Advertisement

26 ರಿಂದ ಮಾರಿಗುಡಿಯಲ್ಲಿ ನವರಾತ್ರಿ ಸಂಭ್ರಮ

03:42 PM Sep 15, 2022 | Team Udayavani |

ಶಿರಸಿ: ದಕ್ಷಿಣ ಭಾರತದ ಶಕ್ತಿ ದೇವತೆ ಎಂದೇ ಹೆಸರಾದ ಮಾರಿಕಾಂಬಾ ದೇವಸ್ಥಾನದಲ್ಲಿ ನ.26 ರಿಂದ ಅ.5ರ ತನಕ ನವರಾತ್ರೋತ್ಸವ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪ್ರತಿ ದಿನ ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

Advertisement

ಸುದ್ದಿಗೋಷ್ಠಿಯಲ್ಲಿ ಈ ಕುರಿತಾದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿದ ಅಧ್ಯಕ್ಷ ಆರ್‌.ಜಿ. ನಾಯ್ಕ, ಪ್ರತಿನಿತ್ಯ ಬೆಳಗ್ಗೆ 6ರಿಂದ 8ರ ತನಕ ಮಾರಿಕಾಂಬಾ ಭಜನಾ ಮಂಡಳಿಯಿಂದ ಭಜನೆ ನಡೆಯಲಿದೆ. ಸಪ್ತಶತಿ ಪಾರಾಯಣ ಬೆಳಗ್ಗೆ 8ರಿಂದ ಪ್ರಾರಂಭವಾಗಲಿದೆ.

ಒಂಬತ್ತೂ ದಿನ ವಿವಿಧ ಸ್ಪರ್ಧೆಗಳು ಬೆಳಗ್ಗೆ 9ರಿಂದ ನಡೆಯಲಿದ್ದು, 26ರಂದು 18 ವರ್ಷ ಮೇಲ್ಪಟ್ಟವರಿಗೆ ಆರತಿ ತಾಟಿನ ಸ್ಪರ್ಧೆ, ಮಧ್ಯಾಹ್ನ 3ರಿಂದ ಭಕ್ತಿ ಗೀತೆ ಸ್ಪರ್ಧೆ, 6ಕ್ಕೆ ಮಾನಸಾ ಜಿ.ಎಸ್‌. ಅವರಿಂದ ವೀಣಾ ವಾದನ, 26 ಹಾಗೂ 27ರ ಸಂಜೆ 7ಕ್ಕೆ ಎಸ್‌.ಎಸ್‌. ಶಿವಾನಂದಸ್ವಾಮಿ ಅವರಿಂದ ಕೀರ್ತನೆ ನಡೆಯಲಿದೆ. 27ರಂದು 18 ವರ್ಷ ಮೇಲ್ಪಟ್ಟವರಿಗೆ ಬೆಳಗ್ಗೆ 9ರಿಂದ ಹಳ್ಳಿ ಹಾಡುಗಳ ಸ್ಪರ್ಧೆ, ಮಧಾಹ್ನ 25 ವರ್ಷ ಮೇಲ್ಪಟ್ಟವರಿಗೆ ಭಾವಗೀತೆ ಸ್ಪರ್ಧೆ ನಡೆಯಲಿದೆ. ಸಂಜೆ 6ಕ್ಕೆ ಸ್ವರಾಂಜಲಿ ಸಂಗೀತ ವಿದ್ಯಾ ಸಂಸ್ಥೆಯಿಂದ ದೇಶಭಕ್ತಿಗೀತೆ ನಡೆಯಲಿದೆ.

28ರಂದು ಬೆಳಗ್ಗೆ ಧ್ಯಾನ ಮಾಲಿಕೆ ನಡೆಯಲಿದೆ. ಮಧ್ಯಾಹ್ನ 3ರಿಂದ ಜಾನಪದ ಗುಂಪು ನೃತ್ಯ ವಿದ್ಯಾರ್ಥಿಗಳಿಗೆ ನಡೆಯಲಿದೆ. 28 ಹಾಗೂ 29ರಂದು ಸಂಜೆ 7ರಿಂದ ಮಂಡ್ಯದ ಮಧುಸೂದನ ದಾಸರಿಂದ ಕೀರ್ತನೆ ನಡೆಯಲಿದೆ.

29ರಂದು ಬೆಳಗ್ಗೆ 9ಕ್ಕೆ ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆ, ಫ್ರೀ ಹ್ಯಾಂಡ್‌ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 3ರಿಂದ ಭರತನಾಟ್ಯ ಸ್ಪರ್ಧೆ ನಡೆಯಲಿದೆ. 30ರಂದು ಕರಕುಶಲ ವಸ್ತುಗಳ ಪ್ರದರ್ಶನ ನಡೆಯಲಿದೆ. ಬೆಳಗ್ಗೆ 9 ರಿಂದ ಸಮೂಹ ದೇಶಭಕ್ತಿಗೀತೆ ಸ್ಪರ್ಧೆ ಹಾಗೂ ಮಧ್ಯಾಹ್ನ 3ರಿಂದ ಅಂಗನವಾಡಿ ನೃತ್ಯ ಸ್ಪರ್ಧೆ ನಡೆಯಲಿದೆ. ಸಂಜೆ 7ಕ್ಕೆ ತೋನ್ಸೆ ಪುಷ್ಕಳಕುಮಾರ ಉಳ್ಳಾಲ ಅವರಿಂದ ಕೀರ್ತನೆ ನಡೆಯಲಿದೆ.

Advertisement

ಅ.1ರಂದು ಜಾನಪದ ಹಾಡುಗಳ ಸ್ಪರ್ಧೆ ಬೆಳಗ್ಗೆ 9ರಿಂದ ನಡೆಯಲಿದೆ. ಬೆಳಗ್ಗೆ 10ರಿಂದ ಸಾಮಾನ್ಯ ಜ್ಞಾನ ಸ್ಪರ್ಧೆ ನಡೆಯಲಿದೆ. ಸಂಜೆ 5:30ರಿಂದ ಬಿ.ಕೆ. ವೀಣಾಜಿ, 7ಕ್ಕೆ ಸಕಲೇಶಪುರದ ಶೈಲೇಶಕುಮಾರ ಅವರಿಂದ ಪ್ರವಚನ, ಕೀರ್ತನೆ ನಡೆಯಲಿದೆ.

ಅ.2ರಂದು ಬೆಳಗ್ಗೆ 9ರಿಂದ ಚದುರಂಗ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 3ಕ್ಕೆ ಭಗವದ್ಗೀತಾ ಶ್ಲೋಕ ಕಠಂಪಾಠ ಸ್ಪರ್ಧೆ ನಡೆಯಲಿದೆ. ಬೆಳಗ್ಗೆ 11ರಿಂದ 12ರ ತನಕ ಡಾ| ಕೃಷ್ಣಮೂರ್ತಿ ಭಟ್ಟ ತಂಡದಿಂದ ಹಿಂದುಸ್ತಾನಿ ಗಾಯನ, ದಾಸವಾಣಿ ನಡೆಯಲಿದೆ. ಸಂಜೆ 7ಕ್ಕೆ ಶಂಕರ ಭಟ್ಟ ಉಂಚಳ್ಳಿ ಅವರಿಂದ ಕೀರ್ತನೆ ನಡೆಯಲಿದೆ.

ಅ.3ರಂದು ಬೆಳಗ್ಗೆ 9ರಿಂದ ಚಿತ್ರಕಲಾ ಸ್ಪರ್ಧೆ, ಮಧ್ಯಾಹ್ನ 3ರಿಂದ ಚಿಕ್ಕಮಕ್ಕಳ ಪ್ಯಾನ್ಸಿ ಡ್ರೆಸ್‌ ಸರ್ಧೆ ನಡೆಯಲಿದೆ. ಬೆಂಗಳೂರಿನ ವಿ. ಶಿವಶಂಕರದಾಸರಿಂದ ಕೀರ್ತನೆ ಸಂಜೆ 7ಕ್ಕೆ ನಡೆಯಲಿದೆ. ಅ.4 ರಂದು ಬೆಳಗ್ಗೆ ಚಿತ್ರಕಲಾ ಹಾಗೂ ಮಧ್ಯಾಹ್ನ 3ರಿಂದ ಪ್ಯಾನ್ಸಿ ಡ್ರೆಸ್‌ ಸ್ಪರ್ಧೆ ನಡೆಯಲಿದೆ. 22 ಹಾಗೂ 23ರಂದು ಪ್ರಾಥಮಿಕ ಶಾಲಾ ಮಕ್ಕಳ, ಪ್ರೌಢ ಶಾಲಾ ಮಕ್ಕಳ ಎರಡೂ ವಿಭಾಗದಲ್ಲಿ ಖೊಖೋ ಸ್ಪರ್ಧೆ, ಕಬ್ಬಡ್ಡಿ ಸ್ಪರ್ಧೆ, ವಾಲಿಬಾಲ್‌, ಹಗ್ಗ ಜಗ್ಗಾಟ, ಬ್ಯಾಡ್ಮಿಂಟನ್‌ ಸ್ಪರ್ಧೆ ನಡೆಯಲಿದೆ. 60 ವರ್ಷ ಮೇಲ್ಪಟ್ಟರಿಗೆ ಓಟ, ಜಿಗಿತ, ಗುಂಡು ಎಸೆತ ಸ್ಪರ್ಧೆ ನಡೆಯಲಿದೆ. ಅದೇ ದಿನ ವಿಜಯ ದಶಮಿ ಪಡಲಿಗೆ ಉತ್ಸವ, ಸಿಮೋಲಂಘನ ನಡೆಯಲಿದೆ.

ಅ.6ರಂದು ಸಂಜೆ 5ರಿಂದ ಕರ್ನಾಟಕ ಸಂಗೀತ ನಿತ್ಯಾನಂದ ಕೆ.ಎ, ದಾಸನವಾಣಿ ಸದ್ವಿದ್ಯಾ ಸಂಗೀತ ವಿದ್ಯಾಲಯದ, 7ರಿಂದ 9 ಡಾ| ವಿಜಯನಳಿನಿ ತಂಡದಿಂದ ತಾಳಮದ್ದಲೆ, 7ರಂದು ಸಂಜೆ 5ಕ್ಕೆ ಡಾ| ಸಂಧ್ಯಾ ಭಟ್ಟ ಗಾಯನ, ದುರ್ಗಾ ಸ್ವಾತಿ ನೃತ್ಯಾಲಯದಿಂದ ಭರತನಾಟ್ಯ, 7ರಿಂದ ಯಕ್ಷಕಲಾ ಸಂಗಮದಿಂದ ಯಕ್ಷಗಾನ, ಅ.8ಕ್ಕೆ ವೈಷ್ಣವಿ ತಂತ್ರಿ ತಂಡದಿಂದ ಮಧ್ಯಾಹ್ನ 3ರಿಂದ ಭರತನಾಟ್ಯ, ಬಳಿಕ ಬಹುಮಾನ ವಿತರಣೆ ನಡೆಯಲಿದೆ. ಈ ವೇಳೆ ಉಪಾಧ್ಯಕ್ಷ ಸುದೇಶ ಜೋಗಳೇಕರ್‌, ವತ್ಸಲಾ ಹೆಗಡೆ, ಶಿವಾನಂದ ಶೆಟ್ಟಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next