Advertisement

ನವರಾತ್ರಿ ಸಡಗರಕ್ಕೆ ರಬಕವಿ-ಬನಹಟ್ಟಿ ತಾಲೂಕು ಸಜ್ಜು

07:51 PM Sep 25, 2022 | Team Udayavani |

ರಬಕವಿ-ಬನಹಟ್ಟಿ: ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ಕೋವಿಡ್ ನಿಂದಾಗಿ ನವರಾತ್ರಿಯ ಸಂಭ್ರಮ ಅಷ್ಟಾಗಿ ಇರಲಿಲ್ಲ. ಆದರೆ ಬಾರಿ ಪ್ರತಿಯೊಂದು ಪಟ್ಟಣ ಮತ್ತು ಗ್ರಾಮದ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮ ಹಾಕಿಕೊಂಡು ಸಂಭ್ರಮದ ನವರಾತ್ರಿ ಉತ್ಸವ ಆಚರಿಸಲು ಸಜ್ಜಾಗಿ ನಿಂತಿವೆ.

Advertisement

ತಾಲೂಕಿನಪಟ್ಟಣಮತ್ತು ಗ್ರಾಮಗಳ ಎಲ್ಲ ದೇವಸ್ಥಾನಗಳು ಸೆ. 26 ರಿಂದ ಆರಂಭವಾಗುವ ನವರಾತ್ರಿ ಉತ್ಸವಕ್ಕೆ ವಿಜೃಂಭಣೆಯಿಂದ ತಯಾರಾಗುತ್ತಿವೆ. ಅಂದು ಮುಂಜಾನೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ದುರ್ಗೆಯ ಮೂರ್ತಿಯ ಮೆರವಣಿಗೆ ನಡೆಯುತ್ತದೆ. ಮೆರವಣಿಗೆಯಲ್ಲಿ ಮಹಿಳೆಯರು, ಮಕ್ಕಳು ಸಹಿತಾಧಿಯಾಗಿ ಪಾಲ್ಗೋಳ್ಳುತ್ತಾರೆ. ನಗರದ ಪ್ರಮುಖ ಬೀದಿಗಳಲ್ಲಿ ಮೂರ್ತಿ ಪ್ರತಿ಼ಷ್ಟಾಪಿಸಿ 9 ದಿನಗಳ ಕಾಲ ಪೂಜೆ ಗೈದು ದೇವಿಯನ್ನು ಆರಾಧಿಸಲಾಗುತ್ತದೆ.

9 ದಿನಗಳಕಾಲ ದೇವತೆಯ ವಿವಿಧ ರೂಪಗಳ ಹೆಸರಿನಲ್ಲಿ ದೇವಿಯನ್ನು ಆರಾಧಿಸಿ ಪೂಜಿಸುವ ಕಾರ್ಯಕ್ರಮ ನಡೆಸಲಾಗುತ್ತದೆ. ಅಲ್ಲದೇ ಮೈಸೂರಿನಲ್ಲಿರುವಂತೆ ಇಲ್ಲಿಯೂ ಕೂಡಾ ಕೆಲವೊಂದು ಮನೆಯಲ್ಲಿ ಬೊಂಬೆ ಪ್ರದರ್ಶನ ನಡೆಯುತ್ತದೆ. ಅಲ್ಲಿ ಸುಮಾರು 100ಕ್ಕೂ ಹೆಚ್ಚು ವಿವಿಧ ಕಲೆಯನ್ನು ಬಿಂಬಿಸುವ ಬೆಂಬೆಗಳ ಆ ಪ್ರದರ್ಶನ ನೋಡಿ ಜನ ಅವರ ಮನೆಗೆ ತೆರಳಿ ಸಂಭ್ರಮಿಸುತ್ತಾರೆ.

ನವರಾತ್ರಿಯಲ್ಲಿ ಆಯುಧ ಪೂಜೆಗೆ ವಿಶಿಷ್ಠ ಸ್ಥಾನವಿದೆ. ಹಿಂದಿನ ಕಾಲದಲ್ಲಿ ರಾಜರು ತಮ್ಮ ಶಸ್ತಾಸ್ತ್ರಗಳನ್ನು ವಿಜಯದಶಮಿ ಸಮಯದಲ್ಲಿ ಇಟ್ಟು ಪೂಜೆ ಮಾಡುತ್ತಿದ್ದು, ಅದು ಈಗ ಆಯುಧಪೂಜೆಯಾಗಿ ಖ್ಯಾತಿಯಾಗಿದೆ. ಪ್ರಾಚೀನ ಕಾಲದಿಂದಲ್ಲೂ ಜನತೆ ಎಲ್ಲ ಆಯುಧಗಳು ಹಾಗೂ ವಾಹನಗಳಿಗೆ ಪೂಜೆ ಸಲ್ಲಿಸಿಸುತ್ತಾ ಆಚರಿಸುತ್ತಾ ಬಂದಿದ್ದಾರೆ. ದಸರೆಯಂದು  ಆಯುಧ ಪೂಜೆ ನಡೆಸಿ ಸಂಜೆ ನಗರದ ಹಾಗೂ ಸಮಾಜದ ಹಿರಿಯರು ಸೇರಿಕೊಂಡು ಹೊಸ ಬಟ್ಟೆ ಬರೆಗಳನ್ನು ತೊಟ್ಟುಕೊಂಡು ನಿಗದಿತ ಸ್ಥಳದಲ್ಲಿ ಬನ್ನಿ ಬಂಗಾರವನ್ನು ಮುಡಿಯುವುದರ ಮೂಲಕ ದಸರಾ ಹಬ್ಬ ಸಂಭ್ರಮದಿಂದ ಆಚರಿಸುತ್ತಾರೆ. ಅಲ್ಲಿ ಪರಸ್ಪರ ಬನ್ನಿ- ಬಂಗಾರವನ್ನು ಕೊಟ್ಟು ಶುಭಾಶಯಗಳನ್ನು ನಿವಿಮಯ ಮಾಡಿಕೊಂಡು ಕಿರಿಯರು ಹಿರಿಯರ ಆಶೀರ್ವಾದ ಪಡೆದು ಕೊಳ್ಳುವ ಸಂಪ್ರದಾಯ ಇಲ್ಲಿಯ ಪಟ್ಟಣ ಮತ್ತು ಗ್ರಾಮಗಳಲ್ಲಿದೆ.

ಅಲ್ಲದೇ ನಗರದಲ್ಲಿ ಪ್ರತಿಷ್ಟಾಪಿಸಲ್ಪಡುವ ದುರ್ಗಾದೇವಿ ಮೂರ್ತಿ ಎದಿರು ಪ್ರತಿದಿನ ಸಂಜೆ ಪೂಜೆ ನಂತರ ಎಲ್ಲ ಸ್ತ್ರಿ, ಪುರುಷರು, ಮಕ್ಕಳು ಕೋಲಾಟವನ್ನು ಆಡುವ ಸಂಪ್ರದಾಯ ಇಲ್ಲಿದೆ.

Advertisement

ಅಲ್ಲದೇ ನವರಾತ್ರಿ ನಿಮಿತ್ತ ವಿವಿಧ ಮಠಗಳಲ್ಲಿ ಪ್ರವಚನ ಕಾರ್ಯಕ್ರಮಗಳು ನಡೆಯುತ್ತವೆ. ಒಟ್ಟಿನಲ್ಲಿ ನವರಾತ್ರಿ 9 ದಿನಗಳ ಕಾಲ ಈ ಬಾರಿ ವಿಶೇಷವಾಗಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next