Advertisement

Natural Ice Cream ಸಂಸ್ಥಾಪಕ ರಘುನಂದನ್‌ ಕಾಮತ್‌ ಇನ್ನಿಲ್ಲ

01:11 AM May 18, 2024 | Team Udayavani |

ಮಂಗಳೂರು: ನ್ಯಾಚುರಲ್‌ ಐಸ್‌ ಕ್ರೀಂ ಸಂಸ್ಥಾಪಕ ರಘುನಂದನ್‌ ಕಾಮತ್‌ (70) ಅವರು ಮೇ 17ರಂದು ಮುಂಬಯಿಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

Advertisement

ರಘುನಂದನ್‌ ಅವರು 1954ರಲ್ಲಿ ಮೂಲ್ಕಿಯಲ್ಲಿ ಬಡ ಕುಟಂಬವೊಂದರಲ್ಲಿ ಜನಿಸಿದ್ದರು. ಕಾಮತ್‌ ಅವರ ತಂದೆ ಹಣ್ಣಿನ ವ್ಯಾಪಾರಿಯಾಗಿದ್ದರು. ಕಾಮತ್‌ ಅವರು ತಮ್ಮ 15ನೇ ವಯಸ್ಸಿನಲ್ಲಿ ಅಣ್ಣನ ಹೊಟೇಲ್‌ಗೆ ಕೆಲಸಕ್ಕೆಂದು ಮುಂಬಯಿಗೆ ತೆರಳಿದ್ದರು.

ಅನಂತರ ಹೊಟೇಲ್‌ ಉದ್ಯಮ ಆರಂಭಿಸಿ ಹಣ್ಣುಗಳಿಂದಲೇ ಐಸ್‌ಕ್ರೀಂ ತಯಾರಿಸಿ ಜನಪ್ರಿಯರಾದರು. ಮುಂಬಯಿಯಲ್ಲಿ 1984ರಲ್ಲಿ ನ್ಯಾಚುರಲ್ಸ್‌ ಐಸ್‌ ಕ್ರೀಂ ಆರಂಭಿಸಿದ್ದರು. ಅದು ದೇಶಾದ್ಯಂತ ಜನಪ್ರಿಯವಾಗಿ ದೊಡ್ಡ ಉದ್ಯಮವಾಗಿ ಬೆಳೆದಿದೆ.

40ಕ್ಕೂ ಅಧಿಕ ನಗರಗಳಲ್ಲಿ 140ಕ್ಕೂ ಅಧಿಕ ಮಳಿಗೆಗಳನ್ನು ನ್ಯಾಚುರಲ್‌ ಐಸ್‌ಕ್ರೀಂ ತನ್ನ ಔಟ್‌ಲೆಟ್‌ಗಳನ್ನು ಹೊಂದಿದ್ದು 400 ಕೋಟಿ ರೂ.ಗಳಿಗೂ ಅಧಿಕ ವ್ಯವಹಾರ ನಡೆಸುತ್ತಿದೆ. ಕಾಮತ್‌ ಅವರು ಸ್ವತಃ ಕುಂಡಗಳಲ್ಲಿ ಹಣ್ಣುಗಳನ್ನು ಬೆಳೆಸುವ ಆಸಕ್ತಿ ಹೊಂದಿದ್ದು ಮಾವು, ಗೇರು, ಹಲಸು ಸಹಿತ ಹಲವಾರು ಹಣ್ಣಿನ ಗಿಡಗಳನ್ನು ಮನೆಯ ತಾರಸಿಯಲ್ಲಿ ಸ್ವತಃ ಬೆಳೆಸಿ ಯಶಸ್ಸು ಕಂಡಿದ್ದರು. ಐಸ್‌ಕ್ರೀಂಗಳಲ್ಲಿ ಕೃತಕ ಸಾಮಗ್ರಿಗಳು ಇಲ್ಲದ ಸ್ಥಳೀಯ ಸ್ವಾದದ ಬ್ರ್ಯಾಂಡ್‌ಗಳನ್ನು ಸೃಷ್ಟಿಸಿ ಅಪಾರ ಜನಪ್ರಿಯತೆಯನ್ನು ಗಳಿಸಿದ್ದರು.

ಐಸ್‌ಕ್ರೀಂ ಮ್ಯಾನ್‌
ಆಫ್ ಇಂಡಿಯಾ
ನಾಲ್ಕು ದಶಕಗಳ ಹಿಂದೆ ಐಸ್‌ ಕ್ರೀಂ ಎನ್ನುವುದು ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು. ಕಾಮತ್‌ ಅವರು ಐಸ್‌ಕ್ರೀಂ ಅನ್ನು ಜಯಪ್ರಿಯಗೊಳಿಸಿ ಎಲ್ಲರಿಗೂ ಲಭ್ಯವಾಗುವಂತೆ ಮತ್ತು ಅದು ಸಮಾರಂಭಗಳಲ್ಲಿ ಒಂದು ಅಗತ್ಯದ ಪದಾರ್ಥ ಎಂಬಷ್ಟರ ಮಟ್ಟಿಗೆ ಬೆಳೆಸಿದರು.

Advertisement

ಐಸ್‌ಕ್ರೀಂನ ಗುಣಮಟ್ಟ ಮತ್ತು ಗ್ರಾಹಕರ ಸಂತೃಪ್ತಿಗೆ ಪ್ರಥಮ ಆದ್ಯತೆ ನೀಡಿದ್ದರು. ಅವರು ಹಲಸು, ಸೀಯಾಳ, ಗೇರುಹಣ್ಣು, ಇತ್ಯಾದಿ ಸ್ಥಳೀಯವಾದ ರುಚಿಗಳನ್ನು ಪರಿಚಯಿಸಿದ್ದರು. ಅವರು ಐಸ್‌ಕ್ರೀಂ ಮ್ಯಾನ್‌ ಆಫ್ ಇಂಡಿಯಾ ಎಂದೇ ಪ್ರಸಿದ್ಧಿ ಗಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next