ಚಂಡೀಗಢ: 34 ವರ್ಷಗಳ ಹಿಂದಿನ ಪ್ರಕರಣದಲ್ಲಿ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಚಿವ ನವಜೋತ್ ಸಿಂಗ್ ಸಿಧು ಶುಕ್ರವಾರ ಪಟಿಯಾಲಾದ ಸೆಂಟ್ರಲ್ ಜೈಲಿನಲ್ಲಿ ರಾತ್ರಿ ಕಳೆದಿದ್ದಾರೆ. 8 ಕೈದಿಗಳೊಂದಿಗೆ ಸಿಧು ಜೈಲಿನ ಬ್ಯಾರೆಕ್ ನಂ 10ರಲ್ಲಿ ಇದ್ದಾರೆ.
ಶುಕ್ರವಾರ ರಾತ್ರಿ ಧಾಲ್, ರೋಟಿ ಕೊಡಲಾಗಿದೆಯಾದರೂ ಆರೋಗ್ಯ ಸಮಸ್ಯೆ ಇರುವ ಕಾರಣ ಸಿಧು ರೋಟಿ ತಿನ್ನದೆ ಕೇವಲ ಹಣ್ಣು ತಿಂದಿದ್ದಾರೆ. ಹಲವು ವರ್ಷಗಳಿಂದ ರೋಟಿ ತಿನ್ನದ ಅವರು, ತಮಗೆ ಬೇರೆ ಊಟದ ವ್ಯವಸ್ಥೆಗಾಗಿ ಜೈಲಧಿಕಾರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಅವರಿಗೆ ಒಂದು ಹಾಸಿಗೆ, ಎರಡು ಮೇಲು ಹಾಸಿಗೆ ಮತ್ತು 2 ದಿಂಬಿನ ಕವರ್, 1 ಹೊದಿಕೆ, 4 ಜೊತೆ ಬಿಳಿ ಕುರ್ತಾ-ಪೈಜಾಮ, 1 ಟೇಬಲ್ ಮತ್ತು ಕುರ್ಚಿ, 1 ಕಪಾಟು, 2 ಟರ್ಬನ್, 1 ಜೊತೆ ಶೂ ಕೊಟ್ಟಿರುವುದಾಗಿ ಹೇಳಲಾಗಿದೆ.
ಇನ್ನೂ ಒಂದು ವರ್ಷ ಕಾಲ ಜೈಲಲ್ಲಿ ಇರಬೇಕಾಗಿರುವುದರಿಂದ ಅವರು ಕೆಲಸ ಮಾಡುವುದೂ ಅನಿವಾರ್ಯವಾಗಲಿದೆ.
ಇದೇ ಜೈಲಿನಲ್ಲಿ ಶಿರೋಮಣಿ ಅಕಾಲಿ ದಳದ ನಾಯಕ ಬಿಕ್ರಂ ಸಿಂಗ್ ಮಜೀತಾ ಕೂಡ ಇದ್ದಾರೆ. ಇಬ್ಬರು ನಾಯಕರೂ ಇತ್ತೀಚೆಗೆ ಮುಕ್ತಾಯವಾಗಿದ್ದ ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭಿಸಿದ್ದರು.