Advertisement

ನವಯುಗ ಕಂಪೆನಿ ಮುಖ್ಯಾಧಿಕಾರಿಗೆ ನೋಟಿಸ್‌

06:00 AM Jun 03, 2018 | |

ಕುಂದಾಪುರ: ಆಮೆಗತಿಯಲ್ಲಿ ಸಾಗುತ್ತಿರುವ ಕುಂದಾಪುರ ಶಾಸ್ತ್ರಿ ಸರ್ಕಲ್‌ ಬಳಿಯ ಮೇಲ್ಸೆತುವೆ (ಫ್ಲೈ ಓವರ್‌) ಹಾಗೂ ಉಡುಪಿ ಕರಾವಳಿ ಬೈಪಾಸ್‌ ಬಳಿಯ ಮೇಲ್ಸೆತುವೆ ಕಾಮಗಾರಿ ವಿಳಂಬ ಕುರಿತಂತೆ ಇದರ ಗುತ್ತಿಗೆ ವಹಿಸಿಕೊಂಡಿರುವ ನವಯುಗ ಕಂಪೆನಿಯ ಮುಖ್ಯಾಧಿಕಾರಿಗೆ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಟಿ. ಭೂಬಾಲನ್‌ ಅವರು ಕಾರಣ ಕೇಳಿ ನೋಟಿಸ್‌ ಕಳುಹಿಸಿದ್ದಾರೆ.

Advertisement

ಎರಡೂ ಮೇಲ್ಸೇತುವೆಗಳ ಕಾಮಗಾರಿ ಆರಂಭಗೊಂಡು 6 ವರ್ಷಗಳಾದರೂ ಇನ್ನೂ ಪೂರ್ಣವಾಗಿಲ್ಲ. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿತ್ಯ ಅಪಘಾತ, ಟ್ರಾಫಿಕ್‌ ಜಾಮ್‌ ಸಂಭವಿಸುತ್ತಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಪ್ರತಿದಿನ ತೊಂದರೆ ಅನುಭವಿಸುತ್ತಿದ್ದಾರೆ ಎನ್ನುವುದನ್ನು ಎಸಿ ಅವರು ನೋಟಿಸ್‌ನಲ್ಲಿ ಉಲ್ಲೇಖೀಸಿದ್ದಾರೆ.

ಜೂ. 6: ಎಸಿ ಕೋರ್ಟ್‌ ವಿಚಾರಣೆ
ಈ ಸಂಬಂಧ ಜೂ. 6ರಂದು ಕುಂದಾಪುರದ ಮಿನಿವಿಧಾನ ಸೌಧ ದಲ್ಲಿರುವ ಎಸಿ ಕೋರ್ಟ್‌ನಲ್ಲಿ ಎಸಿ ಭೂಭಾಲನ್‌ ನೇತೃತ್ವದಲ್ಲಿ ನವಯುಗ ಕಂಪೆನಿಯ ಅಧಿಕಾರಿಗಳ ವಿಚಾರಣೆ ನಡೆಯಲಿದೆ.

ಟೋಲ್ ಸ್ವೀಕಾರ ಯಾಕೆ ರದ್ದು ಮಾಡಬಾರದು?
ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ನವಯುಗ ಕಂಪೆನಿ ಯವರು ಈಗಾಗಲೇ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಟೋಲ್ ಸಂಗ್ರಹ ಮಾಡುತ್ತಿದ್ದಾರೆ. ಶೇ. 75ರಷ್ಟು ಕಾಮಗಾರಿ ಪೂರ್ತಿ ಯಾಗದೆ ಟೋಲ್ ಸಂಗ್ರಹಿಸುವಂತಿಲ್ಲ ಎನ್ನುವ ನಿಯಮವಿದೆ. ಈಗ ಯಾಕೆ ಟೋಲ್ ಸಂಗ್ರಹ ನಿಲ್ಲಿಸಬಾರದು ಎಂದು ಉಪ ವಿಭಾಗಧಿಕಾರಿಯವರು ನವಯುಗ ಕಂಪೆನಿಯನ್ನು ಖಾರವಾಗಿಯೇ ಪ್ರಶ್ನಿಸಿದ್ದಾರೆ. ಕುಂದಾಪುರ ಹಾಗೂ ಉಡುಪಿಯ ಫ್ಲೈ ಓವರ್‌ ಮಂದಗತಿಯ ಕಾಮಗಾರಿ ಕುರಿತಂತೆ ‘ಉದಯವಾಣಿ’ ಪತ್ರಿಕೆಯು ಸಾಕಷ್ಟು ಬಾರಿ ವಿಶೇಷ ವರದಿ ಪ್ರಕಟಿಸಿ, ಸಂಬಂಧಿಸಿದವರ ಗಮನ ಸೆಳೆದಿತ್ತು. 

ನಿಧಾನಗತಿಯ ಕಾಮಗಾರಿ ಕುರಿತಂತೆ ಜನವರಿ, ಫೆಬ್ರವರಿಯಲ್ಲಿ ಕಂಪೆನಿಯ ಅಧಿಕಾರಿಗಳು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಗಳೊಂದಿಗೆ ಸಭೆ ನಡೆಸಿದರೂ, ಕಾಮಗಾರಿ ಚುರುಕುಗೊಂಡಿಲ್ಲ. ಇದ ರಿಂದ ಜನ ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಅದಕ್ಕಾಗಿ ನವಯುಗಕ್ಕೆ ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ.  
ಟಿ. ಭೂಬಾಲನ್‌  ಸಹಾಯಕ ಆಯುಕ್ತ 

Advertisement
Advertisement

Udayavani is now on Telegram. Click here to join our channel and stay updated with the latest news.

Next