Advertisement
ದೇವಿಯ ಅವತಾರದಲ್ಲಿ ನವದುರ್ಗೆಯರು, ಮನುಷ್ಯ ದೇಹದಲ್ಲಿ ನವ ರಂಧ್ರಗಳು, ಗ್ರಹಗಳಲ್ಲಿ ಪುರಾಣ ಉಲ್ಲೇಖಿತ ನವಗ್ರಹಗಳು ಹೀಗೆ ಹತ್ತಾರು ಬಗೆಯಲ್ಲಿ 9 ಸಂಖ್ಯೆಯು ಅನುಷ್ಥಾನ – ಆಚರಣೆಗಳಗೆ ಶುಭವೆನ್ನುವುದು ಹಿರಿಯರ ಮಾತು. ಹಾಗೆಯೇ ಈ ನವರಾತ್ರಿಯಲ್ಲಿ ನಾವು ಕಲಿಯುವುದು, ರೂಢಿಸಿಕೊಳ್ಳಬಹುದಾದದ್ದು ಏನು ಎನ್ನುವುದನ್ನು ಆತ್ಮಾವಲೋಕನ ಮಾಡುವ ಅವಶ್ಯಕತೆಯಿದೆ.
Related Articles
Advertisement
ಮೂರು ದಿನಗಳನ್ನು ಶಕ್ತಿರೂಪಿಣಿ ದುರ್ಗಾದೇವಿಗೆ, ಮುಂದಿನ ಮೂರು ದಿನಗಳನ್ನು ಅಷ್ಟ ಐಶ್ವರ್ಯ ದಾತೆ ಲಕ್ಷ್ಮಿದೇವಿಗೆ ಮತ್ತು ಕೊನೆಯ ಮೂರು ದಿನಗಳನ್ನು ಜ್ಞಾನರೂಪಿಣಿ ಸರಸ್ವತಿಗೆ ಅರ್ಪಿಸಲಾಗಿದೆ. ಹತ್ತನೇ ದಿನ, ವಿಜಯದಶಮಿ, ಜೀವನದ ಈ ಮೂರು ಅಂಶಗಳ ಮೇಲಿನ ವಿಜಯವನ್ನು ಅದು ಸಂಕೇತಿಸುತ್ತದೆ. ಇದು ಕೇವಲ ಸಾಂಕೇತಿಕವಲ್ಲ, ಆದರೆ ಶಕ್ತಿಯ ಮಟ್ಟದಲ್ಲಿಯೂ ನಿಜವಾದ ಸಂಗತಿ. ಮನುಷ್ಯರಾಗಿ ನಾವು ಈ ಭೂಮಿಯ ಮೇಲೆ ಹುಟ್ಟುತ್ತೀವಿ ಮತ್ತು ಕ್ರಿಯಾಶೀಲರಾಗಿರುತ್ತೀವಿ. ಸ್ವಲ್ಪ ಸಮಯದ ನಂತರ, ಜಡತ್ವಕ್ಕೆ ಜಾರುತ್ತೀವಿ.
ಇದು ನಮ್ಮೊಬ್ಬರಿಗೆ ಮಾತ್ರವಲ್ಲ, ಇಡೀ ನಕ್ಷತ್ರಪುಂಜಕ್ಕೂ ಮತ್ತು ಇಡೀ ಬ್ರಹ್ಮಾಂಡದ ಪ್ರಕ್ರಿಯೆಯು ಹೀಗೆಯೇ ಸಂಭವಿಸುತ್ತದೆ. ಬ್ರಹ್ಮಾಂಡವು ಜಡತ್ವದ ಸ್ಥಿತಿಯಿಂದ ಹೊರಹೊಮ್ಮುತ್ತದೆ, ಕ್ರಿಯಾತ್ಮಕವಾಗುತ್ತದೆ ಮತ್ತು ಮತ್ತೊಮ್ಮೆ ಜಡತ್ವಕ್ಕೆ ಇಳಿಯುತ್ತದೆ. ಆದಾಗ್ಯೂ, ಈ ಪುನರಾವೃತ್ತಿಯನ್ನು ಮುರಿಯುವಂತಹ ಸಾಮರ್ಥ್ಯ ನಮ್ಮಲ್ಲಿದೆ. ದೇವಿಯ ಮೊದಲ ಎರಡು ಆಯಾಮಗಳು ಮಾನವ ಉಳಿವು ಮತ್ತು ಯೋಗಕ್ಷೇಮಕ್ಕೆ ಅಗತ್ಯವಾಗಿವೆ. ಮೂರನೆಯದು ಎಲ್ಲವನ್ನೂ ಮೀರಿ ಹೋಗಬೇಕೆಂಬ ಆಕಾಂಕ್ಷೆಯನ್ನು ಮುಕ್ತಿಯ ಪ್ರೇರಣಿಯನ್ನೂ ನೀಡುತ್ತದೆ. ಇದನ್ನು ಅರಿಯೋಣ, ಅರಿತು ಬಾಳೋಣ, ಅರಿವೇ ಗುರು – ಗುರುವೇ ದೇವರು.
– ಬರಹ: ದಿನೇಶ ಎಂ. ಹಳೆನೇರೆಂಕಿ