ಹೊಸದಿಲ್ಲಿ: “ಕೊರೊನೋತ್ತರ ಸಂದರ್ಭದಲ್ಲಿ ಚೇತರಿಕೆಯ ಹಂತದಲ್ಲಿರುವ ಎಲ್ಲ ದೇಶಗಳ ಆರ್ಥಿಕ ಪರಿಸ್ಥಿತಿಯು ಪುನಃ ಸಹಜ ಸ್ಥಿತಿಗೆ ಮರಳಬೇಕಾದರೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಡುವೆ ಸಹಕಾರ, ಸಮನ್ವಯತೆ ಹಾಗೂ ವಿಶ್ವದ ಆರ್ಥಿಕತೆಯನ್ನು ಒಂದೇ ಸದುದ್ದೇಶ ದಿಂದ ನಿರ್ವಹಿಸಲು ಕೈ ಜೋಡಿಸ ಬೇಕು” ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.
ಬ್ರಿಕ್ಸ್ ರಾಷ್ಟ್ರಗಳ ವರ್ಚುವಲ್ ಶೃಂಗಸಭೆಯ ಎರಡನೇ ದಿನವಾದ ಗುರುವಾರ ಸಮ್ಮೇಳನವನ್ನು ಉದ್ದೇಶಿಸಿ ಮೋದಿ ಮಾತನಾಡಿದರು.
“ಇತ್ತೀ ಚಿನ ವರ್ಷಗಳಲ್ಲಿ ಬ್ರಿಕ್ಸ್ ರಾಷ್ಟ್ರಗಳ ಒಗಟ್ಟು ಪರಿಣಾಮಕಾರಿ ಯಾಗಿ ಕೆಲಸ ಮಾಡುತ್ತಿದೆ. ಬ್ರಿಕ್ಸ್ ವತಿಯಿಂದ ಸ್ಥಾಪಿಸಲಾಗಿರುವ ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್‌ಗೆ (ಎನ್‌ಡಿಬಿ) ಹೆಚ್ಚಿನ ಸಂಖ್ಯೆಯಲ್ಲಿ ಠೇವಣಿದಾರರು ಆಗಮಿಸುತ್ತಿದ್ದಾರೆ. ಇದು ನಿಜಕ್ಕೂ ಸಂತಸದ ವಿಚಾರ” ಎಂದು ಮೋದಿ ಹೇಳಿದರು.