Advertisement

ಹಾಕಿ ವಿಶ್ವಕಪ್‌ ಗೆದ್ದರೆ ತಲಾ ಕೋಟಿ ರೂ.: ನವೀನ್‌ ಪಟ್ನಾಯಕ್‌

11:37 PM Jan 05, 2023 | Team Udayavani |

ಭುವನೇಶ್ವರ: ಮುಂಬರುವ ಎಫ್ಐಎಚ್‌ ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಒಂದು ವೇಳೆ ಭಾರತೀಯ ತಂಡವು ಪ್ರಶಸ್ತಿ ಗೆದ್ದರೆ ತಂಡದ ಎಲ್ಲ ಆಟಗಾರರಿಗೆ ತಲಾ ಒಂದು ಕೋಟಿ ರೂ. ನಗದು ನೀಡಲಾಗುವುದು ಎಂದು ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರು ಗುರುವಾರ ಪ್ರಕಟಿಸಿದ್ದಾರೆ.

Advertisement

ರೂರ್ಕೆಲಾಕ್ಕೆ ಭೇಟಿ ನೀಡಿದ ಪಟ್ನಾಯಕ್‌ ಅವರು ಬಿರ್ಸಾ ಮುಂಡಾ ಹಾಕಿ ಕ್ರೀಡಾಂಗಣ ಸಂಕೀರ್ಣದಲ್ಲಿರುವ ವಿಶ್ವಕಪ್‌ ಗ್ರಾಮವನ್ನು ಉದ್ಘಾಟಿಸಿದರು. ದಾಖಲೆ 9 ತಿಂಗಳ ಅವಧಿಯಲ್ಲಿ ಎಲ್ಲ ಸೌಕರ್ಯಗಳನ್ನು ಹೊಂದಿರುವ ಸುಸಜ್ಜಿತ 225 ಕೊಠಡಿಗಳಿರುವ ಗ್ರಾಮವನ್ನು ನಿರ್ಮಿಸಲಾಗಿದೆ. ಇಲ್ಲಿ ವಿಶ್ವಕಪ್‌ಗೆ ಆಗಮಿಸುವ ಎಲ್ಲ ತಂಡಗಳ ಆಟಗಾರರು ಮತ್ತು ಅಧಿಕಾರಿಗಳು ಉಳಿದುಕೊಳ್ಳಲಿದ್ದಾರೆ.

ಇದೇ ಸಂದರ್ಭ ಪಟ್ನಾಯಕ್‌ ಅವರು ವಿಶ್ವಕಪ್‌ ಗ್ರಾಮದಲ್ಲಿ ಉಳಿದುಕೊಂಡಿರುವ ಹಾಕಿ ತಂಡದ ಸದಸ್ಯರ ಜತೆ ಸಂವಾದ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next