Advertisement

ಹಬ್ಬದ ಸಡಗರಕ್ಕೆ ಹೊಸ ಮೆರುಗು; ನವರಾತ್ರಿ ಸಂಭ್ರಮಕ್ಕೆ ಉದಯವಾಣಿ ನವರೂಪ

12:32 AM Sep 24, 2022 | Team Udayavani |

ಮಣಿಪಾಲ: ನಾರಿಶಕ್ತಿಯನ್ನು ಆರಾಧಿಸುವ, ಗೌರವಿಸುವ, ಸಂಭ್ರಮಿಸುವ ನವರಾತ್ರಿಗೆ ಇನ್ನು ಕೆಲವೇ ದಿನ. ಒಂಬತ್ತು ದಿನಗಳ ಈ ಮಹಾಪರ್ವದ ಸಡಗರವನ್ನು ಹೆಚ್ಚಿಸುವುದಕ್ಕಾಗಿ ಜನಮನದ ಜೀವನಾಡಿ ಉದಯವಾಣಿ ಆಯೋಜಿಸುತ್ತಿರುವ “ನವರೂಪ’ವೂ ಮತ್ತೆ ಬಂದಿದೆ.

Advertisement

ನವರಾತ್ರಿಯ ಒಂಬತ್ತು ದಿನಗಳಲ್ಲಿ ಹೆಂಗೆಳೆಯರು ಪ್ರತೀ ದಿನವೂ ಒಂದೊಂದು ವರ್ಣದ ಸೀರೆಯನ್ನು ಧರಿಸಿ ಸಂಭ್ರಮಿ ಸುವುದಕ್ಕೆ ಉದಯವಾಣಿ ಕಲ್ಪಿಸಿರುವ ಅವಕಾಶ ಈ ನವರೂಪ.

ಕೇವಲ ನವವರ್ಣಗಳ ಸೀರೆ ಧರಿಸಿ ಖುಷಿ ಪಡುವುದು ಮಾತ್ರ ಅಲ್ಲ; ಗೆಳತಿಯರ ಜತೆ ಸೇರಿ ಹಬ್ಬದ ಹೊಸ ವಾತಾವರಣವನ್ನು ಸೃಷ್ಟಿಸುವು ದಕ್ಕೂ ಉದಯವಾಣಿ ನವರೂಪ ಅವಕಾಶ ಮಾಡಿ ಕೊಡುತ್ತದೆ. ಭರಪೂರ ಸಂಭ್ರಮ ಪಡುವುದಕ್ಕೆ ನವರೂಪ ಒಂದು ಉತ್ತಮ ಅವಕಾಶ. ಈ ಕಾರಣ ದಿಂದಾಗಿಯೇ ಈ ಬಾರಿಯ ಉದಯವಾಣಿ “ನವರೂಪ’ಕ್ಕೆ ಹೆಂಗೆಳೆಯರಿಂದ ಭರ್ಜರಿ ಪ್ರತಿಸ್ಪಂದನೆ ವ್ಯಕ್ತವಾಗುವ ನಿರೀಕ್ಷೆಯಿದೆ.

ಇದಕ್ಕೆ ತಕ್ಕಂತೆ ಈಗಾಗಲೇ ಸಾಲುಮರದ ತಿಮ್ಮಕ್ಕ, ಸಚಿವೆ ಶಶಿಕಲಾ ಜೊಲ್ಲೆ, ಡಾ| ಸಂಧ್ಯಾ ಎಸ್‌. ಪೈ ಆದಿಯಾಗಿ ಪ್ರಮುಖ ಒಂಬತ್ತು ಮಂದಿ ನಾರೀಮಣಿಯರು ನಿಯೋಜಿತ ವರ್ಣಗಳ ಸೀರೆಗಳನ್ನು ಉಟ್ಟು ನವರೂಪದ ಸಂಭ್ರಮಕ್ಕೆ ಮುನ್ನುಡಿ ಬರೆದಿದ್ದಾರೆ.

ಮೊದಲ ದಿನ, ಸೆ. 26ರಂದು ಶ್ವೇತ ಅಂದರೆ ಬಿಳಿ, ಎರಡನೇ ದಿನ, ಸೆ. 27ರಂದು ಕೆಂಪು, ಮೂರನೇ ದಿನ, ಸೆ. 28ರಂದು ನೀಲಿ, ನಾಲ್ಕನೇ ದಿನ ಸೆ. 29 ರಂದು ಹಳದಿ, ಐದನೇ ದಿನ, ಸೆ. 30ರಂದು ಹಸುರು, ಆರನೇ ದಿನ, ಅ. 1ರಂದು ಬೂದು, ಏಳನೇ ದಿನ ಅ. 2ರಂದು ಕಿತ್ತಳೆ, ಎಂಟನೇ ದಿನ ಅ. 3 ರಂದು ಗುಲಾಬಿ, ಒಂಬತ್ತನೇ ದಿನ, ಅ. 4ರಂದು ನೇರಳೆ – ಹೀಗೆ ಒಂಬತ್ತು ದಿನಗಳಿಗೆ ಒಂಬತ್ತು ವರ್ಣಗಳು.

Advertisement

ಆಯಾ ದಿನಕ್ಕೆ ಸೂಚಿತವಾದ ವರ್ಣದ ಸೀರೆ ಯನ್ನು ಧರಿಸಿ ಚಿತ್ರ ತೆಗೆದು ಆಯಾ ದಿನ ಸಂಜೆ 3 ಗಂಟೆ ಒಳಗೆ ವಾಟ್ಸ್‌ಆ್ಯಪ್‌ ಮಾಡಬೇಕು. ಹಳೆಯ ಚಿತ್ರಗಳಿಗೆ ಅವಕಾಶ ಇಲ್ಲ. ಯಾವುದೇ ವಯಸ್ಸಿನವರೂ ಭಾಗವಹಿಸಬಹುದು. ಕುಟುಂಬ ಸದಸ್ಯೆಯರು, ಗೆಳತಿಯರು, ಸಹೋದ್ಯೋಗಿಗಳು, ಸಂಘ ಸಂಸ್ಥೆಗಳ ಸದಸ್ಯೆಯರು ಭಾಗವಹಿಸಲು ಉತ್ತಮ ಅವಕಾಶ. ಸಮೂಹ ಚಿತ್ರಗಳಿಗೆ ಆದ್ಯತೆ, ಕನಿಷ್ಠ ಮೂರು ಮಂದಿ ಇರಬೇಕು. ಹೆಸರು, ಊರು, ಸಂಪರ್ಕ ಸಂಖ್ಯೆ ನಮೂದಿಸಲೇಬೇಕು. ಉತ್ತಮ ಗುಣಮಟ್ಟದ ಆಯ್ದ ಚಿತ್ರಗಳನ್ನು ಮರುದಿನದ ಸಂಚಿಕೆಯಲ್ಲಿ ಪ್ರಕಟಿಸಲಾಗುತ್ತದೆ.

ಆಯಾ ಪ್ರದೇಶದವರು (ಉಡುಪಿ, ಕುಂದಾಪುರ, ಕಾರ್ಕಳ, ಮಂಗಳೂರು, ಮಂಗಳೂರು ಗ್ರಾಮಾಂ ತರ, ಪುತ್ತೂರು, ಬಂಟ್ವಾಳ) ನಿಗದಿತ ವಾಟ್ಸ್‌ಆ್ಯಪ್‌ ಸಂಖ್ಯೆಗಳಿಗೆ ಚಿತ್ರಗಳನ್ನು ಕಳುಹಿಸಬೇಕು.

ಅಪೂರ್ವ ಅವಕಾಶ
ನವರಾತ್ರಿ ಸಂಭ್ರಮವನ್ನು ಇಮ್ಮಡಿ- ಮುಮ್ಮಡಿಗೊಳಿಸಿಕೊಳ್ಳಲು ಉದಯವಾಣಿಯ ನವರೂಪ ಒಂದು ಉತ್ತಮ ಅವಕಾಶ. ವರ್ಷಕ್ಕೊಮ್ಮೆ ಕದ ತಟ್ಟುವ ಈ ಅಪೂರ್ವ ಕಾರ್ಯಕ್ರಮ ನಿಮ್ಮ ಹಬ್ಬದ ಆಚರಣೆಗೆ ಒಂದು ವಿಶಿಷ್ಟ ಆಯಾಮ ನೀಡಲಿದೆ. ಬನ್ನಿ, ಸೆ. 26ರಿಂದ ಆರಂಭವಾಗುವ ಉದಯವಾಣಿ ನವರೂಪದಲ್ಲಿ ನಿಮ್ಮ ಗೆಳತಿಯರು, ಕುಟುಂಬ ಸದಸ್ಯೆಯರ ಜತೆಗೆ ಪಾಲ್ಗೊಂಡು ಮಿಂಚುವುದಷ್ಟೇ ಅಲ್ಲ; ಉದಯವಾಣಿ ದಿನಪತ್ರಿಕೆಯ ಪುಟಗಳನ್ನು ಅಲಂಕರಿಸುವುದನ್ನು ಕಂಡು ಹಿರಿಹಿರಿ ಹಿಗ್ಗಿ.

ಬಹುಮಾನ ಪಡೆಯುವ ಅದೃಷ್ಟಶಾಲಿಗಳಾಗಿ
ಉದಯವಾಣಿ ನವರೂಪದಲ್ಲಿ ಪ್ರತೀ ದಿನ ಬಹುಮಾನ ಗೆಲ್ಲುವ ಅವಕಾಶವೂ ಇದೆ. ಪ್ರತೀ ದಿನ ಮೂವರು ಅದೃಷ್ಟ ಶಾಲಿಗಳನ್ನು ಚೀಟಿ ಎತ್ತಿ ಆರಿಸಲಾಗುತ್ತದೆ. ಹಬ್ಬದ ಕೊನೆಯಲ್ಲಿ ಬಂಪರ್‌ ಬಹುಮಾನ ಪಡೆಯುವ ಅದೃಷ್ಟವೂ ಇದೆ.

 

Advertisement

Udayavani is now on Telegram. Click here to join our channel and stay updated with the latest news.

Next