Advertisement

ನೀರ್ಚಾಲು: ವಿದ್ಯಾರ್ಥಿಗಳಿಗೆ ಪ್ರಕೃತಿ ಸಂರಕ್ಷಣೆ ಪಾಠ

11:03 PM Aug 26, 2019 | Sriram |

ಬದಿಯಡ್ಕ: ಈ ಪ್ರಪಂಚದಲ್ಲಿ ಬದುಕುವ ಪ್ರತಿಯೊಂದು ಜೀವದ ತುಡಿತ ವನ್ನರಿತು ಸ್ಪಂದಿಸುವ ಪ್ರಕೃತಿಯನ್ನು ಪ್ರೀತಿಸುವ ಮೂಲಕ ಮಾತ್ರ ಎದುರಾ ಗುತ್ತಿರುವ ದುರಂತಗಳನ್ನು ತಡೆಯಲು ಸಾಧ್ಯ. ನಮ್ಮ ಕುಟುಂಬ ನಮಗೆಷ್ಟು ಪ್ರಿಯವೋ ಅಷ್ಟೇ ಮಹತ್ವ ಪ್ರಕೃತಿಗೂ ಇದೆ. ಕಾಲಾಕಾಲಕ್ಕೆ ನಮಗೇನು ಬೇಕೆಂಬುದನ್ನು ನಾವು ಕೇಳದೆಯೇ ಕೊಡುವ ಕರುಣಾಮಯಿ ಭೂ ತಾಯಿಯ ನೆರಳಲ್ಲಿ ಬದುಕುವಾಗಲೂ ಅವಳನ್ನು ನೋಯಿಸುವ ಬದಲು ಪೋಷಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಹಾಗಾಗಿ ನಾವು ನಶಿಸಿದ ಕಾಡುಗಳ ಸ್ಥಳದಲ್ಲಿ ಪುನಃ ಸಸಿ ನೆಟ್ಟು ಕಾಡು ಬೆಳೆಸುವ ಮೂಲಕ ಪ್ರಕೃತಿಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳೋಣ ಎಂಬ ಸಂಬೋಧ ಪ್ರತಿಷ್ಠಾನದ ಮುಖ್ಯ ಸಾಧಕ ಆಧ್ಯಾತ್ಮಾನಂದ ಸರಸ್ವತಿ ಸ್ವಾಮೀಜಿ ಯವರ ಮಾತುಗಳು ವಾಸ್ತವಿಕವಾಗಿ ಅನುಸರಿಸಲೇ ಬೇಕಾದ ಸಂದೇಶ. ಏರುತ್ತಿರುವ ತಾಪಮಾನದಿಂದ ಹೊತ್ತಿ ಉರಿಯುವ ಧರೆಯನ್ನು ತಂಪಾಗಿಸಲು,ತನ್ನ ಮೇಲಿನ ದೌರ್ಜನ್ಯಕ್ಕೆ ವಿರುದ್ಧ ವಾಗೊ ಬರಗಾಲ,ಪ್ರಳಯದ ಮೂಲಕ ಪ್ರತಿಭಟಿಸುವ ಇಳೆಯನ್ನು ಸಮತೋಲನಕ್ಕೆ ತರುವಲ್ಲಿ ಪ್ರಕೃತಿ ಸಂರಕ್ಷಣೆಯ ಜವಾಬ್ದಾರಿ ನಮ್ಮ ಮೇಲಿದೆ. ನಾವೇ ನಾಶ ಪ ಡಿಸಿದ ಕಾಡನ್ನು ನಾವೇ ಬೆಳೆಸದಿದ್ದಲ್ಲಿ ನಾಳೆ ಈ ಭೂಮಿ ಬರಡಾಗುವ ಕಾಲ ದೂರವಿಲ್ಲ.

Advertisement

ಕಳೆದೆರಡು ವರ್ಷಗಳಿಂದ ಕೇರಳವು ತೀವ್ರವಾದ ನೆರೆ ಸಮಸ್ಯೆ ಎದುರಿಸುತ್ತಿದ್ದು ಮೇಲಿಂದ ಮೇಲೆ ದುರಂತಗಳು ನಡೆಯುತ್ತಿವೆ. ಹಿಂದೆ ಇಂತಹ ಪರಿಸ್ಥಿತಿಯಿರಲಿಲ್ಲ. ಮನುಷ್ಯನ ಪ್ರಕೃತಿ ಮೇಲಿನ ಸತತವಾದ ದೌರ್ಜನ್ಯವೇ ಇದಕ್ಕೆ ಕಾರಣ. ಆದರೆ ಅರಣ್ಯನಾಶ, ಹೊಲಗದ್ದೆಗಳನ್ನು ಕಟ್ಟಡ ನಿರ್ಮಾಣಕ್ಕಾಗಿ ಬಳಸುವುದು, ನೀರಿನ ಮೂಲವಾದ ಕೊಳ, ಜಲಾಶಯಗಳತ್ತ ತೋರುವ ಅವಗಣನೆಯೇ ಇದಕ್ಕೆ ಕಾರಣ ಎಂಬುವುದನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಭೂಮಿಯ ಮೇಲೆ ಪ್ಲಾಸ್ಟಿಕ್‌ಗಳೇ ತುಂಬಿ ನೀರು ಇಂಗುವುದು ಕಡಿಮೆಯಾದಂತೆ ಅಂತರ್ಜಲ ಮಟ್ಟ ಕುಸಿಯುತ್ತದೆ. ಇದರಿಂದ ಭೂಮಿಯ ತಾಪಮಾನ ಗಣನೀಯವಾಗಿ ಹೆಚ್ಚುತ್ತಿದೆ. ಒಂದೆಡೆ ಬರ, ಇನ್ನೊಂದೆಡೆ ನೆರೆ ನಮ್ಮನ್ನು ಎತ್ತ ಕೊಂಡೊಯ್ಯುತ್ತಿದೆ ಎಂಬುವುದನ್ನು ಚಿಂತಿಸಿ ಕಾರ್ಯಪ್ರವೃತ್ತರಾದರೆ ಮಾತ್ರ ಈ ಭೂಮಿಯಲ್ಲಿ ಬದುಕಲು ಸಾಧ್ಯ. ನಾವು ಸƒಷ್ಠಿಸಿದ ಸಮಸ್ಯೆಗಳಿಗೆ ನಾವೇ ಪರಿಹಾರ ಕಾಣುವತ್ತ ಯೋಚಿಸಬೇಕಾಗಿದೆ ಎಂಬ ಸ್ವಾಮೀಜಿಯ ಮಾತುಗಳು ಎಚ್ಚರಿಕೆಯ ಕರೆಗಂಟೆ ಎನ್ನಬಹುದು.

ಸಂಬೋಧ‌ ಪ್ರತಿಷ್ಠಾನ ಹಸಿರು ಸಾಮರಸ್ಯದ ಪರಿಕಲ್ಪನೆಯೊಂದಿಗೆ “ಕಾಡು ಬೆಳೆಸು’ ಯೋಜನೆಯನ್ನು 2017ರಲ್ಲಿ ಕಾಸರಗೋಡಿನ ಚೆ„ತನ್ಯ ವಿದ್ಯಾಲಯದಲ್ಲಿ ಕಂದಾಯ ಸಚಿವ ಚಂದ್ರಶೇಖರನ್‌ ಉದ್ಘಾಟಿಸಿದ್ದರು. ಆ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳು ನಾಮಮಾತ್ರವಾಗಬಾರದು ಎಂದಿದ್ದರು. ಇದಕ್ಕೆ ಪೂರಕವಾಗಿ ಕನಿಷ್ಠ ಮೂರು ವರ್ಷ ಗಳ ಕಾಲ ಸಸ್ಯಗಳ ಬೆಳವಣಿಗೆಯ ಮೇಲೆ ನಿಗಾ ಇಡುತ್ತೇವೆ. ಆ ಬಳಿಕ ಅವುಗಳು ತಮ್ಮಷ್ಟಕ್ಕೇ ಬೆಳೆಯಬಲ್ಲವು ಎಂದು ಸ್ವಾಮಿ ಭರವಸೆ ನೀಡಿದ್ದರು. ಮಾತ್ರವಲ್ಲದೆ ರಾಜ್ಯಾ ದ್ಯಂತ ಇಂತಹ ಕಾರ್ಯಕ್ರಮಗಳನ್ನು ನಡೆಸುವುದಾಗಿ ಹೇಳಿದ್ದರು. 2018ರಲ್ಲಿ ಎರಡನೇ ಹಂತದ ಕಾರ್ಯಕ್ರಮ ನಡೆಸಿ ಹಿಂದಿನ ವರ್ಷ ನೆಟ್ಟ ಗಿಡಗಳ ಸ್ಥಿತಿಯನ್ನು ಅವಲೋಕಿಸುವುದರೊಮದಿಗೆ ಈ ಬಾರಿ 27 ದಿನಗಳ ಯಾತ್ರೆ ಕೈಗೊಂಡ ಸ್ವಾಮೀಜಿ ಮತ್ತು ತಂಡದವರು ಈಗಾಗಲೇ 52 ಸಸಿಗಳನ್ನು ನೆಟ್ಟಿರುವುದಲ್ಲದೆ ನೂರಾರು ಬೀಜಗಳನ್ನು ಹೂತುಹಾಕಿದ್ದಾರೆ. ಈ ವರ್ಷ ಪುಟ್ಟ ಪುಟ್ಟ ಪೊದೆಗಳಾಗಿ ಬೆಳೆಯುವ ಗಿಡಗಳನ್ನು ಹೆಚ್ಚು ಹೆಚ್ಚು ನೆಟ್ಟು ಬೆಳೆಸುವತ್ತ ಗಮನ ಹರಿಸಿದ್ದು ಇದು ಭೂಮಿಯಲ್ಲಿ ನೀರಿಂಗಲು ಅನುಕೂಲಕರ ಎನ್ನಲಾಗಿದೆ.

ಸಂಬೋಧ ಪ್ರತಿಷ್ಠಾನದ ಹಸಿರು ಸಾಮ ರಸ್ಯ ಯೋಜನೆಯು ತಿರುವನಂತಪುರಂ ನಿಂದ ಮೊದಲ್ಗೊಂಡು ಕಾಸರಗೋಡಿನ ವರೆಗೆ ಹಬ್ಬಿರುರಿವುದು ಶುಭಸೂಚಕ. ಪಾಳು ಭೂಮಿಯಲ್ಲಿ ಕಾಡು ಬೆಳೆಸುವ ಮೂಲಕ ಮಣ್ಣಿನ ಫಲವತ್ತತೆ ಹೆಚ್ಚಿಸುವುದು, ಸೂಕ್ತ ಸಮಯದಲ್ಲಿ ಸರಿಯಾದ ಮಳೆ ಬೆಳೆ ಬರುವಂತೆ ಮಾಡುವುದು ಇದರ ಉದ್ದೇಶ. ಖಾಲಿ ಜಾಗದಲ್ಲಿ ಗಿಡ ಬಳ್ಳಿಗಳನ್ನು ನೆಟ್ಟು ಅದರ ಪೋಷಣೆಯನ್ನು ಶಾಲಾ ವಿದ್ಯಾರ್ಥಿಗಳಿಗೆ, ಸಂಘ ಸಂಸ್ಥೆಗಳಿಗೆ ಒಪ್ಪಿಸುವುದು ಮಾತ್ರವಲ್ಲದೆ ಅವುಗಳ ಬೆಳವಣಿಗೆಯ ಮೇಲೆ ನಿಗಾ ಇರಿಸುವುದು ಈ ಪ್ರತಿಷ್ಠಾನದ ವಿಶೇಷತೆ.

ವೈವಿಧ್ಯಮಯ ಮಳೆ
ತುಲಾಮಾಸದಲ್ಲಿ ತೂಕದ ಮಳೆ ಸುರಿದರೆ ವೃಶ್ಚಿಕದಲ್ಲಿ ತಂಪು ತಂಪಾದ ಅನುಭವ ನೀಡುವ ಮಳೆ ಸುರಿಯುತ್ತದೆ. ಧನು ಮಕರ ಮಂಜಿನ ಮಳೆಯಾದರೆ ಕುಂಭ ಮೀನ ಮಾಸಗಳಲ್ಲಿ ಆವಿಯು ಮಳೆಯಂತೆ ಕಾಣುತ್ತದೆ. ಮೇಷ ಮಾಸದಲ್ಲಿ ಹೊಸ ಮಳೆ ಪ್ರಾರಂಭವಾದರೆ ವೃಷಭದಲ್ಲಿ ಹೊಸವರ್ಷದ ಹರ್ಷವಿರುತ್ತದೆ. ಆಷಾಢ ಮಾಸವು ವಿಕೃತಿಯಿಂದೊಡಗೂಡಿದ ಮಳೆ ಸುರಿಸುತ್ತದೆ. ಹೀಗೆ ಪ್ರತಿ ತಿಂಗಳೂ ಒಂದೊಂದು ರೀತಿಯ ಮಳೆ ಸುರಿದು ಮಣ್ಣನ್ನು ಸ್ನೇಹದಿಂದ, ಸತ್ವಮಯವಾದ, ಫಲವತ್ತಾದ ಸಂಪತ್ತಾಗಿಸುತ್ತದೆ. ಆದರೆ ಈಗ ಸುರಿವ ಮಳೆಯ ತಾಳವೂ ತಪ್ಪಿದೆ. ಅದಕ್ಕೆ ಕಾರಣ ಪ್ರಕೃತಿಯಲ್ಲಾದ ಬದಲಾವಣೆ. ಕಾಡು ಕಣ್ಮರೆಯಾಗಿ ಆಕಾಶದೆತ್ತರ ಬೆಳೆದುನಿಲ್ಲುವ ಕಟ್ಟಡಗಳು, ಮೈಚಾಚುವ ರಸ್ತೆಗಳು, ಕೈಗಾರಿಕಾ ಕೇಂದ್ರಗಳಿಂದ ಉಂಟಾಗುವ ಮಾಲಿನ್ಯ ಮುಂತಾದ ವ್ಯವಸ್ಥೆ ಸƒಷ್ಟಿಸಿದ ಸಮಸ್ಯೆಗಳು ಒಂದೆರಡಲ್ಲ.

Advertisement

ಸ್ಥಳ ಮೀಸಲು
ಪುಟ್ಟ ಪೊದೆಗಳು, ಹಿರಿದಾಗಿ ಬೆಳೆಯಬಲ್ಲ ಗಿಡಗಳು ಹಾಗೂ ಆ ಮರಗಳನ್ನು ಬಳಸಿ ಹಬ್ಬುವ ಬಳ್ಳಿಗಳನ್ನು ನೆಟ್ಟು ಕಾಡು ಬೆಳೆಸಲು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೆ„ಯರ್‌ ಸೆಕೆಂಡರಿ ಶಾಲಾ ಪರಿಸರದಲ್ಲಿ 25ಸೆಂಟ್ಸ್‌ ಸ್ಥಳವನ್ನು ಮೀಸಲಿರಿಸಲಾಯಿತು. ಸ್ಕೌಟ್‌ ಆಂಡ್‌ ಗೆ„ಡ್‌ ವಿದ್ಯಾರ್ಥಿಗಳು ನೆಟ್ಟ ಗಿಡಗಳ ಸಂರಕ್ಷಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಮಕ್ಕಳಲ್ಲಿ ಪಕೃತಿ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಈ ಕಾರ್ಯದಲ್ಲಿ ಕೈಜೋಡಿಸಿದ್ದೇವೆ. ಗಿಡ ನೆಡುವುದಷ್ಟೇ ಅದರ ಸಂರಕ್ಷಣೆಯ ಜವಾಬ್ದಾರಿಯೂ ನಮ್ಮ ಮೇಲಿದೆ. ಒಂದು ದಿನದ ಉತ್ಸಾಹ ವರ್ಷ ಪೂರ್ತಿ ಜೀವಂತವಾಗಿದ್ದಾಲೆ ಈ ಗಿಡಗಳು ಹುಲುಸಾಗಿ ಬೆಳೆದು ಉದ್ದೇಶ ಈಡೇರಲು ಸಾಧ್ಯ.
– ಆಧ್ಯಾತ್ಮಾನಂದ ಸರಸ್ವತಿ ಸ್ವಾಮೀಜಿ

ಭೂ ಋಣ ತೀರಿಸಿ
ನಮ್ಮ ಭೂರಮೆಗೆ ಆಗುತ್ತಿರುವ ಅನ್ಯಾಯಕ್ಕೆ ತಡೆ ಒಡ್ಡದಿದ್ದರೆ ಮನುಷ್ಯ ಸಂಕುಲವೇ ನಾಶವಾಗಲಿದೆ. ಆದುದ ರಿಂದ ಪ್ರತಿಯೊಬ್ಬರೂ ಈ ಮಾತೆಯ ಋಣವನ್ನು ತೀರಿಸುವತ್ತ ಚಿತ್ತ ಹರಿಸಬೇಕು.
– ಜಯದೇವ ಖಂಡಿಗೆ

-  ಅಖೀಲೇಶ್‌ ನಗುಮುಗಂ

Advertisement

Udayavani is now on Telegram. Click here to join our channel and stay updated with the latest news.

Next