Advertisement
ಪ್ರವಾಹ ಪೀಡಿತ ವಿಜಯಪುರ ಜಿಲ್ಲೆಗೆ ಪರಿಹಾರ ನೀಡಿಲ್ಲ ಎಂದು ಸರ್ಕಾರದ ವಿರುದ್ಧ ಆರೋಪ ಮಾಡಿದ್ದ ಮಾಜಿ ಸಚಿವ ಎಂ.ಬಿ. ಪಾಟೀಲ್, ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮೂಲಕ ಹೇಳಿದ್ದಾರೆ.
Related Articles
-ಆರ್.ಅಶೋಕ್, ಕಂದಾಯ ಸಚಿವ
Advertisement
ಅಣೆಕಟ್ಟು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಕುಣಿಗಲ್: ತಾಲೂಕಿನ ಮಾರ್ಕೋನಹಳ್ಳಿ ಜಲಾಶಯದ ತಾತ್ಕಾಲಿಕ ಗೇಟ್‌ನ ಸರಪಳಿ ತುಂಡಾಗಿರುವುದರಿಂದ ಜಲಾಶಯಕ್ಕೆ ಅಪಾಯವಿದೆ ಎಂದು ಸಾಮಾಜಿಕ ಜಾಲತಾಣ ಹಾಗೂ ಕೆಲ ಮಾಧ್ಯಗಳಲ್ಲಿ ವರದಿ ಹಬ್ಬಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸೋಮವಾರ ಅಣೆಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು. ಮಾರ್ಕೋನಹಳ್ಳಿ ಜಲಾಶಯದ ನೀರು ಹೊರ ಹಾಕುವ ತಾತ್ಕಾಲಿಕ ಗೇಟ್‌ನ ಸರಪಳಿ ಆಪರೇಟ್ ಮಾಡುವ ವೇಳೆ ತುಂಡಾಗಿದೆ. ಇದರಿಂದ ಜಲಾಶಯದ ಅಣೆಕಟ್ಟೆಗೆ ಯಾವುದೇ ಅಪಾಯವಿಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಪ್ರವಾಹ ಲೆಕ್ಕಿಸದೆ ನದಿಗಿಳಿದು ಪಿಂಡ ಪ್ರದಾನ
ಶ್ರೀರಂಗಪಟ್ಟಣ: ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದರೂ ವಿವಿಧೆಡೆ ಪಿಂಡ ಪ್ರದಾನ ನಡೆಸಲಾಗುತ್ತಿದೆ. ಕಾವೇರಿ ಸಂಗಮ ಹಾಗೂ ಗೋಸಾಯಿಘಾಟ್ ಬಳಿ ಪಟ್ಟಣದ ಸ್ಥಳೀಯರು ಪಿಂಡ ಪ್ರದಾನ ಹಾಗೂ ಅಸ್ಥಿ ವಿಸರ್ಜನೆಗೆ ಅರ್ಚಕರನ್ನು ನೇಮಿಸಿ ಹೊರಗಡೆಯಿಂದ ಬಂದ ಜನರನ್ನು ಕರೆಸಿಕೊಂಡು ತುಂಬಿ ಹರಿಯುವ ನದಿ ತೀರದಲ್ಲಿ ವೈದಿಕ ಪೂಜೆ ನೆರವೇರಿಸುತ್ತಿರುವುದು ಮುಂದುವರಿದಿದೆ. ವೈದಿಕ ಮಾಡುವ ಅರ್ಚಕರೂ ನದಿ ತೀರದಲ್ಲಿ ಕುಳಿತು ಪೂಜೆ ನಡೆಸುತ್ತಿದ್ದಾರೆ. ಜತೆಗೆ ಅಸ್ಥಿ ವಿಸರ್ಜನೆ, ಪಿಂಡ ಪ್ರದಾನ ಮಾಡುವ ವೇಳೆ ನದಿಗೆ ಇಳಿದಾಗ ಆಕಸ್ಮಿಕ ಕಾಲು ಜಾರಿ ನದಿಯಲ್ಲಿ ಕೊಚ್ಚಿ ಹೋದರೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಕಾಫಿನಾಡಲ್ಲಿ ಜನಜೀವನ ಅಸ್ತವ್ಯಸ್ತ
ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮಳೆ ಅಬ್ಬರಿಸುತ್ತಿದ್ದು, ದಿನವಿಡೀ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ನಿರಂತರ ಮಳೆ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಭಾನುವಾರ, ಸೋಮವಾರ ದಿನವಿಡೀ ಸುರಿದ ಮಳೆಯಿಂದ ಕಳಸ ತಾಲೂಕು ನೆಲ್ಲಿಬೀಡು ಸೇತುವೆ ಮುಳುಗಡೆಯಾಗಿದೆ. ಕಳಸ, ಕುದುರೆಮುಖ, ಮಂಗಳೂರು ಸಂಚಾರ ಬಂದ್ ಆಗಿದ್ದು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಪರದಾಡಬೇಕಾಯಿತು. ಕಳಸ, ಕುದುರೆಮುಖ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಭದ್ರಾ ನದಿ ನೀರಿನ ಮಟ್ಟ ಏರಿಕೆಯಾಗಿದ್ದು, ಕಳಸ ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಟಾಳೆ ಸೇತುವೆ ನದಿ ನೀರಿನಲ್ಲಿ ಮುಳುಗಿದೆ. ಇದುವರೆಗೂ ಮೂರು ಬಾರಿ ಸೇತುವೆ ಮುಳುಗಿದ್ದು, ಸೋಮವಾರ ಅಪಾಯವನ್ನೂ ಲೆಕ್ಕಿಸದೆ ಮುಳುಗಿರುವ ಸೇತುವೆ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಸಂಚರಿಸಿದ್ದು, ಚಾಲಕನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.