Advertisement

ನವಲಗುಂದ ಬಂದ್‌ ಯಶಸ್ವಿ

04:37 PM Jun 13, 2017 | Team Udayavani |

ನವಲಗುಂದ: ಮಹದಾಯಿ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನ ಮತ್ತು ರೈತರ ಸಾಲಮನ್ನಾ ಹಾಗೂ ವಿವಿಧ ಬೇಡಿಕೆ ಈಡೇರಿಕೆಗಾಗಿ ಸೋಮವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ ಸಂಪೂರ್ಣ ಯಶಸ್ವಿಯಾಯಿತು. ತಾಲೂಕಿನ ಅಳಗವಾಡಿ, ಯಮನೂರ, ಕುರಹಟ್ಟಿ, ಬೆಳವಟಿಗಿ, ಗೊಬ್ಬರಗುಂಪಿ ಗ್ರಾಮದ ರೈತರು ಬಂದ್‌ನಲ್ಲಿ ಪಾಲ್ಗೊಂಡಿದ್ದರು.

Advertisement

ವರ್ತಕರು ಅಂಗಡಿ ಮುಗ್ಗಟ್ಟು ಬಂದ್‌ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಶಾಲಾ-ಕಾಲೇಜು, ಸರಕಾರಿ ಕಚೇರಿಗಳು, ಬ್ಯಾಂಕ್‌ಗಳು, ಬಸ್‌  ಸಂಚಾರ ಮತ್ತು ಖಾಸಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ರಾಷ್ಟ್ರೀಯ ಹೆದ್ದಾರಿ, ಪಟ್ಟಣದ ಗಾಂಧಿ  ಮಾರುಕಟ್ಟೆ ಬಿಕೋ ಎನ್ನುತ್ತಿದ್ದವು.

ಸಾರ್ವಜನಿಕರು ಹೊರಬರಲು ಹಿಂದೇಟು ಹಾಕುತ್ತಿರುವುದು ಸಾಮಾನ್ಯವಾಗಿತ್ತು. ಬೆಳಗ್ಗೆ 6ರಿಂದ ರಾತ್ರಿ 8ರವರೆಗೆ 144 ಕಲಂ ಜಾರಿ ಮತ್ತು ತಾಲೂಕಿನಾದ್ಯಂತ ಮದ್ಯಪಾನ ನಿಷೇಧ ಹೇರಲಾಗಿತ್ತು. ಆದರೆ ಸರಕಾರದ ಆದೇಶ ಧಿಕ್ಕರಿಸಿದ ರೈತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ,ಉಭಯ ಸರಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಮಾತಿನ ಚಕಮಕಿ: ಪೊಲೀಸ್‌ ಇಲಾಖೆ ವಾಹನದಲ್ಲಿ ನಿನ್ನೆ ರಾತ್ರಿ 144 ಕಲಂ ಜಾರಿ ಕುರಿತು ಧ್ವನಿವರ್ಧಕ ಮೂಲಕ ತಿಳಿಸಿದ್ದಲ್ಲದೇ ಬಿಗಿ ಪೊಲೀಸ್‌ ಬಂದೋಬಸ್ತ್ಗಾಗಿ ಹೆಚ್ಚು ಪೊಲೀಸರನ್ನು ಕರೆ ತಂದಿದ್ದರಿಂದ ಆಕ್ರೋಶಗೊಂಡ ಪûಾತೀತ ಹೋರಾಟ ಸಮಿತಿ ಅಧ್ಯಕ್ಷ ಲೋಕನಾಥ ಹೆಬಸೂರ ಹಾಗೂ ಸಿಪಿಐ ಬಿ.ಪಿ ದಿವಾಕರ ಅವರ ನಡುವೆ ಮಾತಿನ ಚಕಮಕಿ ನಡೆಯಿತು. 

ತಡಹಾಳ ಹಿರೇಮಠದ ಶಿವಯೋಗಿ ಸ್ವಾಮೀಜಿ, ಅಣ್ಣಪ್ಪ ಬಾಗಿ, ರವಿಗೌಡ ಪಾಟೀಲ, ಮಲ್ಲೇಶ ಉಪ್ಪಾರ, ಐ.ಡಿ. ಬಾಗವಾನ, ವಿವಿಧ ಗ್ರಾಮದ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next