ಕುಷ್ಟಗಿ: ಕೃಷ್ಣಾ ಕಣಿವೆ ಯೋಜನೆಗಳ ರಾಷ್ಟ್ರೀಕರಣಗೊಳಿಸುವ ರಾಜ್ಯ ಸರ್ಕಾರದ ಪ್ರಸ್ತಾಪಕ್ಕೆ ಪ್ರಸಕ್ತ ಕೇಂದ್ರ ಬಜೆಟ್ ಹುಸಿಗೊಳಿಸಿರುವುದು ನಿರಾಶೆಯಾಗಿದೆ ಎಂದು ಕಾಂಗ್ರೆಸ್ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಬೇಸರ ವ್ಯಕ್ತಪಡಿಸಿದರು.
ಬಜೆಟ್ ಕುರಿತು ಮಾತನಾಡಿದ ಅವರು, ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ನೀರಾಸವಾಗಿತ್ತೇ ಹೊರತು ಮತ್ತೇನಿಲ್ಲ. ಈ ಬಜೆಟ್ ನಲ್ಲಿ ತುಂಗಾ ಮೇಲ್ದಂಡೆ ಯೋಜನೆಗಳಿಗೆ 5,302 ಕೋಟಿರೂ. ಪ್ರಸ್ತಾಪ ಸಮಾದಾನ ತಂದಿದೆ. ಆದರೆ ಅದೇ ರೀತಿ ಕೃಷ್ಣ ಕಣಿವೆಯ ಯೋಜನೆಯನ್ನು ರಾಷ್ಟ್ರೀಕರಣಗೊಳಿಸುವ ಬಗ್ಗೆ ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಕಳಿಸಿದರೂ ಕೇಂದ್ರ ಗಮನ ಹರಿಸಿಲ್ಲ. ಬಜೆಟ್ ಮಂಡಿಸಬೇಕು ಮಂಡಿಸಿದ್ದಾರೆ ಅಷ್ಟೇ ಎಂದರು.