Advertisement

ನಾವುಂದ : ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ, ಅರ್ಧ ಕೆಜಿ ಗಾಂಜಾ ವಶ

10:17 PM Jun 28, 2021 | Team Udayavani |

ಬೈಂದೂರು : ಕುಂದಾಪುರ ಡಿವೈಎಸ್ಪಿಯಾದ ಶ್ರೀಕಾಂತ್ ಅವರ ಮಾಹಿತಿ ಮೇರೆಗೆ ಬೈಂದೂರು ವೃತ್ತನಿರೀಕ್ಷಕರಾದ ಸಂತೋಷ್ ಕಾಯ್ಕಿಣಿ, ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿಯಾದ ಏನ್ ನಂಜಾ ನಾಯ್ಕ ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ನಾವುಂದದ ರೈಲ್ವೇ ಸೇತುವೆ ಬಳಿ ಸೋಮವಾರ ಸಂಜೆ 5.50ರ ಸುಮಾರಿಗೆ ಕೊಡೇರಿ ಬೈಲ್ಕಿನಬಾಗಿಲು ಹಾಲಿ ನಿವಾಸಿ ಜಾಫರ್ ಸಾದಿಕ್ 42 ಪ್ರಾಯದ ಆರೋಪಿಯನ್ನು ಬಂಧಿಸಲಾಗಿದೆ.

Advertisement

ಈತನನ್ನು ವಶಕ್ಕೆ ಪಡೆದ ಪೊಲೀಸರು ಈತನಿಂದ 15.000 ರೂಪಾಯಿ ಮೌಲ್ಯದ ಅರ್ಧ ಕೆಜಿ ತೂಕದ ಗಾಂಜಾ, ಈ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ, ಮೊಬೈಲ್ ಪೋನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ :ಆರ್ಚರಿ ಜಾಗತಿಕ ರ್‍ಯಾಂಕಿಂಗ್‌: ಅಗ್ರಸ್ಥಾನಕ್ಕೇರಿದ ದೀಪಿಕಾ ಕುಮಾರಿ

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next