Advertisement

ಮಲ್ಪೆಯಲ್ಲಿ ರಾಷ್ಟ ಮಟ್ಟದ ಈಜು ಸ್ಪರ್ಧೆ; ಸ್ಥಳೀಯರಿಗೆ ಪ್ರೋತ್ಸಾಹ ದೊರಕಿದೆ: ರಘುಪತಿ ಭಟ್

06:52 PM Jan 21, 2023 | Team Udayavani |

ಮಲ್ಪೆ : ಉಡುಪಿ ಜಿಲ್ಲೆಯಲ್ಲಿ ಪ್ರತಿಭಾವಂತ ಈಜು ಪಟುಗಳಿದ್ದು, ರಾಷ್ಟ ಮಟ್ಟ ಈಜು ಸ್ಪರ್ಧೆ ಯನ್ನು ಮಲ್ಪೆಯಲ್ಲಿ ಆಯೋಜಿಸುವ ಮೂಲಕ ಸ್ಥಳಿಯ ಪ್ರತಿಭೆಗಳಿ ಗೆ ಪ್ರೋತ್ಸಾಹ ದೊರೆಯಲಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.

Advertisement

ಶನಿವಾರ ಮಲ್ಪೆ ಬೀಚ್ ನಲ್ಲಿ ಜಿಲ್ಲಾಡಳಿತ, ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾ, ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ರಜತ ಉಡುಪಿ- ಬೀಚ್ ಉತ್ಸವ ಪ್ರಯುಕ್ತ ನಡೆದ ರಾಷ್ಟ್ರ ಮಟ್ಟದ ಓಪನ್ ವಾಟರ್ ಸ್ವಿಮ್ಮಿಂಗ್ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಫೆಬ್ರವರಿ ತಿಂಗಳಲ್ಲಿ , ಮಲ್ಪೆ ಯಲ್ಲಿ ರಾಷ್ಟ್ರ ಮಟ್ಟದ ಸ್ಟಡಿ ಅಪ್ ಪೆಡಲಿಂಗ್, ಕಯಾಕಿಂಗ್ ಸ್ಪರ್ಧೆ ಕೂಡಾ ನಡೆಯಲಿದೆ. ಮಲ್ಪೆಯಲ್ಲಿ ಎಲ್ಲಾ ರೀತಿಯ ವಾಟರ್ ಸ್ಪೋರ್ಟ್ಸ್ ಗೆ ಅವಕಾಶ ಇದೆ. ಏಷ್ಯನ್ ಈಜು ಚಾಂಪಿಯನ್ ಶಿಪ್ ಗು ಎಲ್ಲಾ ಅವಕಾಶ ಇದೆ ಎಂದರು.

ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಎಸ್ ಪಿ ಹಾಕೆ ಅಕ್ಷಯ್ ಮಚಿಂದ್ರ, ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್ ಅಧ್ಯಕ್ಷ ಗೋಪಾಲ್ ಹೊಸೂರು, ಕೆನರಾ ಬ್ಯಾಂಕ್ ಪ್ರಬಂಧಕ ರಾಮಾ ನಾಯಕ್, ಪೌರಾಯುಕ್ತ ಉದಯ್ ಕುಮಾರ್ ಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಷನ್ ಕುಮಾರ್ ಶೆಟ್ಟಿ ಇದ್ದರು. ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್ ನ ಸತೀಶ್ ಸ್ವಾಗತಿಸಿ ನಿರೂಪಿಸಿದರು.

ಉತ್ಸವದಲ್ಲಿ ಕ್ಲಿಪ್ ಡೈವ್ , ಸ್ಕೂಬಾ ಡೈವ್ , ವಿವಿಧ ಸಾಹಸ ಕ್ರೀಡೆ ಮತ್ತು ಚಿತ್ರ ಕಲಾ ಸ್ಪರ್ಧೆಗಳು ನಡೆದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next