ಬೆಂಗಳೂರು: ರಾಷ್ಟ್ರೀಯ ಅಂಕಿ ಅಂಶಗಳ ದಿನದ ಅಂಗವಾಗಿ ಶಾಸಕ ಪ್ರಿಯಾಂಕ್ ಖರ್ಗೆ ದೇಶದಲ್ಲಿನ ನಿರುದ್ಯೋಗ, ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ಪ್ರಮಾಣ, ರೂಪಾಯಿ ವಿರುದ್ಧ ಡಾಲರ್ ಮೌಲ್ಯ ಕುಸಿತ ಹೀಗೆ ವಿವಿಧ ಅಂಕಿ ಅಂಶಗಳ ಕುರಿತು ಮಾತನಾಡಿದ್ದಾರೆ.
ಈ ಕುರಿತು ಕೂ ಮಾಡಿರುವ ಅವರು ಕೆಲವು ಪ್ರಮುಖ ವಿಷಯಗಳ ಸರ್ಕಾರಿ ದತ್ತಾಂಶಗಳನ್ನು ಕ್ರೂಡೀಕರಿಸಿ ದೇಶದ ಸಧ್ಯದ ಸ್ಥಿತಿ ಕುರಿತು ಬರೆದುಕೊಂಡಿದ್ದಾರೆ.
ರಾಷ್ಟ್ರದಲ್ಲಿ ದೌರ್ಜನ್ಯಕ್ಕೊಳಗಾದವರ ಸಂಖ್ಯೆ 2019 ರಿಂದ 2020 ರವರೆಗೆ ಶೇ.10ರಷ್ಟು ಹೆಚ್ಚಳವಾಗಿರುವುದು ಸೇರಿದಂತೆ ಹೂಡಿಕೆ, ಆರ್ಥಿಕ ಬೆಳವಣಿಗೆ, ಎಫ್‌ಡಿಐ ಬೆಳವಣಿಗೆ, ಕೃಷಿ ಆದಾಯದ ಇಳಿಮುಖವಾಗಿರುವುದು, ವ್ಯವಸಾಯ-ವಿರೋಧಿ ಕಾನೂನು ಪ್ರತಿಭಟನೆಗಳ ಸಂದರ್ಭದಲ್ಲಿ 702 ರೈತರು ಸಾವನ್ನಪ್ಪಿದ್ದಾರೆ ಎನ್ನುವ ಕುರಿತು ಮಾತನಾಡಿದ್ದಾರೆ.
ರಾಷ್ಟ್ರ ಗಮನ ಹರಿಸಬೇಕಾಗಿರುವ ಅಗತ್ಯವಿರುವ ಕೆಲವು ಅಂಕಿಅಂಶಗಳು ಎಂದು ಈ ಕೆಳಗಿನ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
Related Articles
ನಿರುದ್ಯೋಗ ದರ: 45 ವರ್ಷಗಳಲ್ಲಿ ಅತ್ಯಧಿಕ
ಭಾರತದಲ್ಲಿ 100 ಕೋಟಿ ಜನರು ಕೆಲಸಕ್ಕೆ ಯೋಗ್ಯರಾಗಿದ್ದಾರೆ. ಆದರೆ ಅವರಲ್ಲಿ ಶೇ. 6೦ ರಷ್ಟು ಜನರು ಉದ್ಯೋಗವನ್ನೇ ಹುಡುಕುತ್ತಿಲ್ಲ
ಕಳೆದ 3 ವರ್ಷಗಳಲ್ಲಿ 2 ಕೋಟಿಗೂ ಹೆಚ್ಚು ಮಹಿಳೆಯರು ಉದ್ಯೋಗದಿಂದ ಹಿಂದೆ ಸರಿದಿದ್ದಾರೆ.
ರೂಪಾಯಿ ವಿರುದ್ಧ ಡಾಲರ್ ಮೌಲ್ಯ: ಸಾರ್ವಕಾಲಿಕ ಕಡಿಮೆ
ಜಿಎಸ್ ಟಿ ಕೊರತೆ: 1 ಲಕ್ಷ ಕೋಟಿ
ಕೃಷಿ ಆದಾಯದ ಬೆಳವಣಿಗೆ: 14 ವರ್ಷಗಳಲ್ಲಿ ಭಾರೀ ಇಳಿಮುಖ
ಸುಮಾರು 8 ಲಕ್ಷ ಮಂದಿ ಭಾರತದ ಪೌರತ್ವವನ್ನು ತ್ಯಜಿಸಿದ್ದಾರೆ.
ಹೊಸ ಹೂಡಿಕೆಗಳು: 14 ವರ್ಷಗಳಲ್ಲಿ ಭಾರೀ ಇಳಿಮುಖ
ಆರ್ಥಿಕ ಬೆಳವಣಿಗೆ: 5 ವರ್ಷಗಳಲ್ಲಿ ಭಾರೀ ಇಳಿಮುಖ
ಎಫ್‌ಡಿಐ ಬೆಳವಣಿಗೆ: 5 ವರ್ಷಗಳಲ್ಲಿ ಭಾರೀ ಇಳಿಮುಖ
– ಪ್ರಿಯಾಂಕ್ ಖರ್ಗೆ (@ಪ್ರಿಯಾಂಕ್_ಖರ್ಗೆ) 29 June 2022
ರಕ್ಷಣಾ ಬಜೆಟ್ ಹಂಚಿಕೆ: 57 ವರ್ಷಗಳಲ್ಲಿ ಭಾರೀ ಇಳಿಮುಖ
ದೌರ್ಜನ್ಯಗಳು: 2019 ರಿಂದ 2020 ರವರೆಗೆ 10% ಹೆಚ್ಚಳ
ಚಿಲ್ಲರೆ ಹಣದುಬ್ಬರ: 8 ವರ್ಷಗಳಲ್ಲಿ ಗರಿಷ್ಠ
ರೈತ ವಿರೋಧಿ ಕಾನೂನು ಪ್ರತಿಭಟನೆ ಸಂದರ್ಭದಲ್ಲಿ 702 ರೈತರನ್ನು ಹತ್ಯೆ ಮಾಡಲಾಗಿದೆ.