Advertisement

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ರಾಷ್ಟ್ರೀಯ ಯೋಗ ಮಹೋತ್ಸವಕ್ಕೆ ಡಾ.ಹೆಗ್ಗಡೆ ಚಾಲನೆ

03:06 PM Mar 29, 2022 | Team Udayavani |

ಬೆಳ್ತಂಗಡಿ: ಭಾರತ ಸರಕಾರದ ಆಯುಷ್ ಮಂತ್ರಾಲಯದ ಮೊರಾರ್ಜಿ ದೇಸಾಯಿ ಯೋಗ ಸಂಸ್ಥೆ ಮೂಲಕ ಯೋಗದ ನಾನಾ ಆಯಾಮಗಳನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸುವ ದೃಷ್ಟಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಾ.29 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತಮಹೋತ್ಸವದಲ್ಲಿ ಯೋಗ ಮಹೋತ್ಸವಕ್ಕೆ ಚಾಲನೆ ನೀಡಿದರು.

Advertisement

ಬೆಳ್ತಂಗಡಿ ತಾಲೂಕಿನ ಅನೇಕ ಕಡೆಗಳಲ್ಲಿ ಒಂದು ವಾರದ ಯೋಗ ಶಿಬಿರವನ್ನು ನಡೆಸಿ ಮಂಗಳವಾರ 500ಕ್ಕೂ ಮಿಕ್ಕಿ ಶಿಬಿರಾಥಿಗಳನ್ನು ಕ್ಷೇತ್ರಕ್ಕೆ ಕರೆಸಿ ಯೋಗ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ಮುಖ್ಯ ಅತಿಥಿಗಳಾಗಿ ಬ್ಯಾಂಕ್ ಆಫ್ ಬರೋಡಾ ಮಂಗಳೂರು ವಲಯ ಮುಖ್ಯಸ್ಥೆ ಗಾಯತ್ರಿ ಆರ್., ಮಂಗಳೂರು ವಲಯದ ಉಪ ಮುಖ್ಯಸ್ಥರಾದ ಆರ್.ಗೋಪಾಲ ಕೃಷ್ಣ, ಎಸ್.ಡಿ.ಎಂ.ಸಿ.ಎನ್.ವೈ.ಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರಶಾಂತ ಶೆಟ್ಟಿ, ಯೋಗ ನಿರ್ದೇಶಕ ಡಾ.ಐ.ಶಶಿಕಾಂತ್ ಜೈನ್, ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತರಾಮ ತೋಳ್ಪಡಿತ್ತಾಯ, ಯೋಗ ವಿಭಾಗದ ಡೀನ್ ಶಿವಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

ಪ್ರಧಾನಿಯವರ ಆಶಯದಂತೆ ಜೂನ್ 21ರಂದು ವಿಶ್ವದಾದ್ಯಂತ ನಡೆಯುವ ವಿಶ್ವ ಯೋಗ ದಿನಾಚರಣೆಗೆ ಪೂರ್ವಭಾವಿಯಾಗಿ 100 ದಿನಗಳ ಮುಂಚಿತವಾಗಿ ಭಾರತದ 100 ಅಯ್ದ ಅಗ್ರಗಣ್ಯ ಯೋಗ ಸಂಸ್ಥೆಗಳಿಂದ ದೇಶದ 100 ಐತಿಹಾಸಿಕ ಸ್ಥಳಗಳಲ್ಲಿ ಒಂದು ದಿನದ ಯೋಗ ಪ್ರಾತ್ಯಕ್ಷತೆ ಮತ್ತು ಯೋಗಕ್ಕೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿಗಳನ್ನು ನೀಡುವ ತಜ್ಞರಿಂದ ಕಾರ್ಯಗಾರವನ್ನು ರಾಷ್ಟ್ರೀಯ ಯೋಗ ಮಹೋತ್ಸವದ ಮೂಲಕ ಯೋಗದೊಂದಿಗೆ ದೇಶೀಯ ಐತಿಹಾಸಿಕ ಸ್ಥಳಗಳನ್ನು ಪರಿಚಯ ಮಾಡಿಸುವುದು ಇದರ ಒಂದು ಉದ್ದೇಶವಾಗಿದೆ.

“ಯೋಗದಿಂದ ರೋಗ ಮುಕ್ತ” ಅನ್ನುವ ಶೀರ್ಷಿಕೆಯೊಂದಿಗೆ ಯೋಗದ ಮೂಲಕ ನೆಮ್ಮದಿ, ಸೌಖ್ಯ, ಕ್ಷೇಮ ನೀಡುವುದರ ಮೂಲಕ ಸರ್ವರಿಗೂ ಆರೋಗ್ಯ ನೀಡಿ ವಿಶ್ವಶಾಂತಿಗೋಸ್ಕರ 2022ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ 2022ರ ಧ್ಯೇಯವನ್ನು ಸಕಾರಗೊಳಿಸುವುದು ಇದರ ಉದ್ದೇಶವಾಗಿದೆ.

Advertisement

ಬೆಳ್ತಂಗಡಿ ತಾಲೂಕಿನ ಸುಮಾರು 15 ಕ್ಕೂ ಮಿಕ್ಕಿ ಸ್ಥಳಗಳಲ್ಲಿ ಮಾರ್ಚ್ 23ರಿಂದ  ಎಪ್ರಿಲ್ 03ರ ವರೆಗೆ ಯೋಗಾಭ್ಯಾಸ ನಡೆಯಲಿರುವುದು. ಆ ಪ್ರಯುಕ್ತ ಇಂದು ಧರ್ಮಸ್ಥಳದಲ್ಲಿ ಯೋಗ ಪ್ರಾತ್ಯಕ್ಷತೆ ಮತ್ತು ಕಾರ್ಯಗಾರವನ್ನು ಆಯೋಜಿಸಿದ್ದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಯವರು ಯೋಗದ ಮಹತ್ವವನ್ನು ಶಿಬಿರಾರ್ಥಿಗಳಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next