ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ನವರಾತ್ರಿ ಆಚರಣೆ ಆರಂಭವಾಗಿದ್ದು ಅ. 19ರ ವರೆಗೆ ವಿವಿಧ ದೇವಾಲಯಗಳಲ್ಲಿ ಉತ್ಸವ ನಡೆಯಲಿದೆ. ಶಕ್ತಿ ಮಾತೆಯ ದೇವಾಲಯಗಳಲ್ಲಿ ದೇವರನ್ನು ಪಟ್ಟಕ್ಕೆ ಕೂರಿಸಿ ಪೂಜೆ ನೆರವೇರಿಸಲಾಗುತ್ತದೆ.
ನಗರದ ಕಾಳಿಕಾ ಕಮಟೇಶ್ವರ ದೇವಾಲಯ ದಲ್ಲಿ ನವರಾತ್ರಿ ಅಂಗವಾಗಿ ಕಾಳಿಕಾ ಮಾತೆಗೆ ಅನ್ನಪೂರ್ಣೇಶ್ವರಿ ಅಲಂಕಾರ ಮಾಡಲಾಗಿತ್ತು. ಪ್ರತಿನಿತ್ಯ ಒಂದೊಂದು ರೀತಿಯ ಅಲಂಕಾರ ಹಾಗೂ ವಿಶೇಷ ಪೂಜೆಗಳು ನಡೆಯಲಿವೆ.
ಅ.12ರ ಸಂಜೆ 6ಕ್ಕೆ ದೊಡ್ಡಬಳ್ಳಾಪುರದ ಎಲ್ಲಾ ವಾದ್ಯಗೋಷ್ಟಿ ಕಲಾವಿದರಿಂದ ಸ್ವರ ಸಂಗಮ ಕಲಾವೇದಿಕೆಯಲ್ಲಿ ಗೀತೆಗಳ ಗಾಯನ-ಭರತನಾಟ್ಯ ನಡೆಯಲಿದೆ. ನಗರದ ಕಾಳಮ್ಮ ದೇವಾಲಯಲ್ಲಿಯೂ ನವ ರಾತ್ರಿ ಅಂಗವಾಗಿ ಪ್ರತಿದಿನ 2 ನಿಂಬೆ ಹಣ್ಣಿನ ದೀಪ ಹಚ್ಚುವುದು, ಪ್ರತಿದಿನ ನೈವೇದ್ಯ ಮಾಡುವುದು, ವಿಜಯದಶಮಿ ದಿನದಂದು ಅಭಿಷೇಕ ಮಾಡಿಸುವ ಪೂಜೆ ವಿಧಾನವಿದ್ದು, ನವರಾತ್ರಿ ವಿಶೇಷವಾಗಿದ್ದು, ಶಕ್ತಿರೂಪಿ ದೇವತೆಗಳನ್ನು ಪೂಜಿಸಿದರೆ ಇಷ್ಟಾರ್ಥಗಳು ನೆರವೇರಲಿವೆ ಎನ್ನುತ್ತಾರೆ ಅರ್ಚಕ ಹೊಯ್ಸಳಾಚಾರ್.
ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ: ವನ್ನಿಗರ ಪೇಟೆಯ ಶ್ರೀಸಪ್ತಮಾತೃಕಾ ಮಾರಿಯಮ್ಮ ದೇವಾಲಯದಲ್ಲಿ ನವರಾ
ತ್ರಿ ಅಂಗವಾಗಿ ದುರ್ಗಾ ದೇವಿ ಮೂರ್ತಿ ಪ್ರತಿಷ್ಠಾಪಿಸಿ, ವಿಶೇಷ ಪೂಜೆಗಳು ನಡೆಯಲಿವೆ. ಶ್ರೀರಾ ಮಲಿಂಗ ಚೌಡೇಶ್ವರಿ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಪೂಜೆ ಏರ್ಪಡಿಸಲಾಗಿದೆ.
ನವರಾತ್ರಿ ವಿಶೇಷ: ನವರಾತ್ರಿ ಹಬ್ಬದ ತಯಾರಿಯಲ್ಲಿ ಜನರು ಹೆಚ್ಚು ನಿರತರಾಗಿದ್ದು ಈ ಹಬ್ಬ ತನ್ನದೇ ವಿಶೇಷತೆಗಳಿಂ ದಲೇ ಜನರಲ್ಲಿ ಭಕ್ತಿ ಭಾವ ಹೆಚ್ಚಿಸುತ್ತದೆ. ಒಂಬತ್ತು ದಿನಗಳ ಕಾಲ ನಡೆಯುವ ಹಬ್ಬ ದೇವಿಯ ಒಂಬತ್ತು ಅವತಾರಗಳ ಅಲಂಕಾರ ಮತ್ತು ಪೂಜೆಯಾಗಿದೆ.
ಹತ್ತನೇ ದಿನವೇ ವಿಜಯ ದಶಮಿ ನವರಾತ್ರಿಗಳಂದು ದೇವಿಗೆ ಪ್ರತಿ ನಿತ್ಯ ಮಾಡುವ ಅಲಂಕಾರಗಳಿಗೆ ಪುರಾಣದ ಹಿನ್ನೆಲೆಯಿದೆ. ಮೊದಲ ದಿನ ಶೈಲಪುತ್ರಿ ದೇವಿ, ಎರಡನೇ ದಿನ ಬ್ರಹ್ಮಚಾರಿಣಿ, ಮೂರನೇ ದಿನ ಚಂದ್ರಘಂಟಾ ರೂಪ,
ನಾಲ್ಕನೇ ದಿನ ದುರ್ಗಾ ಮಾತೆ, ಕೂಷ್ಮಾಂಡಾ ರೂಪದಲ್ಲಿ , ಐದನೇ ದಿನ ಸ್ಕಂದ ಮಾತಾ ರೂಪ, ಆರನೇ ದಿನ ಕಾತ್ಯಾಯಿನಿ ರೂಪದಲ್ಲಿ, ಏಳನೇ ದಿನ ಕಾಳರಾತ್ರಿ ಅವತಾರದಲ್ಲಿ, ಎಂಟನೇ ದಿನ ಮಹಾ ಗೌರಿ ರೂಪದಲ್ಲಿ ಹಾಗೂ ಒಂಬತ್ತನೇ ದಿನ ಸಿದ್ಧಿದಾತ್ರಿ ರೂಪದಲ್ಲಿ ದೇವಿಯನ್ನು ಪೂಜಿಸುತ್ತಾರೆ.