Advertisement

ಸಿಧುಗೆ ಜೈಲಲ್ಲಿ ವಿಶೇಷ ಟೀ, ಸೌತೆಕಾಯಿ ಜ್ಯೂಸ್‌!

11:37 AM May 27, 2022 | Team Udayavani |

ಪಟಿಯಾಲಾ: “ಬೆಳಗ್ಗೆ ಗಿಡಮೂಲಿಕೆಯುಕ್ತ ಅಂಶಗಳಿಂದ ಕೂಡಿದ ಟೀ, ರಾತ್ರಿ ನಿದ್ದೆಗೆ ಜಾರುವ ಮೊದಲು ಕ್ಯಾಮೊಮೈಲ್‌ ಹೂವುಗಳ ಎಸಳುಗಳಿಂದ ತಯಾರಿಸಿದ ಚಹಾ, ಇದರ ಮಧ್ಯೆ ಜ್ಯೂಸ್‌, ಎಳನೀರು, ಹಣ್ಣು, ರೋಟಿ…’

Advertisement

ಒಂದು ವರ್ಷದ ಜೈಲು ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಚಿವ ನವಜೋತ್‌ ಸಿಂಗ್‌ ಸಿಧು ಅವರಿಗೆ ಜೈಲಲ್ಲಿ ನೀಡಲಾ ಗುವ ಆಹಾರದ ಚಾರ್ಟ್‌ನಲ್ಲಿನ ಅಂಶ. ಸಿಧು ಅವರ ವೈದ್ಯಕೀಯ ಸ್ಥಿತಿ ಗಮನಿಸಿ ವೈದ್ಯರು ಸೂಚಿಸಿರುವ ಆಹಾರದ ಪಟ್ಟಿಯಲ್ಲಿ ಬೀಟ್‌ರೂಟ್‌ ಅಥವಾ ಸೋರೆಕಾಯಿ, ಎಳೆಸೌತೆಕಾಯಿ ಜ್ಯೂಸ್‌ ನೀಡಲು ಶಿಫಾರಸು ಮಾಡಲಾಗಿದೆ. ಬೆಳಗ್ಗೆ, ಮಧ್ಯಾಹ್ನ, ರಾತ್ರಿಯ ಊಟಕ್ಕಾಗಿ ವಿಶೇಷ ರೀತಿಯ ತಿನಸುಗಳನ್ನೂ ಪಟಿಯಾಲದ ರಾಜೇಂದ್ರ ಆಸ್ಪತ್ರೆಯ ಆಹಾರ ತಜ್ಞರು ಶಿಫಾರಸು ಮಾಡಿದ್ದಾರೆ. ಜಾಲತಾಣಗಳಲ್ಲಿ ಸಿಧುಗೆ ನೀಡಲಾಗಿರುವ ಆಹಾರದ ಚಾರ್ಟ್‌ ವೈರಲ್‌ ಆಗಿದೆ.

ತಾಜಾ ಹಾಲು, ಎಳನೀರು, ಬಾದಾಮಿ, ವಾಲ್‌ನಟ್‌, ಅಲೋವೇರಾ ಅಥವಾ ತುಳಸಿ, ಪುದಿನ ಅಥವಾ ಕ್ಯಾರೆಟ್‌ ಜ್ಯೂಸ್‌, ಕಲ್ಲಂಗಡಿ, ಕಿವಿ, ಸ್ಟ್ರಾಬೆರಿ, ಬೆಣ್ಣೆಹಣ್ಣು ಜ್ಯೂಸ್‌, ಮಧ್ಯಾಹ್ನಕ್ಕೆ ಒಂದು ಚಪಾತಿ ಅಥವಾ ರೋಟಿ, ಸಲಾಡ್‌, ಲಸ್ಸಿ, ಸಂಜೆಗೆ ಟೀ, ಪನೀರ್‌ ಸ್ಲೆ„ಸ್‌, ರಾತ್ರಿಗೆ ಸೂಪ್‌, ಚಹಾ…. ಹೀಗೆ ಪಟ್ಟಿ ಬಹಳ ಉದ್ದವಿದೆ. ಇದನ್ನು ನೋಡಿದ ಜೈಲಧಿಕಾರಿಯೊಬ್ಬರು, “ಇದು ಸೆವೆನ್‌ ಸ್ಟಾರ್‌ ಹೋಟೆಲ್‌ ಮೆನು’ ಎಂದು ಬಣ್ಣಿಸಿದ್ದಾರೆ.

ವರ್ಕ್‌ ಫ್ರಂ ಸೆಲ್‌: ಇಷ್ಟು ಮಾತ್ರವಲ್ಲ  ಸಿಧು ಇನ್ನು ಮುಂದೆ ಕ್ಲರ್ಕ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಆದರೆ, ಅವರು ಜೈಲಿನ ಸೆಲ್‌ನಿಂದಲೇ ಕೆಲಸ ಮಾಡಲಿದ್ದಾರೆ. ಮೊದಲ ಮೂರು ತಿಂಗಳ ಅವಧಿಯಲ್ಲಿ ಅವರಿಗೆ ಸಂಬಳ ನೀಡಲಾಗುವುದಿಲ್ಲ. ನಂತರದ ಅವಧಿಯಲ್ಲಿ ಸಿಧು ಅವರಿಗೆ 30 ರೂ.ಗಳಿಂದ 90 ರೂ.ವರೆಗೆ ವೇತನ ನೀಡಲಾಗುತ್ತದೆ. ಅದನ್ನು ಸಿಧು ಅವರ ಬ್ಯಾಂಕ್‌ ಖಾತೆಗೇ ಜಮೆ ಮಾಡಲಾಗುತ್ತದೆ. ಕೋರ್ಟ್‌ಗಳಿಗೆ ಸಂಬಂಧಿಸಿದ ಕಡತಗಳಲ್ಲಿರುವ ದೀರ್ಘಾವಧಿಯ ತೀರ್ಪುಗಳನ್ನು ಜೈಲಿನ ಕಡತಗಳಿಗೆ ಅನ್ವಯವಾಗುವಂತೆ ಸಂಕ್ಷಿಪ್ತಗೊಳಿ ಸುವ ಕೆಲಸವನ್ನು ಅವರಿಗೆ ವಹಿಸಿಕೊಡಲಾಗುತ್ತದೆ. ಭದ್ರತಾ ಕಾರಣಗಳಿಗಾಗಿ ಕಾರಾಗೃಹದಿಂದ ಹೊರಕ್ಕೆ ಕಳುಹಿಸಿ ಕೆಲಸ ಮಾಡಿಸದೇ ಇರಲು ಅಧಿಕಾರಿಗಳು ಈಗಾಗಲೇ ನಿರ್ಧರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next