Advertisement

ವಾಕರಿಕೆಯೂ ಸೋಂಕಿನ ಲಕ್ಷಣ ; ಅಮೆರಿಕದ ಸಿಡಿಸಿ ಸಂಸ್ಥೆಯ ಅಧ್ಯಯನ

12:24 PM Jun 29, 2020 | mahesh |

ವಾಷಿಂಗ್ಟನ್‌: ನಿಮಗೆ ವಾಕರಿಕೆ ಬರು­ತ್ತಿದೆಯೇ?, ವಾಂತಿಯಾಗುತ್ತಿದೆಯೇ?, ನಿಮಗೆ ಅತಿಸಾರ ಭೇದಿಯೇ? ಅಥವಾ ನಿಮ್ಮ ಮೂಗು ನಿರಂತರವಾಗಿ ಸೋರುತ್ತಿದೆಯೇ? ಹಾಗಿದ್ದರೆ ನಿಮಗೆ ಕೋವಿಡ್ ಸೋಂಕಿರುವ ಸಾಧ್ಯತೆ ಇದೆ. ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ), ಕೋವಿಡ್ ರೋಗ ಲಕ್ಷಣಗಳ ಪಟ್ಟಿಗೆ ವಾಕರಿಕೆ ಅಥವಾ ವಾಂತಿಯಾಗುವುದು, ಅತಿಸಾರ ಭೇದಿ ಹಾಗೂ ನಿರಂತರ­ವಾಗಿ ಸೋರುವ ಮೂಗು, ಈ ಮೂರು ಲಕ್ಷ­ಣ­ಗಳನ್ನು ಹೊಸದಾಗಿ ಸೇರ್ಪಡೆ ಮಾಡಿದೆ. ಈ ಮೊದಲು ಸಿಡಿಸಿ, ಕೋವಿಡ್ ಸೋಂಕಿನ 9 ರೋಗ ಲಕ್ಷಣಗಳ ಪಟ್ಟಿ ಬಿಡುಗಡೆ ಮಾಡಿತ್ತು. ಆ ಪಟ್ಟಿಗೆ ಮತ್ತೆ ಮೂರು ಲಕ್ಷಣಗಳನ್ನು ಹೊಸದಾಗಿ ಅದು ಸೇರಿಸಿದೆ.

Advertisement

ಸಿಡಿಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಕೋವಿಡ್ ವೈರಸ್‌ನ ಒಟ್ಟು 12 ರೋಗ ಲಕ್ಷಣ­ಗಳನ್ನು ಪಟ್ಟಿ ಮಾಡಲಾಗಿದೆ. ಕೋವಿಡ್ ಬಗ್ಗೆ ಅಧ್ಯಯನಗಳು ಸಾಗಿವೆ. ಹೀಗಾಗಿ, ಈ ಪಟ್ಟಿ ಪರಿಷ್ಕರಣೆಗೊಳ್ಳುತ್ತಾ ಮುಂದುವರಿಯ­ಲಿದೆ ಎಂದು ಅದು ತಿಳಿಸಿದೆ. ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಶೀತ, ಮೈ ನಡುಗುವಿಕೆ, ತಲೆ ನೋವು, ಗಂಟಲು ನೋವು, ಸ್ನಾಯು ಸೆಳೆತ, ಮತ್ತು ಹಠಾತ್ತನೆ ರುಚಿ ಅಥವಾ ವಾಸನೆ ಕಂಡು ಹಿಡಿಯುವ ಸಾಮರ್ಥ್ಯ ಕಳೆದುಕೊಳ್ಳುವುದು ಕೋವಿಡ್ ಸೋಂಕಿನ ಈವರೆಗಿನ ಲಕ್ಷಣಗಳಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next