಳು ಹಾಗೂ ಶಿಪ್ ಲಿಫ್ಟ್ ಯಾರ್ಡ್ ಗಳಿಗೆ ಭೇಟಿ ನೀಡಿದ ನೌಕಾದಳ ಮುಖ್ಯಸ್ಥ ಆಡ್ಮಿರಲ್ ಕರಮ್ ಬೀರ್ ಸಿಂಗ್ ನೆಲೆಯ ಮಾಹಿತಿ ತಿಳಿದರು. ಎರಡನೇ ಹಂತದ ಕಾಮಗಾರಿಗಳು ಹಾಗೂ ಭವಿಷ್ಯದಲ್ಲಿ ನೌಕಾದಳದ ಕಾರ್ಯ ಚಟುವಟಿಕೆಯನ್ನು ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿದರು. ಶಿಪ್ ಲಿಫ್ಟ್ ಯಾರ್ಡ್ ನ ಮಹತ್ವ ತಿಳಿದು, ಅದನ್ನು ವೀಕ್ಷಿಸಿದ ಆಡ್ಮಿರಲ್ ಕರಮ್ ಬೀರ್ ಸಿಂಗ್ , ಕೋವಿಡ್ ಸಮಯದಲ್ಲಿ ನೌಕಾದಳದ ಶಿಪ್‌ಗಳು ಹಾಗು ಸಬ್‌ಮರೀನ್‌ಗಳು ತಾಂತ್ರಿಕ ನೆರವು ಹಾಗೂ ರಿಪೇರಿಯಾದ ಬಗ್ಗೆ ತಿಳಿದು ಕೊಂಡರು.

ನೌಕಾನೆಲೆಯ ಅಗತ್ಯಗಳನ್ನು ಹಾಗೂ ಮುಂದೆ ಶತ್ರು ರಾಷ್ಟ್ರ ಗಳಿಂದ ರಕ್ಷಣೆ ಪಡೆಯಲು ನೆಲೆಯಲ್ಲಿ ಆಗಬೇಕಾದ ಕೆಲಸಗಳ ಮಾಹಿತಿ ಪಡೆದರು. ಅದರ ನೀಲ ನಕಾಶೆಯನ್ನು, ಭಾರತೀಯ ನೌಕಾನೆಲೆ ಬಲಪಡಿಸಲು ಇರುವ ಕಾರ್ಯತಂತ್ರಗಳನ್ನು ಸೂಕ್ಷ್ಮವಾಗಿ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿದರು.

ನಂತರ ಐಎನ್‌ಎಸ್ ಪತಂಜಲಿ ಬಗ್ಗೆ ಮಾಹಿತಿ ಪಡೆದರು. ಉತ್ತರ ಕನ್ನಡದಲ್ಲಿ ಕೋವಿಡ್ ಪೀಡಿತ ಸಾರ್ವಜನಿಕರಿಗೆ ಮೊಟ್ಟ ಮೊದಲ ಬಾರಿಗೆ ದೇಶದ ರಕ್ಷಣಾ ಪಡೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಗ್ಗೆ, ಕೋವಿಡ್ ಪೀಡಿತರು ಗುಣಮುಖರಾದ ಬಗ್ಗೆ ಸಹ ಮಾಹಿತಿ ಪಡೆದು, ಆ ಬಗ್ಗೆ ಸಂತಸ ವ್ಯಕ್ತಪಡಿಸಿದರು.

Advertisement

ನಂತರ ನೇವಿ ಸಿಬ್ಬಂದಿ ಕೋವಿಡ್ ನಿಂದ ಜಾಗೃತವಾಗಿರಬೇಕು ಎಂದು ಎಚ್ಚರಿಸಿದರಲ್ಲದೇ, ದಸರಾ ಹಬ್ಬದ ಸಂಭ್ರಮವನ್ನು ಸವಿಯುವಂತೆ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next