Advertisement

ಇಂದು ರಾಷ್ಟ್ರೀಯ ಮತದಾರರ ದಿನ: ಯುವ ಮತದಾರರೇ ನಿರ್ಣಾಯಕ?

11:07 PM Jan 24, 2023 | Team Udayavani |

ಬೆಂಗಳೂರು: ಚುನಾವಣೆಯಲ್ಲಿ ಯುವ ಮತದಾರರನ್ನು ಗಮನದಲ್ಲಿಟ್ಟುಕೊಂಡು ಭಾರತದ ಚುನಾವಣ ಆಯೋಗ ಈ ವರ್ಷದ ರಾಷ್ಟ್ರೀಯ ಮತದಾರರ ದಿನಾಚರಣೆಗೆ “ಮತದಾನಕ್ಕಿಂತ ಇನ್ನೊಂದಿಲ್ಲ; ನಾನು ಖಚಿತವಾಗಿ ಮತದಾನ ಮಾಡುವೆ’ ಎಂದು ಘೋಷಣೆ ನೀಡಿದೆ.

Advertisement

ರಾಜ್ಯದಲ್ಲಿ ಯುವ ಮತದಾರರ ಸಂಖ್ಯೆ 7.07 ಲಕ್ಷ ಇದ್ದು, ಆ ಪ್ರಕಾರ ಮುಂದಿನ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಯುವ ಮತದಾರರು ನಿರ್ಣಾಯಕ ಪಾತ್ರ ವಹಿಸಿಲಿದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಮಾಹಿತಿಯಂತೆ 2023ರ ಮತದಾರರ ಅಂತಿಮ ಪಟ್ಟಿಯಲ್ಲಿ ಯುವ ಮತದಾರರ (18-19 ವರ್ಷ) ಸಂಖ್ಯೆ 7,07,488 ಇದೆ. ಕೊಡಗು, ಚಾಮರಾಜನಗರ ಜಿಲ್ಲೆಗಳು ಹೊರತಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ಯುವ ಮತದಾರರ ಸಂಖ್ಯೆ ಸರಾಸರಿ 14ರಿಂದ 15 ಸಾವಿರ ಇದೆ. ಬೆಳಗಾವಿ, ಬೆಂಗಳೂರು ನಗರ ಜಿಲ್ಲೆ (ಬಿಬಿಎಂಪಿ ಸೇರಿ), ತುಮಕೂರು, ಚಿತ್ರದುರ್ಗ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಯುವ ಮತದಾರರ ಸಂಖ್ಯೆ ಹೆಚ್ಚಿದೆ. ಒಟ್ಟು ಯುವ ಮತದಾರರ ಪೈಕಿ 3.91 ಲಕ್ಷ ಯುಕರು ಮತ್ತು 3.15 ಯುವತಿಯರು ಇದ್ದಾರೆ.

ಬೆಳಗಾವಿಯಲ್ಲಿ ಅತಿ ಹೆಚ್ಚು 54,820, ಬೆಂಗಳೂರು ನಗರ ಜಿಲ್ಲೆ (ಬಿಬಿಎಂಪಿ ಸೇರಿ) 54,787, ತುಮಕೂರು 34,628, ಚಿತ್ರದುರ್ಗ 31,050 ಹಾಗೂ ಮೈಸೂರು ಜಿಲ್ಲೆ 30,650 ಮತದಾರರು ಇದ್ದಾರೆ. ಕೊಡಗು ಜಿಲ್ಲೆಯಲ್ಲಿ 5,806 ಹಾಗೂ ಚಾಮರಾಜನಗರ 9,244 ಅತಿ ಕಡಿಮೆ ಯುವ ಮತದಾರರು ಇದ್ದಾರೆ.

ಜಿಲ್ಲೆ ಯುವ ಮತದಾರರು
ಬೆಂಗಳೂರು ನಗರ 54,787
(ಬಿಬಿಎಂಪಿ ಸೇರಿ)
ಬಾಗಲಕೋಟೆ 24,533
ಬೆಂಗಳೂರು ಗ್ರಾ. 15,542
ಬೆಳಗಾವಿ 54,820
ಬಳ್ಳಾರಿ 26,721
ಬೀದರ್‌ 19,358
ವಿಜಯಪುರ 27,522
ಚಾಮರಾಜನಗರ 9,244
ಚಿಕ್ಕಬಳ್ಳಾಪುರ 19,895
ಚಿಕ್ಕಮಗಳೂರು 10,268
ಚಿತ್ರದುರ್ಗ 31,050
ದಕ್ಷಿಣ ಕನ್ನಡ 25,259
ದಾವಣಗೆರೆ 23,139
ಧಾರವಾಡ 20,029
ಗದಗ 15,204
ಕಲಬುರಗಿ 25,662
ಹಾಸನ 15,232
ಹಾವೇರಿ 27,045
ಕೊಡಗು 5,806
ಕೋಲಾರ 20,487
ಕೊಪ್ಪಳ 23,002
ಮಂಡ್ಯ 19,822
ಮೈಸೂರು 30,650
ರಾಯಚೂರು 22,905
ರಾಮನಗರ 13,858
ಶಿವಮೊಗ್ಗ 22,185
ತುಮಕೂರು 34,628
ಉಡುಪಿ 13,816
ಉತ್ತರಕನ್ನಡ 20,912
ವಿಜಯನಗರ 21,280
ಯಾದಗಿರಿ 12,527

Advertisement

ಇನ್ನೂ ಹೆಚ್ಚಾಗಲಿದ್ದಾರೆ
ಈ ತಿಂಗಳ 5ರಂದು ಪ್ರಕಟಿಸಲಾದ ರಾಜ್ಯದ 221 ವಿಧಾನಸಭಾ ಕ್ಷೇತ್ರಗಳ ಮತ್ತು ಜ. 15ರಂದು ಪ್ರಕಟಿಸಲಾದ ಬಿಬಿಎಂಪಿ ವ್ಯಾಪ್ತಿಯ ಚಿಕ್ಕಪೇಟೆ, ಶಿವಾಜಿನಗರ ಹಾಗೂ ಮಹದೇವಪುರ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯಂತೆ ಯುವ ಮತದಾರರು 7.07 ಲಕ್ಷ ಇದ್ದಾರೆ. ಆದರೆ, 2004ರ ಜೀವಂತ ಜನನ ಪ್ರಮಾಣ 9.50 ಲಕ್ಷ ಇತ್ತು. ಅವರು ಈಗ 18 ವರ್ಷ ತಲುಪಿದ್ದಾರೆ. ಆದರೆ, ಅಂತಿಮ ಮತದಾರರ ಪಟ್ಟಿಯಲ್ಲಿ 7 ಲಕ್ಷ ಮಂದಿ ಮಾತ್ರ ಸೇರ್ಪಡೆಯಾಗಿದ್ದಾರೆ. ಉಳಿದ 2.50 ಲಕ್ಷ ಮಂದಿಯನ್ನು ಗುರುತಿಸಲು ವಿಶೇಷ ಆದ್ಯತೆ ವಹಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಇಂದು ರಾಷ್ಟ್ರೀಯ ಮತದಾರರ ದಿನಾಚರಣೆ
ಭಾರತದ ಚುನಾವಣ ಆಯೋಗ ಸ್ಥಾಪನೆಯಾದ ದಿನ ಅಂದರೆ 1950ರ ಜ. 25ರಂದು ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಲಾಗುತ್ತದೆ. ಇದು 2011ರಲ್ಲಿ ಮೊದಲ ಬಾರಿಗೆ ಚಾಲ್ತಿಗೆ ಬಂತು. ಈವರೆಗೆ 12 ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಲಾಗಿದ್ದು, ಈಗ 13ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಲಾಗುತ್ತಿದೆ. ಈ ಬಾರಿ “ಮತದಾನಕ್ಕಿಂತ ಇನ್ನೊಂದಿಲ್ಲ ನಾನು ಖಚಿತವಾಗಿ ಮತದಾನ ಮಾಡುವೆ’ ಎಂಬ ಘೋಷಣೆಯನ್ನು ನೀಡಲಾಗಿದೆ. ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಬೆಂಗಳೂರಿನ ಪುರಭವನದಲ್ಲಿ ಬುಧವಾರ ರಾಜ್ಯಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next