Advertisement

ಎಲ್ಲದಕ್ಕೂ ಕಲ್ಲಕೈ ಬೇರು

12:19 PM Dec 30, 2017 | |

ಕೊರಳಿಗೆ ಕೆಂಪನೆಯ ದಾರ. ಅದರ ನಡುವಿಗೆ ಒಂದು ಇಂಚು ಅಗಲ ಅರ್ಧ ಇಂಚು ಸಾಂದ್ರದ ಒಂದು ಬೇರು. ಅದನ್ನು ಕೊರಳಿಗೆ ಕಟ್ಟುತ್ತಾರೆ. ಹಾಗೆ ಕಟ್ಟಿಕೊಂಡವರ ಲಿವರ್‌ ಸಂಬಂಧಿ ಖಾಯಿಲೆ ನಿವಾರಣೆಗೆ ರಾಮಬಾಣ. ಹೇಗೆ ಅಂದರೆ, ಎದೆ ಮತ್ತು ಗಂಟಲ ಮಧ್ಯ ಭಾಗದಲ್ಲಿರುವ ಜಾಗವನ್ನು ನಾರಾಯಣಕುಳಿ ಎನ್ನುತ್ತಾರೆ. ಪ್ರತಿ ದಿನ ಸ್ನಾನ ಮಾಡುವಾಗ ಬೇರಿಗೆ ಬಿದ್ದ ನೀರು ಎದೆ, ಹೊಟ್ಟೆಯನ್ನು ಹಾದು ಹೋಗುವುದು ಕಾಯಿಲೆಯನ್ನು ಗುಣಪಡಿಸಲು ನೆರವಾಗುತ್ತದೆ. ಇದರ ಜೊತೆಗೆ ಬೇರು ತೇಯ್ದು ಲಿಂಬೆರಸ, ನೀರು, ಹಾಲಿನಲ್ಲಿ ತೆಗೆದುಕೊಳ್ಳುವುದು ಇವರ ಸೂಚನೆಯಾಗಿರುತ್ತದೆ.  ಪರಿಣಾಮದ ದೃಷ್ಟಿಯಲ್ಲೂ ಇದು ಮಹತ್ವದ್ದು ಎನ್ನುತ್ತಾರೆ ನಾಟಿ ವೈದ್ಯ ಸತೀಶ ಹೆಗಡೆ. 

Advertisement

ಮಕ್ಕಳ, ದೊಡ್ಡವರ ಆರೋಗ್ಯ ಸುಧಾರಣೆಗೆ ಈ ವನಸ್ಪತಿ ಕಟ್ಟುತ್ತಾರೆ. ಮಲೆನಾಡ ಸೀಮೆಯಲ್ಲಿ ಕಲ್ಲಕೈ ಬೇರು ಎಂದೇ ಖ್ಯಾತಿ ಪಡೆದಿದೆ.

ಹೌದು, ಕಲ್ಲಕೈ,  ಶಿರಸಿ ತಾಲೂಕಿನ ಸಿದ್ದಾಪುರ ರಸ್ತೆಯಲ್ಲಿ ಏಳು ಕಿಮಿ ಸಾಗಿದರೆ ಸಿಗೋ ಊರು. ಈ ಊರಿನ ಭಾಗವತ್‌ ಕುಟುಂಬದಿಂದ ಕಲ್ಲಕೈ ಔಷಧ ಖ್ಯಾತಿ ಪಡೆದಿದೆ. ಈ ಕುಟುಂಬದವರು, ಪರಂಪರಾನುಗತವಾಗಿ ಕಾಡಿನ ಗಿಡಮೂಲಿಕೆಗಳನ್ನು ಆಧರಿಸಿ ಔಷಧ ಕೊಡುತ್ತಾರೆ. 

 ಮದ್ದು ಬಿದ್ದರೆ, ಅರಸಿನ ಕಾಮಾಲೆಗೆ, ಗಂಟಲು ನೋವಿಗೆ, ಅರಗನ್ನೆ ಶೂಲಕ್ಕೆ, ಋತುಸ್ರಾವ ಸಮಸ್ಯೆಗೆ, ಧಾತು ನಷ್ಟಕ್ಕೆ, ಆಮಶಂಕೆಗೆ, ಥರಾವರಿ ಚರ್ಮರೋಗಕ್ಕೆ, ನರಶೂಲೆ, ಉರಿ ಮೂತ್ರಕ್ಕೆ, ಸಂದು ನೋವಿಗೆ, ಸರ್ಪ ಸುತ್ತಿಗೆ, ಅಗ್ರ ದೋಷಕ್ಕೆ, ಮಕ್ಕಳ ಲಿವರ್‌ ಸಮಸ್ಯೆಗೆ, ಸಂತಾನದ ಭಾಗ್ಯಕ್ಕೂ ಔಷಧ ನೀಡುತ್ತಾರೆ. 

ಕಲ್ಲಕೈ ಕುಟುಂಬ ಅಜ್ಜಜ್ಜ ಗಣಪಯ್ಯ ಹೆಗಡೆ ಕಾಲದಿಂದ ಔಷಧ ನೀಡುತ್ತಿದ್ದರು. ಇವರಿಗೆ ಯಾವುದೋ ಸಾಧು ಒಬ್ಬರು ಔಷಧದ ಉಪದೇಶ ಮಾಡಿದ್ದರಂತೆ.  ಈ ಕುಟುಂಬದ ಮೂರನೇ ತಲೆಮಾರು ದಿ. ವಿಶ್ವೇಶ್ವರ ಹೆಗಡೆ ಪ್ರತಿ ವಾರ ನೂರಾರು ಜನರಿಗೆ ಔಷಧ ನೀಡಿದ್ದರು. ಯಾರಿಗೆ ಯಾವ ರೋಗ ಇದೆ, ಯಾವ ಔಷಧ ಏನು ಕೊಟ್ಟಿದ್ದೆ, ಪರಿಣಾಮ ಏನಾಗಿತ್ತು ಎಂಬುದನ್ನೂ ದಾಖಲಿಸಿ ಇಟ್ಟಿದ್ದರು.   ಅವರ ಜೀವಿತದ ಅವಧಿಯಲ್ಲಿ 30 ಸಾವಿರಕ್ಕೂ ಅಧಿಕ ಜನರಿಗೆ ಔಷಧ ನೀಡಿದ್ದರಂತೆ. ಈಗ ಅವರ ಮಕ್ಕಳಾದ ಸತೀಶ ಹೆಗಡೆ, ರಮೇಶ ಹೆಗಡೆ ಅಜ್ಜ, ಅಪ್ಪ ಹೇಳಿಕೊಟ್ಟ ಔಷಧ ಪದ್ದತಿಯನ್ನು ಮುಂದುವರಿಸುತ್ತಿದ್ದಾರೆ. ಈ ಕುಟುಂಬದ ಔಷಧ ಸೇವೆಗೆ ಸ್ವರ್ಣವಲ್ಲೀ ಸಂಸ್ಥಾನ, ಬಂಗಾರಮಕ್ಕಿ ಮಠ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಅರಸಿ ಬಂದಿವೆ. 

Advertisement

ಚಿಕಿತ್ಸೆ ದಿನ- 
ಗುರುವಾರ, ಭಾನುವಾರ
 ಮಾಹಿತಿಗೆ –  08384- 272207

ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next